Tuesday, January 24, 2017

ಕಾಣಬೇಕಿದೆ

ಎಲ್ಲಿಂದಲೂ ಎಲ್ಲಿಗೂ ಹೋಗದ
ಯಾವದನ್ನೂ ಯಾವುದಕ್ಕೂ ಸೇರಿಸದ
ಒಳ ಹಾದಿ ಹಿಡಿದು
ಗುರುತಿಲ್ಲದ ಊರೊಂದು ತಲುಪಿ
ಹೆಸರಿಲ್ಲದ ರಸ್ತೆಯಲಿ
ಪರಿಚಯವಿಲ್ಲದ ಜನರಲ್ಲಿ
ನನಗರಿವಿಲ್ಲದೆ ಕಳೆದುಕೊಂಡು
ಕಾಣಬೇಕಿದೆ ನನ್ನನು ನಾನು

Sunday, January 22, 2017

ಆಯ್ಕೆ

ಪಾಲಕರೆ ನೆನಪಿಡೋಣ
ಇರಲಿಲ್ಲ ನಮ್ಮ ಮಕ್ಕಳಿಗೆ
ಆಯ್ಕೆ ಅವರೆಲ್ಲಿ ಹುಟ್ಟುವರೆಂದು
ಆದರೆ
ಅವರನು ಬೆಳೆಸೋಣ
ಅವರೊಡಗೂಡಿ ಬೆಳೆಯೋಣ
ಅವರೊಡನೆ ಬೆರೆಯೋಣ
ಹೀಗೆ
ಆಯ್ಕೆ ಇದ್ದಿದ್ದರೆ ನಾನು
ಇಲ್ಲೇ ಹುಟ್ಟುತಿದ್ದೆ  ಎಂದು 
ಅವರನ್ನುವ ಹಾಗೆ

ಬುಡ ಬುಡ್ಕಿ ಬಾಬಾ

Saturday, January 21, 2017

ಜೀವನದ ಆಯವ್ಯಯ

ಮಾಡಿದರೆ ಸಾಕೆ ಬರೀ
ದುಡ್ಡಿನ ಬಗ್ಗೆ ಲೆಕ್ಕಾಚಾರ
ದುಡ್ಡಿನ ಬಗ್ಗೆ ಯೋಜನೆ
ಮಾಡುವುದು ಬೇಡವೇ
ವಿನಿಯೋಗಿಸಿದ ಪ್ರತಿ ಉಸಿರಿನ ಲೆಕ್ಕಾಚಾರ
ನೆನಪಿಡಿ ಕೊನೆಗೆ ಲೆಕ್ಕ ಒಪ್ಪಿಸಬೇಕಾಗಿದ್ದು
ರೂಪಾಯಿ ಡಾಲರು ಪೌಂಡು ಯೆನ್ನುಗಳಲ್ಲಿ ಅಲ್ಲ
ಜೀವನದ ಆಯವ್ಯಯ ಒಪ್ಪಿಸಬೇಕಿದೆ
ನಾವು ವಿನಿಯೋಗಿಸಿದ ಪ್ರತಿ ಉಸಿರುಗಳಲ್ಲಿ
ಬುಡ ಬುಡ್ಕಿ ಬಾಬಾ

ಕೂಲಿಯಾಳು

ಹೇಳಿ ಯಾರು ಹೊತ್ತಿಲ್ಲ
ಭಾರಗಳನು
ಜೀವನದ ಪಯಣದಲಿ? || ೧ ||

ಎಲ್ಲರ ಚೀಲವು ಭಾರವೇ
ತುಂಬಿವೆ ಅವುಗಳಲಿ
ನಮ್ಮ ನೋವುಗಳ ಭಾರ
ನಮ್ಮ ಸೋಲುಗಳ ಭಾರ
ನಮ್ಮ ಭಯಗಳ ಭಾರ
ನಮ್ಮ ಆತಂಕಗಳ ಭಾರ
ನಮ್ಮದೇ ನ್ಯೂನತೆಗಳ ಭಾರ
ನಮ್ಮ ಆಸೆಗಳ ಭಾರ
ನಮ್ಮ ಮಹತ್ವಾಕಾ೦ಕ್ಷೆಗಳ ಭಾರ
ನಮ್ಮ ನಿಟ್ಟುರಿಸಿನ ಭಾರ
ನಮ್ಮ ಭ್ರಮೆಗಳ ಭಾರ
ನಮ್ಮ ನಂಬಿಕೆಗಳ ಭಾರ
ಅದೆಲ್ಲವ ಮೀರಿದ ಮಣಭಾರ
ನಾನು ನಾನೆಂಬ ಭಾರ || ೨ ||

ಅದೆಲ್ಲ ಇರಲಿ
ನಮ್ಮ ಈ ಭಾರಗಳ ಹೊತ್ತು
ಸಾಗಬೇಕಾದವರು ನಾವು
ಸಂಬಂಧಗಳಿರುವುದು
ಭಾರ ಹಂಚಿಕೊಳ್ಳಲು ಮಾತ್ರ
ಮಾಡದಿರೋಣ
ಸಂಬಂಧಗಳನು ನಮ್ಮ ಭಾರ
ಹೊರುವ ಕೂಲಿಯಾಳು || ೩ ||

Sunday, January 8, 2017

ಒಳ ರಸ್ತೆ

ಕರ ಕೊಟ್ಟು ನೈಸಾದ ರಸ್ತೆಯಲಿ
ಒಂದೆಡೆಯಿಂದ ಇನ್ನೊಂದೆಡೆಗೆ
ಬೇಗನೆ ತಲುಪಿದ್ದು ಸಾಕು || ೧ ||

ಎಲ್ಲಿಂದ ಆರಂಭವಾಗಿತ್ತೋ
ಅಲ್ಲಿಗೆ ತಿರುತಿರುಗಿ ಬಂದದ್ದು
ಸಾಕು ಆ ವರ್ತುಲ ರಸ್ತೆಯಲಿ || ೨ ||

ಬೇಕಾಗಿದೆ ಒಳ ರಸ್ತೆಗಳ ಪಯಣ
ಒಮ್ಮೆ ಹೊರಟರೆ ಮತ್ತೆಂದೂ
ಮರಳಿ ಬರದ ಕಾಲದ ಪರಿಧಿಯ
ದಾಟಿದ ಆ ಪಯಣ || ೩ ||
ಬುಡ ಬುಡ್ಕಿ ಬಾಬಾ

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...