Tuesday, October 24, 2017

ಆಗಾಗ

ಆ ಹಲಸಿನ ಮರ
ಆ ಚಿಕ್ಕು ಹಣ್ಣು
ಆ ಪೇರಲ ಮರ
ಆ ಸೀತಾ ಫಲ
ಆ ಹಳದಿ ಹೂವು
ಆ ಹಳೇ ಭಾವಿ
ಆ ಮಾವಿನ ತೋಪು
ಆ ಕೆಂಪು ಮಣ್ಣಿನ ಗೋಡೆ
ಆ ಗಡಗಡಿಗೆ ಸುತ್ತಿದ ಗುಲಾಬಿ ಮಾಂಜಾ ದಾರ
ಆ ಎಲೆಯ ಚಪ್ಪರದ ಮಣ್ಣಿನ ಆಟದ ಮನೆಗಳು
ಆ ಬೆಣಚು ಕಲ್ಲು ಕುಟ್ಟಿ ಮಾಡಿದ ಬೆಳಕು
ಆ ಬೆಕ್ಕಿನ ಮರಿ
ಆ ಮಧ್ಯಾನದ ಖಾಲಿ ರಸ್ತೆಗಳು
ಆ ಉದ್ದ ಉದ್ದ ದಿನಗಳು
ಆ ಮುಸ್ಸಂಜೆಯ ಸ್ತಬ್ದತೆ
ಆ ಗೆಳೆಯರ ಜೊತೆ ಹೊಡೆದ ಕಾಡು ಹರಟೆಗಳು
ಆ ರಾತ್ರಿಯಲಿ ಕಂಡ ನಕ್ಷತ್ರಗಳು
ಆ ಅನಂತ ಸಾಧ್ಯತೆಯ ಕನಸುಗಳು
ಆ ನೆನಪುಗಳು ಕಾಡುತ್ತವೆ ಆಗಾಗ
 ಬುಡ ಬುಡ್ಕಿ ಬಾಬಾ

Tuesday, October 3, 2017

ಗುಳೆ

ಹಳೇ ಪುಸ್ತಕದ ಹಾಳೆ ತೆರೆದಾಗ ಗೊತ್ತಾಯಿತು
ಅದೆಷ್ಟೋ ಅಕ್ಷರಗಳು ಹುಟ್ಟಿನಿಂದ ಜೊತೆಗಿದ್ದ
ಶಬ್ದ ವಾಕ್ಯಗಳ ಸಂಬಂಧ  ಕಡಿದು ಮತ್ತೆಂದೂ
ಮರಳದ ಜಾಗಕ್ಕೆ ಗುಳೆ ಹೋಗಿದ್ದವು
 ಬುಡ ಬುಡ್ಕಿ ಬಾಬಾ

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...