Saturday, September 2, 2017

ಮಂಕುತಿಮ್ಮ (DVG)

ಇಳೆಯಿಂದ ಮೊಳಕೆ ಒಗೆ ಒಂದು ತಮಟೆಗಲಿಲ್ಲ ಫಲಮಾಗು ಒಂದು ತುತ್ತೂರಿ ದನಿಯಿಲ್ಲ ಬೆಳಕೀವ ಸೂರ್ಯ ಚಂದ್ರರದೊಂದು ಸದ್ದಿಲ್ಲ ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ

ಅದ್ಯಾಕ ಅನಸ್ತದ?

ಅದ್ಯಾಕ ಗಂಟಲು ಕಟ್ಟಕೊಂಡ
ಕಣ್ಣಾಗ ನೀರ ಬರ್ತದ ಕೆಲವೊಮ್ಮೆ
ನಮಗ ಏನೂ ಸಂಬಂಧ ಇರದಿರೋ
ವಿಷಯ ಕಂಡಾಗ ಕೂಡ

ಅದ್ಯಾಕ ಅನಸ್ತದ ಆ ವಿಷಯ
ನಮ್ಮದ ಏನೂ ಅಂತ

ಅದ್ಯಾಕ ಅನಸ್ತದ ಈ ನೋವು
ಹೊಸಾದಲ್ಲ ಹಳೇದು ಅಂತ

ಅದ್ಯಾಕ ಅನಸ್ತದ ನಾವು ಎಂದೂ
ಕಂಡು ಕೇಳಿರದ ಜಾಗ ನಮ್ಮದ ಏನೂ ಅಂತ

ಅದ್ಯಾಕ ಅನಸ್ತದ ಹತ್ತಾರು ವರ್ಷ
ಕಳೆದರೂ ಇವರು ನಮ್ಮವರಲ್ಲ ಅಂತ

ಅದ್ಯಾಕ ಅನಸ್ತದ ಹತ್ತು ನಿಮಿಷದಾಗ
ಇವರೇ ನಮ್ಮವರು ಅಂತ

ದೇವರಾಣೆ ಗೊತ್ತಿಲ್ಲ ಮಾರಾಯ
ಇದೆಲ್ಲ ಯಾಕ ಹಿಂಗ  ಅಂತ

ಅದರ ಹಿಂಗೆಲ್ಲ ಆದಾಗ
ಮಾತ್ರ ಅನಸ್ತದ
ಇಂದು ನಿನ್ನೆಯವರು
ಅಲ್ಲ ನಾವು  ಅಂತ

ತಿರಗೇವೆ ನಾವೆಲ್ಲ ಈ
ಹುಟ್ಟು ಸಾವಿನ ಚಕ್ರದಾಗ
ಲೆಕ್ಕ ಇಲ್ಲದಷ್ಟು ಸಾರಿ ಅಂತ

ಅದ್ಯಾವುದೋ ಜನ್ಮದಾಗ
ಕಟ್ಟಗೊಂಡ ಅನುಭವ
ಅದೇನೋ ಕಂಡಾಗ ಎದ್ದ
ಕುಣಿತದ ಏನೂ ಅಂತ

ಆದರೇನು ಅನಸಿದೆಲ್ಲಾ
ಖರೆ ಇರಬೇಕು
ಅಂತ ಏನಿಲ್ಲ ಅಲ್ಲಾ?
ಹೌದು ಹಂಗಾದರ
ಕಾರಣ ಇಲ್ಲದೆ
ಗಂಟಲು ಕಟ್ಟಿದ್ದ್ಯಾಕ ?
ಕಣ್ಣೀರ ಬಂದಿದ್ಯಾಕ?
ಪ್ರೀತಿ ಉಕ್ಕಿದ್ಯಾಕ?
ಖುಷಿ ಆದದ್ಡ್ಯಾಕ?
 ಬುಡ ಬುಡ್ಕಿ ಬಾಬಾ

Friday, September 1, 2017

ಖುಷಿ

ಖುಷಿ ಒಂದು ಪಾತರಗಿತ್ತಿ ಇದ್ದಂಗೊ
ಹಿಡಿತೀನಿ ಅದನ  ಅಂತ
ಓಡಬ್ಯಾಡೋ ಅದರ ಹಿಂದ
ಸುಮ್ಮನ ನಿಂತು ಬಿಡು ನಿಂತಲ್ಲೇ ನೀನು
ಬಂದ್ರ ಬಂದ ಕೂಡಬಹುದು ನಿನ್ನ
ಕೈ ಮ್ಯಾಲ ಅದು ಒಂದೆರಡು ಘಳಗಿ
ಕುಂತಾಗ ಚಪ್ಪರಿಸಿಬಿಡು ಆ ಎರಡು ಘಳಗಿನ
ಯಾಕಂದ್ರ ಬರುದಿಲ್ಲೊ ಹಂಗ ಅವೂ
ನಮ್ಮ ಕಡೆ ನಮಗ ಬೇಕ ಬೇಕಾದಾಗ
 ಬುಡ ಬುಡ್ಕಿ ಬಾಬಾ

ಬೇಂದ್ರೆ ಅಜ್ಜಾನ ನೆನಪ ಆತು ರಸ್ಕಿನ ಬಾಂಡ್ ಈ  ಮಾತ ಓದಿ
https://www.goodreads.com/quotes/864670-hapiness-is-as-exclusive-as-a-butterfly-and-you-must

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...