Thursday, June 30, 2016

ರುಚಿಯಾದ ಅಡಿಗೆ

ಏ ರುಚಿಯಾದ ಅಡಿಗೆ ಮಾಡೆ
ಎಂದು ಹೆಂಡತಿಗೆ ಕೇಳಿ ಕೇಳಿ
ಸೋತಿದ್ದೆ || ೧ ||

ಹೆಂಡತಿಯ ಪ್ರೀತಿಯ ಬಂಧುಗಳನ್ನು
ಮನೆಗೆ ಊಟಕ್ಕೆ ಕರೆದು
ಗೆದ್ದು ಬಿಟ್ಟೆ || ೨ ||

Friday, June 24, 2016

ಜನರೆಲ್ಲ ಕೆಟ್ಟವರು ಜಗವೆಲ್ಲ ಕೆಟ್ಟದ್ದು

ಜನರೆಲ್ಲ ಕೆಟ್ಟವರು ಜಗವೆಲ್ಲ ಕೆಟ್ಟದ್ದು
ಅಂತ ಕಾಣಿಸುತ್ತಿದೆಯೆ? || ೧ ||

ಹೌದು ಹೌದು ಹಾಗಾದರೆ ಮೊದಲು
ಬದಲಿಸು ನಿನ್ನ ದೃಷ್ಟಿಕೋನ || ೨ ||

ಸಾಧ್ಯವಿಲ್ಲ ಹಾಗಾದರೆ  ಕಡಿಮೆ ಮಾಡು
ಟೀವೀ ಸೀರಿಯಲ್ ನೋಡುವುದನು || ೪ ||

ಉಹೂ೦ ಇನ್ನೂ ಹಾಗೆ ಇದೆ ಹಾಗಾದರೆ ಮಾಡಿಸಿಕೋ
ಕಾಮಾಲೆ ರೋಗದ ಟೆಸ್ಟ್ || ೫ ||

ಕಾಮಾಲೆಯೂ ಇಲ್ಲವಂತೆ ಹಾಗಾದರೆ ಮಾಡಿಸಿಕೋ
ನಿನ್ನ ತಲೆಯ ಟೆಸ್ಟ್ || ೬ ||

ತಲೆಯೂ ಸರಿಯಾಗಿದೆಯಂತೆ ಹಾಗಾದರೆ ಇನ್ನೂ
ನಾವು ಏನು ಹೇಳೋಣ ಸ್ವಾಮಿ
ನಿಮ್ಮ ಕರ್ಮ ಅನುಭವಿಸಿ ಮಜಾ ಮಾಡಿ || ೭ ||

ಬುಡ ಬುಡ್ಕಿ ಬಾಬಾ

Thursday, June 23, 2016

ಮೌಲ್ಯಗಳ ಪತನ

ಅತಿ  ವೇಗವಾಗಿ
ಕೆಳಗೆ ಬೀಳಲು
ಸರಳ  ದಾರಿ ತನ್ನ
ಮೌಲ್ಯಗಳ  ಪತನ || ೧ ||

ಯಾರು ಒಮ್ಮೆ
ತನ್ನ ಮೌಲ್ಯಗಳ
ಪತನ ಆರಂಭಿಸುತ್ತಾನೋ
ಅವನು
ಇದಕಿಂತ ಇನ್ನೇನೂ
ಹೆಚ್ಚು ಬೀಳಲು
ಸಾಧ್ಯವೇ ಇಲ್ಲ
ಎಂದು ವಿಚಾರ
ಮಾಡುವಷ್ಟರಲ್ಲಿ
ಅದಕಿಂತ
ಕೆಳಗೆ ಬಿದ್ದು
ಹೊಸ ದಾಖಲೆ
ಬರೆದು ಬಿಡುತ್ತಾನೆ  || ೨ ||

ಬುಡ ಬುಡ್ಕಿ ಬಾಬಾ

ಧೂಳು ಹಾಗೂ ಬೆಳಕು

ಅಂದು ಕೊಂಡೆ ಮನೆಯಲ್ಲಿ ಧೂಳು ಜಾಸ್ತಿ ಎಂದು
ಆದರೆ ಧೂಳಲ್ಲ ಬೆಳಕು ಜಾಸ್ತಿ
ಕಡಿಮೆ ಧೂಳಿದ್ದರೂ ಎದ್ದು ಕಾಣುವುದದು ಬೆಳಕಿಗೆ || ೧ ||

