Monday, February 29, 2016

ಮಾರ್ಜಾಲ ನ್ಯಾಯ

ತಕ್ಕಡಿಯಲಿ ತರಕಾರಿಗಳಂತೆ
ತಮ್ಮ ಜೀವನವನಿಟ್ಟು
ತೂಗಿ ನೋಡುವದನು
ರೂಡಿ
ಮಾಡಿಕೊಂಡಿರುತ್ತಾರೆ
ಕೆಲವರು || ೧ ||

ತಕ್ಕಡಿಯ ಒಂದು ತಟ್ಟೆಯಲಿ
ತಮ್ಮ ಜೀವನವನು
ಇನ್ನೊಂದು ತಟ್ಟೆಯಲಿ
ಬೇರೆಯವರ ಜೀವನವನಿಟ್ಟು
ತೂಕ ನೋಡಿ ಹೆಚ್ಚು ಕಡಿಮೆ ಮಾಡಿ
ಸರಿ ತೂಗುವ ತಾಕಲಾಟದಲ್ಲಿ
ತಲ್ಲೀನರಾಗಿರುತ್ತಾರೆ || ೨ ||

ಅದೆಂದಿಗೂ ಸರಿದೂಗದ
ಮಾರ್ಜಾಲ ನ್ಯಾಯದಂತೆ
ತಮಗೆ ತಾವೇ ಮೋಸ
ಮಾಡಿಕೊಳ್ಳುವ ಪ್ರಕ್ರಿಯೆ
ಎಂಬುದು ಅವರ
ಜೀವನವೆಲ್ಲ ಮುಗಿದು ಹೋಗುವವರೆಗೂ
ಅರಿವೆಗೆ ಬರುವುದೇ ಇಲ್ಲ || ೩ ||

ಕಾಲುದಾರಿ

ದಾರಿಯಲ್ಲಿಯ
ಅಡೆತಡೆಗಲ್ಲ
ಅಡೆತಡೆಗಳ
ನಡುವೆ
ದಾರಿಯಂತೆ
ಕಾಣುವ
ಕಾಲುದಾರಿಯೆ
ಜೀವನ


Sunday, February 28, 2016

ಸಿಡಿ ಮದ್ದು

ಸಿಡಿಮದ್ಡಿನಂತಿರುವ ವಿಚಾರಗಳ
ಮೂಟೆಗಳನು ಸಿಡಿಸದೆ
ಪೇರಿಸಿಟ್ಟಿದ್ದೇವೆ
ಮನದ ಗೋದಾಮಿನಲಿ
ತುಂಬಿ ತುಂಬಿ || ೧ ||

ಸ್ಪೂರ್ತಿಯ ಕಿಡಿಗಳನು
ಬಿಟ್ಟುಕೊಳ್ಳುವುದೇ ಬೇಡ ಹತ್ತಿರ
ಸಿಡಿಸಿಬಿಟ್ಟಾವು ನಮ್ಮ
ತಲೆಯನ್ನು ಅವು || ೨ ||

ಇದ್ದು ಬಿಡೋಣ ತೆಪ್ಪಗೆ
ಏಕತಾನತೆಯ ಮಂಕು
ಕವಿದ ಗಾಢಂಧಕಾರದಲಿ
ಸುರಕ್ಷಿತವಾಗಿ || ೩ ||
ಬುಡ ಬುಡ್ಕಿ ಬಾಬಾ


ಮಂದ ದೀಪಗಳು

ಮಂದ ದೀಪಗಳೇ
ಆಪ್ತ ನಮಗೀಗ
ಏಕೆಂದರೆ
ಬಲು ಸುಲಭ
ಅದರಲಿ
ಮಂಕು ಕವಿದ
ಮನಸುಗಳನು
ಮುಚ್ಚಿಡುವದು

Friday, February 26, 2016

ಮಧ್ಯ ರಾತ್ರಿ

ಮಧ್ಯ ರಾತ್ರಿಯಲಿ
ಗಾಢ ನಿದ್ರೆಯಲಿರುವಾಗ
ಸುಂದರ ಕವನವೊಂದು ಬಂದು
ತಲೆ ತಟ್ಟಿ ಎಬ್ಬಿಸಿತು || ೧ ||

ಅದರ ಸೌಂದರ್ಯ ಕಂಡು
ವಿಸ್ಮಯದಿಂದ ಮರೆತೆಹೋದೆ
ಅದನು ಬಂದಿಸಬೇಕಿತ್ತು
ಶಬ್ದಗಳ ಬಾಹು ಬಂಧನದಲಿ
ಬಿಗಿಯಾಗಿ ಎಂದು || ೨ ||
ಬುಡ ಬುಡ್ಕಿ ಬಾಬಾ



ಗೆಳೆಯರೇ ಸಹೃದಯರೇ ಧನ್ಯವಾದಗಳು ನಿರಂತರ ಪ್ರೋತ್ಸಾಹಕ್ಕೆ. 
ಸಾವಿರ ಕಣ್ಣುಗಳು ಸವಿದಿವೆ ಕವನ ಸುಧಾ.
ಶತಕದ ಸಂಭ್ರಮ. 

ದೃಷ್ಟಿಕೋನಗಳು

ದು:ಖದ ಹುಟ್ಟು ಹಬ್ಬಕೆ
HAPPY BIRTHDAY
ಎಂದು ಹಾರೈಸಿದಕೆ
ದು:ಖಕ್ಕೆ ದು:ಖವಂತೆ || ೧ ||

ಸಾವಿನ ಹುಟ್ಟು ಹಬ್ಬಕೆ
MANY HAPPY RETURNS
ಎಂದು ಹಾರೈಸಿದಕೆ
ಸಾವಿಗೆ ಸಿಟ್ಟಂತೆ || ೨ ||

ಕಹಿಯ ಹುಟ್ಟು ಹಬ್ಬಕೆ
VERY SWEET BIRTHDAY
ಎಂದು ಹಾರೈಸಿದಕೆ
ಕಹಿಯ ಮನ ಕಹಿಯಾಯಿತಂತೆ  || ೩||

ನಿರಾಸೆಯ ಹುಟ್ಟು ಹಬ್ಬಕೆ
MAY YOU GET ALL DESIRES
ಎಂದು ಹಾರೈಸಿದಕೆ
ನಿರಾಸೆಗೆ ನಿರಾಸೆಯಂತೆ || ೪ ||

