Thursday, March 23, 2017

ವ್ಯರ್ಥ

ನಿಮ್ಮ ಕಾವ್ಯ ಬರೀ
ಸಮಯ ವ್ಯರ್ಥ
ಎಂದ ಅವಳು
ಸಲಾಕೆ ಬೇಡಿಗಳಿಂದ
ಮನಕೆ ಬೇಲಿ ಹಾಕಿ
ತಾನೇ ಕಾವಲು ನಿಂತಳು
ಆದರೂ ಕಾವ್ಯಗಳು
ಬರುವುದು ನಿಲ್ಲಲಿಲ್ಲ
ಕಾವ್ಯ ಹರಿಯುವುದು
ಹೊರಗಿಂದ ಒಳಗಲ್ಲ
ಒಳಗಿಂದ ಹೊರಗೆ
 ಬುಡ ಬುಡ್ಕಿ ಬಾಬಾ

ಮಾಯಾಮೃಗ

ಆನಂದ
ಸದಾ
ಭಾಸವಾಗಿದ್ದು
ಭೂತ ಕಾಲದ
ಯಾವುದೋ
ಕೊನೆಯಲ್ಲಿ
ಅಥವಾ
ಭವಿಷ್ಯದ
ಯಾವುದೋ
ತುದಿಯಲ್ಲಿ
ಮಾತ್ರ
ವರ್ತಮಾನದಲಿ
ಅದು
ಎಂದೆಂದೂ
ಸಿಕ್ಕಂತೆ ಅನಿಸಿ
ಮಾಯವಾಗುವ
ಮಾಯಾಮೃಗ
 ಬುಡ ಬುಡ್ಕಿ ಬಾಬಾ

Sunday, March 12, 2017

ರಾಮಾಯಣ ಮಹಾಭಾರತ



ರಾಮಾಯಣದಲಿ ಅಧ್ಯಾಯ ಏಳು
ಮಹಾಭಾರತದಲಿ ಅಧ್ಯಾಯ ಹಧಿನೆಂಟು || ೧ ||

ಇವಳು ಹುಟ್ಟಿದ್ದು ಏಳರಂದು
ನಾನು ಹುಟ್ಟಿದ್ದು ಹಧಿನೆಂಟರಂದು || ೨ ||

ಅದಕೇ ಏನೋ ನನ್ನ ಇವಳ ನಡುವೆ  
ಸದಾ ಕಾಲ ನಡೆಯುತ್ತಿರುತ್ತೆ ರಾಮಾಯಣ ಮಹಾಭಾರತ || ೩ ||

Saturday, March 11, 2017

ಒಂಚೂರು

ಸದಾ ಬಡ ಬಡಿಸುವ ಬುಡ ಬುಡ್ಕಿ ಬಾಬಾ
ಅದೇಕೋ ಸುಮ್ಮನಾಗಿದ್ದನಂತೆ
ಅದ ತಾಳಲಾರದೆ  ಅದ್ಯಾರೋ ಛೇಡಿಸಿದರಂತೆ
ಏ ಬುಡ ಬುಡ್ಕಿ ಬಾಬಾ  ಹೇಳೋ ದುಃಖ ಆನಂದದ
ನಡುವಿನ ಅಂತರ ಎಷ್ಟೋ ಎಂದು || ೧ ||

ಆದ ಕೇಳಿ ಅದೆಷ್ಟೋ ಲೆಕ್ಕಾಚಾರ ಮಾಡಿ ಅಂದನಂತೆ
ಭಾರೀ ಒಂಚೂರು
ಅದ್ಹೇಗೆ ಹೇಳು ಅಂದದಕ್ಕೆ
ಹೇಳಿದನಂತೆ ಮಾಡಿ ನೋಡು ಕೆಳಗಿದನು ಒಂಚೂರು || ೨ ||

ತಿನ್ನುವುದು ಮಾಡಿ ಕಡಿಮೆ ಒಂಚೂರು
ಮಾಡುವ ಕೆಲಸ ಮಾಡಿ ಹೆಚ್ಚು ಒಂಚೂರು || ೩ ||

ಬೇರೆಯವರ ತಪ್ಪು ನೋಡುವುದು ಮಾಡಿ ಕಡಿಮೆ ಒಂಚೂರು
ನಿಮ್ಮ ತಪ್ಪುಗಳ ನೋಡುವುದು ಮಾಡಿ ಹೆಚ್ಚು ಒಂಚೂರು || ೪ ||

ಸಿಟ್ಟು ಮಾಡುವುದು ಮಾಡಿ ಕಡಿಮೆ ಒಂಚೂರು
ಪ್ರೀತಿ ಮಾಡುವುದನು ಮಾಡಿ ಹೆಚ್ಚು ಒಂಚೂರು || ೪ ||

ಬೇಕುಗಳನು ಮಾಡಿ ಕಡಿಮೆ ಒಂಚೂರು
ಬೇಡ ಅನ್ನುವುದನು ಮಾಡಿ ಹೆಚ್ಚು ಒಂಚೂರು || ೪ ||

ಬೇರೆಯವರಿಂದ ನಮಗೇನು ಅನ್ನುವುದನು ಮಾಡಿ ಕಡಿಮೆ ಒಂಚೂರು
ನಮ್ಮಿಂದ ಬೇರೆಯವರಿಗೇನು ಎಂಬುದನು ಮಾಡಿ ಹೆಚ್ಚು ಒಂಚೂರು || ೪ ||

