Tuesday, June 26, 2018

ಓಡಿದೆ ಓಡಿದೆ ಓಡಿದೆ

ಓಡಿದೆ ಓಡಿದೆ ಓಡಿದೆ
ಅರೆ ಘಳಿಗೆ ಕೂಡ ನಿಲ್ಲದೆ ಓಡಿದೆ
ಮೈ ಮನಗಳ ದಣಿವು ಲೆಕ್ಕಿಸದೆ ಓಡಿದೆ
ಕಾಲದ ಪರಿವೆ ಮರೆತು ಓಡಿದೆ
ಹುಟ್ಟಿದೂರು ಹಡೆದವರು
ಹೆಜ್ಜೆಗೆ ಹೆಜ್ಜೆ ಜೋಡಿಸಿ ನಡೆದವರು
ಎಲ್ಲರ ಕಡೆಗಣಿಸಿ ಓಡಿದೆ
ನನ್ನೇ ನಾ ಮರೆತು ಓಡಿದೆ
ಓಡಿದೆ ಓಡಿದೆ ಓಡಿದೆ || ೧ ||


ಓಡುತ್ತಾ ಓಡುತ್ತಾ ಮರೆತೇ ಬಿಟ್ಟೆ
ನಾ ಓಡುವುದು ಏತಕ್ಕಾಗಿ
ಯಾರನ್ನೋ  ಯಾವುದನ್ನೋ
ಹಿಂಬಾಲಿಸಿ ಹಿಡಿಯಲೋ
ಅಥವಾ
ಯಾರಿಂದಲೋ ಯಾವುದರಿಂದಲೋ
ಮರೆಯಾಗಿ ತಪ್ಪಿಸಿಕೊಳ್ಳಲೋ || ೨ ||

ದಿಗಿಲಾಗಿ ನಿಂತೆ  ಅಲ್ಲೇ ಆ ಕ್ಷಣ ನಾ
ಸುತ್ತ ಮುತ್ತ ನೋಡಿದರೆ ಯಾರಿಲ್ಲ
ಗೊತ್ತು ಗುರಿ ಒಂದಿಲ್ಲ
ಆದರೇನು
ಒಳಗಿನ ತಳಮಳ ನಿಂತಿಲ್ಲ
ನಿಂತ ಕ್ಷಣವೊಂದು ಅನಿಸಿತು ಯುಗದಂತೆ
ಪೂರ್ವದಲಿ ಸೂರ್ಯ ಹುಟ್ಟಿಲ್ಲ
ಪಶ್ಚಿಮದಲಿ ಸೂರ್ಯ ಮುಳಗಿಲ್ಲ
ಉತ್ತರ ನನಗೆ ಗೊತ್ತಿಲ್ಲ
ದಕ್ಷಿಣಕೆ ಹೋಗುವ ಮನಸಿಲ್ಲ
ಆದರೂ ನಿಲ್ಲಲಾರೆ ಇನ್ನು ನಿಂತಲ್ಲೇ ನಾ
ಅದಕಾಗೆ ಆದಿ ಕೊನೆಯಿರದ
ಗುರಿಯತ್ತ  ಮತ್ತೆ ನಾ
ಓಡಿದೆ ಓಡಿದೆ ಓಡಿದೆ || ೩ ||
 ಬುಡ ಬುಡ್ಕಿ ಬಾಬಾ

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...