ಶಾಪದ ಹುಟ್ಟು ಹಬ್ಬಕೆ
MAY GOD BLESS YOU
ಎಂದು ಹಾರೈಸಿದಕೆ
ಶಾಪ ಹಾಕಿತಂತೆ ಶಾಪ || ೫ ||

ಬುಡ ಬುಡ್ಕಿ ಬಾಬಾ

ಹೊಸ ರುಚಿ : ಗಂಡನ ಗೊಜ್ಜು

ಹೆಂಡತಿಯರೇ
ಗಂಡನ
ಕಿಚಾಯಿಸಲು
ಕೀಚನನಲ್ಲಿ
ಉಪಹಾರಕ್ಕೆ
ಗಟ್ಟಿ ಉಪ್ಪಿಟ್ಟು
ಮಾಡಿ
ಗಂಡನ
ಮುಖ
ಕಪ್ಪಿಡುವುದ
ಕಂಡು
ಕಿಸ ಕಿಸ ನಕ್ಕು ಬಿಡಿ || ೧ ||

ಮಧ್ಯಾನ್ಹದ ಊಟಕ್ಕೆ
ಹೆಚ್ಚು ಉಪ್ಪು ಹಾಕಿ
ಚಿತ್ರಾನ್ನ
ಮಾಡಿ
ಉಪ್ಪು ಹೆಚ್ಚಾಗಿದೆ
ಉಪ್ಪು ಕಡಿಮೆ ಹಾಕು
ಎಂದು ಗಂಡ
ಕಿರುಚುವುದು
ಕೇಳಿ
ಕಿಲ ಕಿಲ ನಸುನಗಿ || ೨ ||

ರಾತ್ರಿ ಊಟಕ್ಕೆ
ಮರೆಯದೆ
ಉಪ್ಪೇ ಹಾಕದೆ
ಮತ್ತೆ
ಚಿತ್ರಾನ್ನ
ಬಡಿಸಿ
ಚಿತ್ರಹಿಂಸೆ
ಮಾಡಿ
ಮುಗುಳ್ನಕ್ಕು
ಸಿಹಿ ಮುತ್ತು
ನೀಡಿ
ಎಲ್ಲ ಮರೆಸಿ
ಬಿಡಿ || ೩||

Wednesday, February 24, 2016

ವಿಶ್ವವಾಣಿ - ಚಿನ್ನದಂತಹ ತಂಡ











ವಿಶ್ವವಾಣಿ
ಚಿನ್ನದ ಆಭರಣ
ಉದ್ಯಮಿ
ಕೆ ಪಿ ನಂಜುಂಡಿ
ವಿಶ್ವಕರ್ಮರ
ಹೊಸ
ಸಾಹಸವೇನಲ್ಲ
ಚಿನ್ನದ
ಬದಲು
ಚಿನ್ನದಂತಹ
ವಿಶ್ವೇಶ್ವರ ಭಟ್ಟರ
ಹಾಗೂ ಅವರ
ತಂಡದ
ಮೇಲೆ
ಹೂಡಿಕೆ
ಹೂಡಿದ್ದಾರೆ

Sunday, February 21, 2016

SOFTWARE ENGINEERನ ಜನ್ಮ ದಿನ

ನಮ್ಮ
ಇತಿ ಮಿತಿಗಳನು
ಅರಿತು
BUG
ENHANCEMENT
REQUEST
FILE
ಮಾಡಿ
ಅವುಗಳಲಿ
ಕೆಲವನಾದರೂ
PRIORITIZE ಮಾಡಿ
FIX ಮಾಡಿ
VERIFY ಮಾಡಿ
ಪ್ರತಿ
ಜನ್ಮ ದಿನಕೆ
ನಿಮ್ಮದೇ
ಹೊಸ
VERSION
RELEASE
ಮಾಡಿದರೆ
ಮಾತ್ರ
ಜನ್ಮ ದಿನ
ಸಾರ್ಥಕ

ಹಳೇ ಗಾದೆ ಹೊಸ ಹೊದಿಕೆ

    ಹಳೇ ಗಾದೆ: ಹಲ್ಲಿದ್ದರೆ ಕಡ್ಲಿ ಇಲ್ಲ. ಕಡ್ಲಿ ಇದ್ದರೆ ಹಲ್ಲಿಲ್ಲ.
    MOBILE ಗಾದೆ: SIGNAL ಇದ್ದರೆ BALANCE ಇಲ್ಲ. BALANCE ಇದ್ದರೆ SIGNAL ಇಲ್ಲ.
ಹಳೇ ಗಾದೆ: ಊರಿಗೆ ಬಂದವಳು ಬಾವಿಗೆ ಬರದೇ ಇರ್ತಾಳಾ
ಬೆಂಗಳೂರು ಗಾದೆ: ಬೆಂಗಳೂರಿಗೆ ಬಂದ ಹೊಸ ಕಾರು SCRATCH ಆಗದೆ ಇರುತ್ತಾ
ಹಳೇ ಗಾದೆ: ಅಟ್ಟ ಹತ್ತದವನನ್ನು ಬೆಟ್ಟ ಹತ್ತಿಸಿದರು
PROGRAMMER ಗಾದೆ: JAVA ಬರಿದವನ ಹತ್ತಿರ C++ ಬರೆಸಿದರು
ಹಳೇ ಗಾದೆ: ಅಪ್ಪ ಅಮ್ಮ ಜಗಳದಲಿ ಕೂಸು ಬಡವಾಯಿತು
PROGRAMMER ಗಾದೆ: ALLOC FREE ಜಗಳದಲಿ MEMORY ಬಡವಾಯಿತು

COMMENTನಲ್ಲಿ CODE

ಮಾಡುವ ಕೆಲಸದ ಬಗ್ಗೆ ಕಾಳಜಿ ಪ್ರೀತಿಯಿಲ್ಲದೆ
ಕೇವಲ ಕೆಲಸ ಉಳಿಸಿಕೊಳ್ಳಲು
ತೋರಿಕೆಯ ಮಾತನಾಡಿ
TOOL PROCESS ಗಳ
ಹೊದಿಕೆ ಹೊದಿಸುವದು
COMMENTನಲ್ಲಿ CODE ಬರೆದಂತೆ
ಬುಡ ಬುಡ್ಕಿ ಬಾಬಾ

ವಿಶ್ವವಾಣಿ ವಿರಾಮ ಪುರವಣಿ

ವಿಶ್ವವಾಣಿ
ವಿರಾಮ
ಪುರವಣಿ
ಬಂದ
ಮೇಲೆ
ಆತಂಕ
ಕಳವಳಗಳು
ಹೆಚ್ಚೀವೆ
ಏಕೆಂದರೆ
ಒಂದಕಿಂತ
ಒಂದು
ಉತ್ತಮ
ಲೇಖನಗಳಲಿ
ಎಲ್ಲಿ
ಯಾವದಾದ್ರು
ತಪ್ಪಿಸಿಕೊಂಡು
ಬಿಡುತ್ತೇನೊ
ಎಂದು

