Sunday, December 24, 2017

ಅದೃಷ್ಟ

ಆತ ಹೊಸತೇನೋ
ಸಾಧಿಸಲು ಸೋತು
ಕಷ್ಟ ಪಡುವಾಗ
ಅವನಿಗೆ ಅದೃಷ್ಟವೇ
ಸರಿ ಇಲ್ಲ ಎನ್ನುವರು
ಆತನಿಗೆ ಯಶಸ್ಸು
ದೊರೆತಾಗ
ಅವನ ಹಾಗೆ
ನಮ್ಮ ಅದೃಷ್ಟ
ಇದ್ದಿದ್ದರೆ ನಾವು
ಗೆದ್ದಿರುತಿದ್ದೆವು ಎನ್ನುವರು
 ಬುಡ ಬುಡ್ಕಿ ಬಾಬಾ

Monday, December 18, 2017

ವಿಚಾರಗಳ ರೈಲು

ವಿಚಾರಗಳ ರೈಲು
ಹಳಿ ತಪ್ಪಿ ಹೋಗುತ್ತದೆ
ಆಗಾಗ ಅತ್ತಿತ್ತ ಅಲಿಯಲು
ಅವರಿವರ ನೋಡಿ ತಿಳಿಯಲು
ತಿಳಿದು ಚಪ್ಪಾಳೆ ಹಾಕಿ
ನೋಡು ನೀನು ಒಬ್ಬನಿದ್ದೀಯಾ
ಎಂದು ಒಂದಿಷ್ಟು ಹಳಿಯಲು || ೧ ||

ಮತ್ತೆ ಮರಳಿ ಬರುತ್ತದೆ
ಅದೇ ಹಳೇ ಹಳಿಗೆ
ಗೊತ್ತಿಲ್ಲದ ದಾರಿ
ಪ್ರತಿ ಕ್ಷಣ
ಬದಲಾಗುವ ಮಾರ್ಗಸೂಚಿಗಳು
ಮೈಲಿಗಲ್ಲುಗಳಿಲ್ಲ
ತಂಗುದಾಣಗಳಿಲ್ಲ
ಎಲ್ಲಿಯೂ ನಿಲ್ಲುವಂತಿಲ್ಲ
ನಿಂತರೂ ಇಳಿಯುವಂತಿಲ್ಲ || ೨ ||

ದೂರದ ದಾರಿ
ದಣಿಯುವಂತಿಲ್ಲ
ಗೊಣಗುವಂತಿಲ್ಲ
ನಾ ಒಂಟಿ ಎಂದು
ಹೇಳುವಂತಿಲ್ಲ
ಪಟ್ಟು ತಪ್ಪಿ
ನೆಲಕ್ಕೆ ಬಿದ್ದು
ಮಣ್ಣು ಮುಕ್ಕಿದರೂ
ಮೀಸೆ ಮಣ್ಣಾಗದಂತೆ
ಮತ್ತೆ ಮತ್ತೆ ಎದ್ದು
ಕಣ್ಣಿಗೆ ಕಾಣದ
ಹಳಿ ಮೇಲೆ
ಅನವರತ ಪಯಣ  || ೩ ||
 ಬುಡ ಬುಡ್ಕಿ ಬಾಬಾ

ವಿರಾಮ

ಚಳಿಗಾಲದ  ಚಳಿಗೆ
ನೆನಪು-ಕನಸುಗಳ
ಮೋಡದೊಳಗಿನ
ಭಾವಗಳ ನೀರೆಲ್ಲ
ಮಂಜುಗಡ್ಡೆ
ಅದಕೆ ಕಾವ್ಯದ
ಮಳಗೆ ಕೊಂಚ
ವಿರಾಮ
 ಬುಡ ಬುಡ್ಕಿ ಬಾಬಾ

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...