ತಗೆದುಕೊಳ್ಳುವದನು ಮಾಡಿ ಕಡಿಮೆ ಒಂಚೂರು
ಕೊಡುವದನು ಮಾಡಿ ಹೆಚ್ಚು ಒಂಚೂರು || ೫ ||

ಇಲ್ಲದರ ಬಗ್ಗೆ ಗೊಣಗಾಟ ಮಾಡಿ ಕಡಿಮೆ ಒಂಚೂರು
ಇದ್ದದ್ದರ ಬಗ್ಗೆ ಕೃತಜ್ಞತೆ  ಮಾಡಿ ಹೆಚ್ಚು ಒಂಚೂರು || ೬ ||

ಸೇಡು ಇಟ್ಟುಕೊಳ್ಳುವದನು ಮಾಡಿ ಕಡಿಮೆ ಒಂಚೂರು
ಕ್ಷಮೆ ಮಾಡುವುದನು ಮಾಡಿ ಹೆಚ್ಚು ಒಂಚೂರು || ೭ ||

ಸ್ವಾರ್ಥದ ಚಿಂತನೆ ಮಾಡಿ ಕಡಿಮೆ ಒಂಚೂರು
ಪರಹಿತದ ಚಿಂತನೆ ಮಾಡಿ ಹೆಚ್ಚು ಒಂಚೂರು || ೮ ||

ಎಲ್ಲರ ಬಗ್ಗೆ ಸಂದೇಹಗಳ ಮಾಡಿ ಕಡಿಮೆ ಒಂಚೂರು
ಎಲ್ಲರ ಬಗ್ಗೆ ವಿಶ್ವಾಸವಾ ಮಾಡಿ ಹೆಚ್ಚು ಒಂಚೂರು || ೯ ||

ಕೆಲಸ ಮಾಡುವಾಗ ಇಷ್ಟು ಸಾಕು ಅನ್ನುವುದನು ಮಾಡಿ ಕಡಿಮೆ ಒಂಚೂರು
ಕೆಲಸ ಸರಿಯಾಗಲು ಇನ್ನೂ ಒಂದು ಹೆಜ್ಜೆ ಹೋಗುವದನು ಮಾಡಿ ಹೆಚ್ಚು ಒಂಚೂರು || ೧೦||

ಕೆಲಸ ಮಾಡುವಾಗ ಇಷ್ಟು ಸಾಕು ಅನ್ನುವುದನು ಮಾಡಿ ಕಡಿಮೆ ಒಂಚೂರು
ಕೆಲಸ ಸರಿಯಾಗಲು ಇನ್ನೂ ಒಂದು ಹೆಜ್ಜೆ ಹೋಗುವದನು ಮಾಡಿ ಹೆಚ್ಚು ಒಂಚೂರು || ೧೧ ||

ಸೇವೆ ಮಾಡಿಸಿಕೊಳ್ಳುವುದನು ಮಾಡಿ ಕಡಿಮೆ ಒಂಚೂರು
ಸೇವೆ ಮಾಡುವುದನು ಮಾಡಿ ಹೆಚ್ಚು ಒಂಚೂರು || ೧೨ ||


ಮಾರಬೇಕಂತೆ ಮಾರಬೇಕಂತೆ

ಮಾರಬೇಕಂತೆ ಮಾರಬೇಕಂತೆ
ಮಾರುವುದೇ ಹೊಸ
ಮಾನವ ಧರ್ಮವಂತೆ
ಮಾರಲಾಗದವರ  ಬಾಳು
ನಾಯಿ ಪಾಡಂತೆ
ಅದಕೇ ಮಾರಬೇಕಂತೆ  || ೧ ||

ಅವಶ್ಯಕತೆ ಇದ್ದವರಿಗೆ
ಇದ್ದ ಅವಶ್ಯಕತೆ
ಮೀರಿ ಮಾರಬೇಕಂತೆ
ಅವಶ್ಯಕತೆ ಇರದವರಿಗೆ
ಹುಸಿ ಅವಶ್ಯಕತೆ
ತೋರಿ ಮಾರಬೇಕಂತೆ || ೨ ||

ಚಿಕ್ಕ ಸಮಸ್ಯೆಗಳ
ದೊಡ್ಡದು  ಮಾಡಿ
ಇದರ ಸಮಾಧಾನ
ಬರೀ ನಮ್ಮ ಬಳಿ
ಇದೆ ಎಂದು ಹೇಳಿ
ಮಾರಬೇಕಂತೆ || ೩ ||

ನಮಗೆ ಬೇಡವೇ ಬೇಡ
ಎಂದು ಮಾರುದ್ದ ದೂರ
ನಿಂತವರ ವಿಧ ವಿಧ
ಉಚಿತ ಉಡುಗೊರೆಗಳ
ಆಮಿಷ ಒಡ್ಡಿ
ಮಾರಬೇಕಂತೆ || ೪ ||

ಮಾರಲಾಗದೆ ಜಾರಿ
ಬಿದ್ದರೆ ಯಾರು ಪಾರು
ಮಾಡುವರಿಲ್ಲಾ
ಎಂದುದು ಅರಿತು
ಎಚ್ಚರದಿಂದ
ಮಾರಬೇಕಂತೆ ಮಾರಬೇಕಂತೆ || ೫ ||


Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...