ಧ್ಯಾನಸ್ಥ ಸ್ಥಿತಿ

ಧ್ಯಾನಸ್ಥ
ಸ್ಥಿತಿ
ಎಂಬುದು
ವಿಳಾಸವಿಲ್ಲದ
ಸ್ಥಳ
ಹೋಗಲಾಗದು
ಅಲ್ಲಿ
ಬೇಕೆನಿಸಿದಾಗ || ೧ ||

ಅದೊಂದು
ನಿಮ್ಮ
ಅತ್ಯಂತ
ಪ್ರೀತಿಯ
ವಿಷಯಗಳತ್ತ
ಮಾಡುವ
ಪಯಣದಲಿ
ತಲ್ಲೀನವಾಗಿರುವಾಗ
ಅನಿರೀಕ್ಷಿತವಾಗಿ
ಬರುವ
ಕ್ಷಣಿಕ
ನಿಲ್ದಾಣ || ೨ ||

Saturday, February 20, 2016

ಕೊಳಾಯಿಗಳು

ಪಂಚತಾರಾ
ಹೋಟೆಲುಗಳ
ಫಜೀತಿ
ಸ್ನಾನದ
ಕೋಣೆಯ
ನೀರಿನ
ಕೊಳಾಯಿಗಳು || ೧ ||

ಅದೇಕೋ
ಕಾಣೆ
ಹೆಚ್ಚಿನ
ಸೃಜಾನ್ಮಕತೆ
ಕಾಣ
ಸಿಗುತದೆ
ಕೊಳಾಯಿಗಲಿ || 2 ||

ಕೆಲವು
ಕೊಳಾಯಿಗಳು
ಆಕಾಶ
ತೋರಿದಾಗ
ಮಾತ್ರ
ನೀರು
ಸುರಿಸುತ್ತವೆ || ೩ ||

ಕೆಲವು
ಕೊಳಾಯಿಗಳು
ನೆಲ
ತೋರಿದಾಗ
ಮಾತ್ರ
ನೀರು
ಚಿಮ್ಮಿಸುತವೇ || ೪ ||

ಕೆಲವು
ಕೊಳಾಯಿಗಳ
ಮುಂದೆ
ಕೈ ತಾಳ
ಹಾಕಿದರೆ ಮಾತ್ರ
ನೀರು
ಹೊಮ್ಮುವುದು || ೫ ||

ಕೆಲವು
ಕೊಳಾಯಿಗಳ
ಗಟ್ಟಿಯಾಗಿ
ಅದುಮಿದರೆ ಮಾತ್ರ
ನೀರು
ಹರಿಸುವವು || ೬ ||

ಕೊಳಾಯಿಗಳು
ಕೊಡುವ
ಕಳವಳ
ಹೇಳಲಾಗದು
ಅನುಭವಿಸಿಯೇ
ತಿಳಿಯಬೇಕು || ೭. ||

Wednesday, February 17, 2016

ಅರ್ಥಪೂರ್ಣ ಜೀವನ

ಬೇಕಿರುವದು
ಸುಖ ಸಂತೋಷ
ದು:ಖ ಕಷ್ಟಗಳಿಗಿಂತ
ಮುಖ್ಯವಾಗಿ
ಅರ್ಥಪೂರ್ಣ
ಜೀವನ || ೧ ||

ಅರ್ಥವಿಲ್ಲದ
ಜೀವನದ
ಸುಖ ಸಂತೋಷ
ಚಿತ್ರದಲಿ
ಬರೆದ
ಮೃಷ್ಟಾನ್ನದಂತೆ
ಜೀವ
ಪೋಷಿಸದು || ೨ ||

ಅರ್ಥವಿದ್ದು
ದು:ಖ ಕಷ್ಟವಿರುವ
ಜೀವನ
ಕೈಯಲ್ಲಿರುವ
ಕಟಿ ರೊಟ್ಟಿಯಾದರೂ
ಜೀವ
ಪೋಷಿಸುವದು || ೩ ||

ಬುಡ ಬುಡ್ಕಿ ಬಾಬಾ


ಗೋಣಾಡಿಸುವದು

ಹುಟ್ಟಿನಿಂದ
ಗೋಣಾಡಿಸಿದೆ
ತಂದೆ ತಾಯಿ
ಹೇಳಿದಕೆ || ೧ ||

ಬಾಲ್ಯದಲಿ
ಗೋಣಾಡಿಸಿದೆ
ಗೆಳೆಯರು
ಹೇಳಿದಕೆ ||೨ ||

ಶಾಲಾ ಕಾಲೇಜುಗಳಲಿ
ಗೋಣಾಡಿಸಿದೆ
ಮೇಷ್ಟ್ರು
ಹೇಳಿದಕೆ || ೩ ||

ಕಛೇರಿಯಲಿ
ಗೋಣಾಡಿಸಿದೆ
ಮೇಲಾಧಿಕಾರಿ
ಹೇಳಿದಕೆ || ೪ ||

ಮದುವೆಯಾದ ಮೇಲೆ
ಗೋಣಾಡಿಸಿದೆ
ಹೆಂಡತಿ
ಹೇಳಿದಕೆ || ೫ ||

ಮಕ್ಕಳಾದ ಮೇಲೆ
ಗೋಣಾಡಿಸಿದೆ
ಮಕ್ಕಳು
ಹೇಳಿದಕೆ || ೬ ||

ಗೋಣಾಡಿಸಿದೇ ಇದ್ದದ್ದು
ನನ್ನದೇ
ಹೃದಯದ
ಪಿಸುಮಾತಿಗೆ  || ೭ ||

ಗೋಣಾಡಿಸಿ ಗೋಣಾಡಿಸಿ
ಗೋಣಾಡಿಸುವದು
ಬೆರತು ಹೋಗಿದೆ
ಕಣ ಕಣಗಳಲಿ
ಹುಟ್ಟು ಗುಣದಂತೆ
ಹೋಗೆಂದರು ಹೋಗದು
ಸಾಯುವವರೆಗೆ || ೮ ||

Tuesday, February 16, 2016

ವಿಕಾಸ

ಮರಕೋತಿ ಆಡುತಿದ್ದರು ಎಂದು
ಕೇಳಿ ಇಂದಿನ ಪೀಳಿಗೆಯವರೆಂದರು
ಅಬ್ಬಾ ಎಷ್ಟು ಗಟ್ಟಿ ಹಿಂದಿನ
ಪೀಳಿಗೆಯವರು ಉಪಯೋಗಿಸಬೇಕಿತ್ತು
ಕೈ ಕಾಲೆರಡು ಅದನು ಆಡಲು
ನಾವಾದರೋ ಹಾಯಾಗಿ MOBILE
ಪರದೆಯ ಮೇಲೆ ಕೈ ಆಡಿಸಿ
ಆಟವಾಡುತ್ತೇವೆ || ೧ ||

MOBILE ಪರದೆಯ ಮೇಲೆ ಕೈ ಆಡಿಸಿ ಆಡುತ್ತಿದ್ದರು
ಎಂದು ಕೇಳಿ ಮುಂದಿನ ಪೀಳಿಗೆಯವರೆಂದರು
ಅಬ್ಬಾ ಎಷ್ಟು ಗಟ್ಟಿ ಹಿಂದಿನ
ಪೀಳಿಗೆಯವರು ಉಪಯೋಗಿಸಬೇಕಿತ್ತು
ಕೈ ಯನ್ನು  ಆಡಲು
ನಾವಾದರೋ ಹಾಯಾಗಿ ಕಣ್ಣ
ಮುಂದಿನ VIRTUAL REALITY GOGGLE ನಲ್ಲಿ
ಕಣ್ಣಾಡಿಸಿ ಆಡುತ್ತೇವೆ || ೨ ||

ಆಕಾಶಬುಟ್ಟಿ

ವೇದನೆಯ
ಬೆಂಕಿಗೆ
ಹತ್ತಿ  ಉರಿಯಿತು
ಮನ || ೧ ||

ದು:ಖದ
ಬಿಸಿ ಉಸಿರು
ತುಂಬಿ ಹಗುರವಾಯಿತು
ಹೃದಯ || ೨ ||

ಏಕಾಂತದ
ಆಕಾಶದಲಿ
ತೇಲಿ ಮೇಲಿರಿದೆ
ಆಕಾಶಬುಟ್ಟಿ ಯಂತೆ || ೩ ||
ಬುಡ ಬುಡ್ಕಿ ಬಾಬಾ

Monday, February 15, 2016

ಮನಸಿನ ಒಂದು ತಿರುವಿನಲಿ

ಹೊಂಚು ಹಾಕಿ ಕುಳಿತಿದ್ದೆ
ಹಿಡಿಯಲದನು ಬಹು ದಿನದಿಂದ
ಓಡಿತು ಅದು ನೆಗೆದು ನನ್ನ ಕಂಡು
ಓಡಿದೆ ನಾನು ಕೂಡ ಅದರ ಹಿಂದೆ
ಹಿಂದೆಂದೂ ಓಡಿರದ ಹಾಗೆ || ೧ ||

ವೇಗವನ್ನು ಹೆಚ್ಚಿಸಿಕೊಂಡಿತು ಅದು
ನಾನು ಕೂಡ ಹೆಚ್ಚಿಸಿದೆ ವೇಗ
ನಾನೇನು ಕಮ್ಮಿ  ಎಂದು
ಓಡಿದೆ ಅದರ ಹಿಂದೆ
ನನ್ನದೆಲ್ಲವನ್ನು   ಬಸಿದು || ೨ ||

ತಿರುವು ಮುರುವು ಅಂಕು ಡೊಂಕು
ತೆಗ್ಗು ದಿಣ್ಣೆ ಹಾದಿ ಹಿಡಿದು ಹಾರಿ
ಓಡಿತು ತಪ್ಪಿಸಿಕೊಳ್ಳಲು
ನಾನು ಅಟ್ಟಿಸಿಕೊಂಡು ಹೋದೆ
ಚಿರತೆ ಜಿಂಕೆಯನ್ನು ಬೆಂಬತ್ತುವಂತೆ || ೩ ||

ಇನ್ನೇನು ಸಿಕ್ಕೇ ಬಿಟ್ಟಿತು
ಅನ್ನುವಷ್ಟರಲ್ಲಿ ಮತ್ತೆ
ತಪ್ಪಿಸಿಕೊಂಡಿತು
ಆ ತುಂಟ ಕನಸು
ಮನಸಿನ ಒಂದು ತಿರುವಿನಲಿ || ೪ ||

ಸಾಧ್ಯತೆಗಳು

ಒಂದೊಮ್ಮೆ
ಅನಿಸಿದ್ದುಂಟು
ಜೀವನದ
ಸಾಧೈತೆಗಳೇ
ತಿಳಿಯದಿದ್ದರೆ
ಒಳ್ಳೆಯದಿತ್ತೆ೦ದು
ಇಷ್ಟೇ ಜೀವನ
ಎಂದು
ಬದುಕಿ
ಬಿಡುತ್ತಿದ್ದೆ
ಯಾವುದನು
ಪ್ರಶ್ನಿಸದೆ
ಯಾವುದಕೂ
ಬೇಸರಿಸದೆ
ಬಾಯಿ
ಮೇಲೆ
ಬೆರಳ
ಇಟ್ಟು
ಸುಮ್ಮನೆ




Sunday, February 14, 2016

ಕೂಸು ಉಂಡಿಲ್ಲ ಕೂಸು ಉಂಡಿಲ್ಲ

ಕೂಸು ಉಂಡಿಲ್ಲ ಕೂಸು ಉಂಡಿಲ್ಲ
ತಾಯ ಮನ ತಣದಿಲ್ಲ ||  ಪ ||

ಆಧುನಿಕತೆಯ ವೇಗಕ್ಕೆ
ಕಳೆದುಕೊಂಡಿವೆ
ರಸ ರುಚಿ ಗಂಧವನು
ONLINE ಬೆಳೆದ
ಹಣ್ಣು ತರಕಾರಿಗಳು || ೧ ||

ಮಕ್ಕಳಿಗೆ ಊಟ ರುಚಿಸಲೊಲ್ಲದು
ತಾಯಂದಿರು
OUTSOURCE ಮಾಡಿದ್ದಾರೆ
ಆಗಸದ ಚಂದ್ರನ ಕೆಲಸವನು
MOBILE LAPTOP TABLET ಗಳಿಗೆ || ೨ ||

ತಂತ್ರಜ್ಞಾನದ ಸ್ಪರ್ಶ
ಪಡೆದ APP  GAME  VIDEO ಗಳು
ಸ್ಪರ್ಧೆಗೆ ಬಿದ್ದಿವೆ ಉಣಿಸಲು
ಕಳೆದು ಹೋದ ರಸ ರುಚಿ ಗಂಧವನು
ಟೊಳ್ಳು ಟೊಳ್ಳಾದ ಆಕರ್ಷಣೆಗಳಿಂದ || ೩ ||

ಅದರಲೆ ತಲ್ಲೀನವಾದ ಮಕ್ಕಳು
ಮರೆತಿದ್ದಾರೆ ಊಟವನು
ಬಾಯೊಳಗೆ ಹೋದ ತುತ್ತುಗಳು
ತುತ್ತು ಮರಿ ಹಾಕುವಷ್ಟು
ಸಮಯ ತಗೆದುಕೊಂಡಿವೆ ಹೊಟ್ಟೆ ತಲುಪಲು || ೪ ||

ಆದ ಕಂಡು ತಾಯಂದಿರು
ಬೂಬ್ಬೆ ಹಾಕಿ ಕಿರುಚಿ
ಕೈ ಕೈ ಮಸೆದಿದ್ದಾರೆ
ಆದರೆ ಹಟಕ್ಕೆ ಮಣಿದಿದ್ದಾರೆ
ಅಸಹಾಯಕತೆಯಿಂದ || ೫ ||

ಕೂಸು ಉಂಡಿಲ್ಲ ಕೂಸು ಉಂಡಿಲ್ಲ
ತಾಯ ಮನ ತಣದಿಲ್ಲ
ಉಳಿದು ಹೋದ ಊಟ
ಬೀದಿ ನಾಯಿ ಕಾಗೆ ಅಳಿಲುಗಳಿಗೆ
ಹಬ್ಬದೌತಣ || ೬ ||

ಬುಡ ಬುಡ್ಕಿ ಬಾಬಾ




ಮೂಲ ಆಧಾರ ಸ್ತಂಭ

ಆಶ್ರಯ ಪಡೆದ ಕಟ್ಟಡದ
ಭಾರ ಹೊತ್ತ
ಮೂಲ ಆಧಾರ ಸ್ತಂಭವನು
ಶಿಥಿಲಗೊಳಿಸುವರಿಗೆ
ತಿಳಿಯಲೇ ಇಲ್ಲ
ಕಟ್ಟಡ ಕುಸಿದಾಗ
ಅದರ ಕೆಳಗೆ
ಅವರು
ಸಮಾಧಿಯಾಗುವರೆಂದು
ಬುಡ ಬುಡ್ಕಿ ಬಾಬಾ

Saturday, February 13, 2016

ಏಕತಾನತೆಯ ಇನ್ನೊಂದು ದಿನ

ಕತ್ತಲಿನ ಗಾಡ ರಾತ್ರಿಯಲಿ
ಕಡಿದಾದ ಬೆಟ್ಟವನು ಹತ್ತಿ
ಇನ್ನೇನು ತುದಿ
ಮುಟ್ಟಬೇಕೆಂದಾಗ
ಕಾಲು ಜಾರಿತ್ತು || ೧ ||

ಬೆಟ್ಟವೇ ಜಾರುಬಂಡಿಯಾಗಿ
ಜಾರಿದ್ದೆ ಪ್ರಪಾತದತ್ತ
ಅನಿಸಿತ್ತು ನನಗೆ
ನನ್ನ ಕತೆ
ಮುಗಿಯಿತೆಂದು || ೨ ||

ಗತಿಸಿದ ಜೀವನದ
ನೆನಪುಗಳು
ಸುರುಳಿ ಸುರಿಳಿಯಾಗಿ
ಜಾರಿ ಹೋದವು
ಕಣ್ಣ ಮುಂದೆ || ೩ ||

ನನಗೆ ನಾನೇ ಕಂಡೆ
ಅಪರಿಚಿತನಂತೆ
ನಾನೇನಾ ಇವನು
ಅಯ್ಯೋ ಉಳಿದರೆ
ಬದಲಾಗುವೆ
ನಾನು ನಾನಾಗುವೆ ಎಂದುಕೊಂಡೆ || ೪ ||

ಇನ್ನೇನು ಪ್ರಪಾತಕ್ಕೆ ಬೀಳಲು
ಕ್ಷಣಮಾತ್ರವಿದ್ದಾಗ
ಕಣತೆರೆದಿತ್ತು ಅಲಾರಾ೦ ಶಬ್ದಕ್ಕೆ
ಮರೆತು ಎಲ್ಲವ
ಸಿದ್ದನಾದೆ ಏಕತಾನತೆಯ
ಇನ್ನೊಂದು ದಿನಕೆ || ೫ ||

ಬೆಂಗಳೂರಲ್ಲಿ ENGLISH ಚಿರತೆ

ಚಿರತೆಯನ್ನು
ಬಿಟ್ಟಿಲ್ಲ
ಪಂಚತಾರಾ
ಆಂಗ್ಲ
ಮಾಧ್ಯಮ
ಶಾಲೆಯ
ಮೋಹ
ಇನ್ನೂ
ಬಿಟ್ಟೀತೆ
ಮಾನವರ?

ನೀನಿರದಿದ್ದರೆ

ನಾನೆಂಬ
ಕಾವ್ಯ
ಹಾಡಾಗುತ್ತಿರಲಿಲ್ಲ
ನೀನಿರದಿದ್ದರೆ || ೧ ||

ನಾನೆಂಬ
ಬಣ್ಣ
ಚಿತ್ರವಾಗುತ್ತಿರಲಿಲ್ಲ
ನೀನಿರದಿದ್ದರೆ || ೨. ||

ನಾನೆಂಬ
ಸ್ವರ
ಸಂಗೀತವಾಗುತ್ತಿರಲಿಲ್ಲ
ನೀನಿರದಿದ್ದರೆ || ೩ ||

ನಾನೆಂಬ
ವಾದ್ಯ
ನಾದವಾಗುತ್ತಿರಲಿಲ್ಲ
ನೀನಿರದಿದ್ದರೆ || ೪ ||

ನಾನೆಂಬ
ದೀಪ
ಬೆಳಗುತ್ತಿರಲಿಲ್ಲ
ನೀನಿರದಿದ್ದರೆ || ೫ ||

ನಾನೆಂಬ
ಅಪೂರ್ಣ
ಪೂರ್ಣವಾಗುತ್ತಿರಲಿಲ್ಲ
ನೀನಿರದಿದ್ದರೆ || ೬ ||

Friday, February 12, 2016

ಮಾನವತೆ

ಎಷ್ಟೇ
ಮೋಸ
ಹೋದರೂ

ಹುಚ್ಚು
ಮನಸಿಗೆ
ಹೋಗಿಲ್ಲ
ಇನ್ನೂ
ಮಾನವತೆಯ
ಮೇಲಿನ
ನಂಬಿಕೆ

ಮೂಲ ನಂಬಿಕೆ

ತನ್ನ ಮೂಲ
ನಂಬಿಕೆಗಳೇ
ಅರ್ಥ ಕಳೆದುಕೊಂಡಾಗ
ವರ್ತಮಾನ
ಸ್ಪೋಟಿಸುತ್ತದೆ
ಜ್ವಾಲಾಮುಖಿಯಂತೆ || ೧ ||

ಗತಕಾಲದ
ಜೀವನ
ಕುಸಿದು
ಬೀಳುತ್ತದೆ
ಉಸುಕಿನ
ಮಹಲಿನಂತೆ || ೨ ||

ಭವಿಷ್ಯದ
ಬದುಕು
ಹೊಯ್ದಾಡುತ್ತದೆ
ಬಿರುಗಾಳಿಗೆ
ಸಿಕ್ಕ
ದೋಣಿಯಂತೆ || ೩ ||

ಒಟ್ಟಾಗಿ
ಹೂಳುನೆಲದಲ್ಲಿ
ಸಿಕ್ಕವನಂತೆ
ಹೋರಾಡಿದಷ್ಟು
ಆಳಕ್ಕೆ
ಹುದುಗುತ್ತಾನೆ || ೪ ||
ಬುಡ ಬುಡ್ಕಿ ಬಾಬಾ

ಅತ್ತೇ-ಸೊಸೆ

ಅತ್ತೇ
ಯಾವಾಗಲೂ
ಸರಿ
ಸೊಸೆ
ತಪ್ಪೇ
ಮಾಡಲ್ಲ

Thursday, February 11, 2016

ಸಂಬಂಧಗಳ ಆಯಾಮ

ಸಂಬಂಧಗಳು
ಕೂಡಿವೆ
ಬೇರೆ ಬೇರೆ
ಆಯಾಮಗಳಿಂದ || ೧ ||

ಸಂಬಂಧಗಳ
ಆಯಾಮಗಳನು
ನೋಡಬೇಕು
ಬೇರೆ ಬೇರೆಯಾಗಿ || ೨ ||

ಒಂದು  ಆಯಾಮದ
ಬಿನ್ನಾಭಿಪ್ರಾಯ
ಕದಡದಿರಲಿ
ಇನ್ನೊಂದು ಆಯಾಮದ
ಸಾಮರಸ್ಯ || ೩ ||

ಕಾವ್ಯ ಲಹರಿ

ಪ್ರಸವ
ಕಾವ್ಯ
ಎರಡಕ್ಕೂ
ಹೊರಬೇಕು
ಬೆನೆಪಟ್ಟು
ಹೇರಬೇಕು
===

ತನ್ನೊಡನೆ
ತಾನು
ಪ್ರಾಮಾಣಿಕವಾಗಿದ್ದಾಗ
ಮಾತ್ರ
ಸಾಧ್ಯ
ಕಾವ್ಯ

ಜನ್ಮ ದಿನದ ಹಾರೈಕೆ

ಬದುಕಿನ ಪುಸ್ತಕದಲಿ
ತಿರುವಿದೆ ಇನ್ನೊಂದು
ವರುಷವೆಂಬ ನೆನಪಿನ ಪುಟ
ತೆರೆದಿದೆ ಮತ್ತೊಂದು
ವರುಷವೆಂಬ ಹೊಸ ಪುಟ || ೧ ||

ಪ್ರತಿ ಹೊಸ ಪುಟವು
ಹಳೆಯ ಎಲ್ಲ ಪುಟಕ್ಕಿಂತ
ಹೆಚ್ಚು ಬೆಚ್ಚಗಿರುವ
ಪ್ರಿಯವಾಗಿರುವ
ನೆನಪುಗಳಿಂದ ತುಂಬಲಿ || ೨ ||

ನೀನ್ನ ಜನ್ಮ ದಿನಕೆ
ಇದೆ ನನ್ನ ಹಾರೈಕೆ

Wednesday, February 10, 2016

ಒಂದು ದಿನ

ಮುಳುಗತಲಿದ್ದ ಬಾನಂಚಿನಲಿ ಸೂರ್ಯ
ಇನ್ನೊಂದು ದಿನವನು
ಕದ್ದ ಲಜ್ಜೆಯಿಂದ ಕೆಂಪಾಗಿ || ೧ ||

ಉದಯಿಸುತ್ತಿದ್ದರು ಕಾರ್ಖಾನೆ ಬಾಗಿಲಿಂದ ಕಾರ್ಮಿಕರು
ಮತ್ತೊಂದು ದಿನ
ಗೆದ್ದ ಖುಷಿಯಿಂದ ತಂಪಾಗಿ || ೨ || 

ಅಲಂಕಾರ

ಬೇಕಿದ್ದಕ್ಕಿಂತಲೂ
ಹೆಚ್ಚಾಗಿ
ಅಸಹಜ
ರೀತಿಯಲ್ಲಿ
ಕರಾರುವಾಕ್ಕಾಗಿ
ನಿಖರವಾಗಿ
ಅಲಂಕರಿಸಿಗೊಂಡಿರುವ
ನಗರದ
ಚೆಲುವೆಯರ
ಮಧ್ಯೆ
ಅದೇಕೋ
ಸಣಕಲು
ದೇಹದ
ಬಿಳಿದಾದ
ತಲೆಗೂದಲಿನ
ಹಳೇ ಹಸಿರು
ಸೀರೆಯುಟ್ಟ
ಬರಿಗಾಲಿನ
ಅಜ್ಜಿ
ಗಮನ
ಸೆಳೆದಳು
ಬುಡ ಬುಡ್ಕಿ ಬಾಬಾ

HIGH HEEL ಹುಡುಗಿ

DOWN
TO
EARTH
ಹುಡುಗನ
ಒಲ್ಲೆನಂದಳು
HIGH
HEEL
ತೊಟ್ಟ
ಹುಡುಗಿ

Tuesday, February 9, 2016

ಹರಿಯುವ ನೀರು

ಸತತವಾಗಿ
ಒಂದೇ
ದಿಕ್ಕಿನಲ್ಲಿ
ಹರಿಯುವ
ನೀರು
ಕಲ್ಲನ್ನು
ಕರಗಿಸುವದು || ೧ ||

ಸತತವಾಗಿ
ಒಂದೇ
ಗುರಿಯತ್ತ
ಮಾಡುವ
ಪ್ರಯತ್ನ
ಖಂಡಿತ
ಯಶಸ್ವಿಯಾಗುವದು || ೨ ||

Monday, February 8, 2016

ಬಿಳಿ ಆನೆಗಳು

ಮಧ್ಯವರ್ತಿಗಳನ್ನು
ಮಟಾಶಗೊಳಿಸಲು
ಹುಟ್ಟಿದ
ಮಾಹಿತಿ
ತಂತ್ರಜ್ಞಾನಯುಗದಲ್ಲೂ
ಹುಟ್ಟಿದ್ದಾರೆ
ಮಾಹಿತಿ
ಮಧ್ಯವರ್ತಿಗಳೆಂಬ
ಬಿಳಿ ಆನೆಗಳು || ೧ ||

ಬಿಳಿ ಆನೆಗಳಿಗೆ
ಕೆಲಸ ಒಂದೇ
ಮೇಲಿನ
ಮಾಹಿತಿಯನ್ನು
ಕೆಳಗೆ
ಕೆಳಗಿನ
ಮಾಹಿತಿಯನ್ನು
ಮೇಲೆ
ಕಳಿಸುವದು || ೨ ||

ಜೀವಂತ ಶವ

ಸಂಸ್ಥೆಗಳಾಗಿವೆ
ಕೆಲಸಗಳೆಂಬ
ಶವಗಳಿಂದ
ತುಂಬಿದ
ಶವಾಗಾರ || ೧ ||

ಅನುಕೂಲವಿದೆಯೆಂದರೆ
ಹುಟ್ಟುತ್ತಾರೆ
ಅನಾಥ
ಶವಕ್ಕೂ
ಸಂಭಂಧಿಕರು ||೨ ||

ಅನಾನುಕೂಲವಿದೆಯೆಂದರೆ
ಘೋಷಿಸುತ್ತಾರೆ
ಸಂಭಂಧವಿರುವ
ಶವವನ್ನು
ಅನಾಥ ಎಂದು ||೩ ||

ಕೆಲಸವನ್ನು
ಶವಗಳಂತೆ
ಕಂಡು ಕಂಡು
ವರ್ತಿಸುತಿದ್ದಾರೆ
ಜೀವಂತ ಶವಗಳಂತೆ || ೪ ||




ಜೀವಂತ ಶವ => ZOMBIE

Sunday, February 7, 2016

ಕಾಯುವುದು

ತೆರೆದ ತೋಳುಗಳ
ಚಾಚಿ
ರೆಪ್ಪೆ ಮಿಟುಕಿಸದೆ
ಕಾದಿರುವೆ ನಿನಗಾಗಿ
ವರುಷ ವರುಷ
ಪ್ರತಿಮೆಯಂತೆ || ೧ ||

ಕಾಯುವುದನು
ಮಾಡಿಲ್ಲ
ಕಾಯಕದಂತೆ
ತೇದು ತೇದು
ಮಾಡಿದ್ದೇನೆ
ಅದನು ತಪದಂತೆ || ೨ ||

ಬಂದು ಬಿಡು
ಈ ತಪದ ಬೆಂಕಿ
ಕಾಳ್ಗಿಚ್ಚಾಗಿ
ಲೋಕವನ್ನು
ಸುಟ್ಟು ಬೂದಿ
ಮಾಡುವ ಮೊದಲು || 3 ||

ಪ್ರೀತಿಯೆಂದರೆ..

ಪ್ರೀತಿಯೆಂದರೆ
ಹೇಳಿದೆಲ್ಲ ಒಪ್ಪುವದಲ್ಲ
ಒಪ್ಪದಿದ್ದರೂ
ಬಿರುಕು
ಬಿಡುವುದಿಲ್ಲ || ೧ ||

ಪ್ರೀತಿಯೆಂದರೆ
ಜಗಳವಿಲ್ಲವೆಂದಲ್ಲ
ಜಗಳವಾದಾಗಲೂ
ಕೊಂಡಿ
ಕಳಚುವುದಿಲ್ಲ || ೨ ||

ಪ್ರೀತಿಯೆಂದರೆ
ಭಿನ್ನಾಭಿಪ್ರಾಯವಿಲ್ಲವೆಂದಲ್ಲ
ಭಿನ್ನಾಭಿಪ್ರಾಯವಿದ್ದರೂ
ಬೆಸುಗೆ
ಸಡಲಿಸುವುದಿಲ್ಲ || ೩ ||

ಪ್ರೀತಿಯೆಂದರೆ
ಗಾಯವಿಲ್ಲವೆಂದಲ್ಲ
ಗಾಯವಿದ್ದರೂ
ಅದು
ಮಾಯದಿರುವುದಿಲ್ಲ || ೪ ||

ಪ್ರೀತಿಯೆಂದರೆ
ಮೌನವಿಲ್ಲವೆಂದಲ್ಲ
ಮೌನವಿದ್ದರೂ
ಸಂಭಾಷಣೆಯ
ಸಾವಿರುವುದಿಲ್ಲ || ೫ ||

ಪ್ರೀತಿಯೆಂದರೆ
ದೂಷಣೆಯಿಲ್ಲವೆಂದಲ್ಲ
ದೂಷಣೆಯಿದ್ದರೂ
ದ್ವೇಷದ
ಸೋಂಕಿರುವುದಿಲ್ಲ || ೬ ||

ಪ್ರೀತಿಯೆಂದರೆ
ಚುಚ್ಚುವದಿಲ್ಲವೆಂದಲ್ಲ
ಚುಚ್ಚಿದರೂ
ನಂಜು
ಏರುವುದಿಲ್ಲ || ೭||

ಪ್ರೀತಿಯೆಂದರೆ
ವಿರಹವಿಲ್ಲವೆಂದಲ್ಲ
ವಿರಹವಿದ್ದರೂ
ನೆನಪು
ಮಾಸುವುದಿಲ್ಲ || ೮ ||

ಪ್ರೀತಿಯೆಂದರೆ
ಸುಳ್ಳಿಲ್ಲವೆಂದಲ್ಲಾ
ಸುಳ್ಳಿದ್ದರೂ
ಸತ್ಯದ ಕೊಲೆ
ನಡೆಯುವುದಿಲ್ಲ || ೯ ||

ಪ್ರೀತಿಯೆಂದರೆ
ಮೋಸವಿಲ್ಲವೆಂದಲ್ಲ
ಮೋಸವಿದ್ದರೂ
ಬೆನ್ನಲ್ಲಿ ಚೂರಿ
ಹಾಕುವುದಿಲ್ಲ || ೧೦ ||

ಪ್ರೀತಿಯೆಂದರೆ
ಸುಟ್ಟಿಲ್ಲವೆಂದಲ್ಲ
ಸುಟ್ಟರೂ
ಭಾವನೆ
ಬೂದಿಯಾಗುವುದಿಲ್ಲ || ೧೧ ||

ಪ್ರೀತಿಯೆಂದರೆ
ವೇದನೆಯಿಲ್ಲವೆಂದಲ್ಲ
ವೇದನೆಯಿದ್ದರೂ
ಸೇತುವೆ
ಮುರಿಯುವುದಿಲ್ಲ || ೧೨ ||

ಪ್ರೀತಿಯೆಂದರೆ
ಏಕತಾನತೆಯಿಲ್ಲವೆಂದಲ್ಲ
ಏಕತಾನತೆಯಿದ್ದರೂ
ಬೇಸರ
ಬರುವುದಿಲ್ಲ || ೧೩ ||

ಪ್ರೀತಿಯೆಂದರೆ
ಸ್ವಾರ್ಥವಿಲ್ಲವೆಂದಲ್ಲ
ಸ್ವಾರ್ಥವಿದ್ದರೂ
ಕಾಲೇಳೆದು ಕೆಳಗೆ
ತಳ್ಳುವುದಿಲ್ಲ || ೧೪ ||

ಪ್ರೀತಿಯೆಂದರೆ
ವಿಷವಿಲ್ಲವೆಂದಿಲ್ಲ
ವಿಷವಿದ್ದರೂ
ಪ್ರೇಮಿಗಳ
ಕೊಲ್ಲುವುದಿಲ್ಲ || ೧೫ ||
ಬುಡ ಬುಡ್ಕಿ ಬಾಬಾ


Saturday, February 6, 2016

ಪ್ರೀತಿಯ ಲೆಕ್ಕಾಚಾರ

ಲೋಕದ ಲೆಕ್ಕಾಚಾರದಲಿ
ಕೊಟ್ಟಂತೆ ಕಡಿಮೆಯಾಗುವದು
ಪ್ರೀತಿಯ ಲೆಕ್ಕಾಚಾರದಲಿ
ಕೊಟ್ಟಂತೆ ಹೆಚ್ಚಾಗುವದು || ೧ ||

ಲೋಕದ ಲೆಕ್ಕಾಚಾರದಲಿ
ಕಡಿಮೆ ಪಡೆದು ಹೆಚ್ಚು ಕೊಟ್ಟರೆ ನಷ್ಟ 
ಪ್ರೀತಿಯ ಲೆಕ್ಕಾಚಾರದಲಿ
ಕಡಿಮೆ ಪಡೆದು ಹೆಚ್ಚು ಕೊಟ್ಟರೂ ಲಾಭ  || ೨ ||

ಲೋಕದ ಲೆಕ್ಕಾಚಾರದಲಿ
ಒಂದಕ್ಕೆ ಒಂದು ಕೂಡಿದರೆ ಎರಡು 
ಪ್ರೀತಿಯ ಲೆಕ್ಕಾಚಾರದಲಿ
ಒಂದಕ್ಕೆ ಒಂದು ಕೂಡಿದರೆ ಅನಂತ  || ೩ ||

ಲೋಕದ ಲೆಕ್ಕಾಚಾರದಲಿ
ಸಂಕಲನ ವ್ಯವಕಲನ ಗುಣಾಕಾರ ಭಾಗಾಕಾರ 
ಪ್ರೀತಿಯ ಲೆಕ್ಕಾಚಾರದಲಿ
ಕೇವಲ ಸಂಕಲನ ಗುಣಾಕಾರ || ೪ ||

Friday, February 5, 2016

ನಿಜ ಪ್ರೀತಿ

ತಾನು ತಾನಾಗಿರಲು
ಪ್ರಯತ್ನವಿರದ
ಸಂಭಂಧದಲಿ
ನಿಜ ಪ್ರೀತಿಯಿದೆ || ೧ ||

ತಾನು ತಾನಾಗಿರಲು
ಆನಂದ ಪಡುವ
ಸಂಭಂಧದಲಿ
ನಿಜ ಪ್ರೀತಿಯಿದೆ || ೨ ||

ತಾನು ತಾನಾಗಿರಲು
ಹೆಮ್ಮೆ ಪಡುವ
ಸಂಭಂಧದಲಿ
ನಿಜ ಪ್ರೀತಿಯಿದೆ || ೩ ||

ಓಬ್ಬರನೊಬ್ಬರು
ಬದಲಿಸಲು ಹೆಣಗದ
ಸಂಭಂಧದಲಿ
ನಿಜ ಪ್ರೀತಿಯಿದೆ || ೪ ||


Wednesday, February 3, 2016

ಜೀವನದ ಪಯಣ

ಜೀವನದ
ಪಯಣ
ಸಾಗುವದಿಲ್ಲ
ವೇಗವಾಗಿ
ರೈಲುಗಂಬಿಗಳ
ಮೇಲೆ ಚಲಿಸಿದಂತೆ
ಅಡೆತಡೆಯಿಲ್ಲದೆ || ೧ ||

ಜೀವನದ
ಪಯಣ
ಸಾಗಬೇಕಿದೆ
ಸಾವಕಾಶವಾಗಿ
ಅಂಕುಡೊಂಕು
ಕಾಲುದಾರಿಗಳ
ಗುಡ್ಡಗಾಡಿನಲ್ಲಿ || ೨ ||

ಜೇವನದ
ಪಯಣ
ಸಾಗಲಿ
ಸಹನೆ
ಸ್ವೀಕೃತಿಯಿಂದ
ಸವಿಯುತ
ಸುತ್ತಮುತ್ತ || ೩ ||
ಬುಡ ಬುಡ್ಕಿ ಬಾಬಾ

ಪ್ರೀತಿಯೊಂದೇ ಪರಿಪೂರ್ಣ

ಪರಿಪೂರ್ಣ
ಅಲ್ಲ
ಯಾರೂ || ೧ ||

ಪ್ರತಿಯೂಬ್ಬರಲ್ಲೂ
ಇದೆಯೊಂದು
ನ್ಯೂನತೆ || ೨ ||

ಪರಿಪೂರ್ಣ
ಪ್ರೀತಿ
ಮಾತ್ರ || ೩ ||

ಪ್ರೀತಿಯಿದ್ದಾಗ
ನ್ಯೂನತೆಯೂ
ಕೂಡ ವಿಶೇಷತೆ || ೪ ||
ಬುಡ ಬುಡ್ಕಿ ಬಾಬಾ

Tuesday, February 2, 2016

ಜನ್ಮಾಂತರ

ಜೀವನ
ಒಂದು
ನಿರಂತರ
ಪರೀಕ್ಷೆ
ಫಲಿತಾಂಶ
ಮಾತ್ರ
ಕೆಲವು
ಬಾರಿ
ತಟ್ಟನೆ
ಬಂದರೆ
ಇನ್ನೂ
ಕೆಲವು
ಬಾರಿ
ಕಾಯಬೇಕು
ಜನ್ಮಾಂತರ

ಪ್ರೀತಿಯೆಂಬ ಕನ್ನಡಿ

ಕೇಳಿದೆ
ದೇವರನು
ಮಾಡಿದೆ
ಏಕೆ
ಪ್ರೀತಿಯನು || ೧ ||

ದೇವರಂದ
ಎಲ್ಲರಲೂ
ಅಡಗಿದೆ
ಅಚ್ಚರಿಗೊಳಿಸುವ
ಸೌಂದರ್ಯ ||೨ ||

ತೋರಲು
ಆ ಸೌಂದರ್ಯ
ಮಾಡಿದೆ
ಪ್ರೀತಿಯೆಂಬ
ಕನ್ನಡಿ  || ೩ ||

ಪ್ರೀತಿಯಲಿ ಮಾತ್ರ

ಮುಖ ಪರಿಚಯದಲಿ
ಹಂಚಿಕೊಳ್ಳಬಹುದು
ನಸುನಗೆಯನು || ೧ ||

ಗುರುತಿನವರ ಜೊತೆಯಲಿ
ಹಂಚಿಕೊಳ್ಳಬಹುದು
ಬೈ ಟೂ ಕಾಫಿಯನು || ೨ ||

ಸ್ನೇಹದಲಿ
ಹಂಚಿಕೊಳ್ಳಬಹುದು
ಊಟ ತಿಂಡಿಯನು || ೩ ||

ಸಂಭಂಧದಲಿ
ಹಂಚಿಕೊಳ್ಳಬಹುದು
ಮನೆಯನು || ೪ ||

ವಿಶ್ವಾಸದಲಿ
ಹಂಚಿಕೊಳ್ಳಬಹುದು
ಸುಖ ದು:ಖಗಳನು || ೫ ||

ಪ್ರೀತಿಯಲಿ ಮಾತ್ರ
ಹಂಚಿಕೊಳ್ಳಬಹುದು
ತನ್ನನ್ನು ತಾನು || ೫ ||

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...