ಬೆಳಕಿನಲ್ಲಿರುವ ಸಾರ್ವಜನಿಕ ವ್ಯಕ್ತಿಗಳಿಗೊಂದು ಪಾಠ
ಧೂಳು ಬೆಳಕಿನ ಆಟದಿಂದ
ಚಿಕ್ಕ ಅವಗುಣವು ದೊಡ್ಡದಾಗಿ ಕಾಣುವುದೆಲ್ಲರಿಗೆ ಹುಶಾರಾಗಿರಿ || ೨ ||

ಬುಡ ಬುಡ್ಕಿ ಬಾಬಾ

Thursday, June 16, 2016

ಹದ (ಶ್ರೀಧರ ಬಳಗಾರ : ಹದ ಕತೆಯ ಭಾವಾನುವಾದ - ಮಯೂರ - ಜೂನ್ - ೨೦೧೬)

ಪ್ರಕೃತಿಯು ಅಡಗಿಸಿದೆ
ಉತ್ಕೃಷ್ಟತೆಯ
ಮೂಲ ದ್ರವ್ಯವನ್ನು
ಅರಿತರೂ ಅರಿಯದಂತೆ ಯಾರಿಗೂ
ಕರೆಯುವರು ಅದನೆ
ಹದವೆಂದು || ೧ ||

ನಳನ ಪಾಕದ ರುಚಿಯಲಿ
ವೈದ್ಯನ ಕೈಗುಣದಲಿ
ಕಮ್ಮಾರನ ಹೊಡೆತದಲಿ
ಕಲಾಕಾರನ ಕಲೆಯಲಿ
ಸಾಹಿತಿಯ ಸಾಹಿತ್ಯದಲಿ
ಆಟಗಾರನ ಆಟದಲಿ
ತಂತ್ರಜ್ಞನ ಯಂತ್ರದಲಿ
ಮುತ್ಸದ್ಧಿಯ ಮಾತಿನಲಿ
ಪ್ರತಿ ಉತ್ಕೃಷ್ಟತೆಯಲಿ
ಅಡಗಿದೆ ಹದ || ೨ ||

ಹದವೆಂಬುದು ಕಲಿಯಲಾಗದು
ಶಾಲೆಯಲಿ ಕಲಿತ ವಿದ್ಯೆಯಂತೆ
ಹದಕಿಲ್ಲ ಸೂತ್ರ ಲೆಕ್ಕಾಚಾರ
ಹದವ ಒಲಿಸಿಕೊಂಡವ
ಕೂಡ ಹೇಳಲಾರ ಕಲಿಸಲಾರ
ಹದವೇನೆಂದು ಯಾರಿಗೂ || ೩ ||


ಪ್ರತಿ ನಿಷ್ಣಾತನ ಕುಶಲತೆ
ಸಂಯಮ ಕಸುಬಿನ ತಲ್ಲೀನತೆಯ
ದಾಟಿ ಉತ್ಕೃಷ್ಟತೆಯ
ಆಭಿವ್ಯಕ್ತಿಗೊಳಿಸುವ ಅವ್ಯಕ್ತ
ಶಕ್ತಿಯೇ ಹದ || ೪ ||

ಹದವರಿಯಬೇಕು
ಅನುಭವಿಸಿ ಮಾಡುವ
ಕೆಲಸದಲಿ ಶ್ರದ್ಧೆ ಜ್ಞಾನ ತುಂಬಿ
ಜೀವಿಸುವ ಪ್ರತಿ ಕ್ಷಣವ
ಅದರ ಧ್ಯಾನದಲೇ ಮುಳುಗಿ
ತಪದಂತೆ ಆಚರಿಸುವ
ಋಷಿಯಾಗಿ ಯೋಗಿಯಾಗಿ || ೫ ||  

ಬುಡ ಬುಡ್ಕಿ ಬಾಬಾ

Thursday, June 9, 2016

ಆಗ - ಈಗ

ಆಗೊಬ್ಬ ಕವಿ:

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು

ಎಲ್ಲ ಕೇಳಲಿ ಎಂದು ನಾನು ಹಾಡುವದಿಲ್ಲ
ಹಾಡುವದು ಅನಿವಾರ್ಯ ಕರ್ಮ ನನಗೆ

ಈಗೊಬ್ಬ ಪ್ರೋಗ್ರಾಮರ್:

FILE ತುಂಬಿ ಬರೆದೆನು CODE ನಾನು
ಮನವಿಟ್ಟು ಮಾಡಿದಿರಿ REVIEW ನೀವು

REVIEW ಮಾಡಲಿ ಎಂದು CODE ಮಾಡುವುದಿಲ್ಲ
CODE ಮಾಡುವದು ಅನಿವಾರ್ಯ ಕರ್ಮ ನನಗೆ

- ಬುಡ ಬುಡ್ಕಿ ಬಾಬಾ

Monday, June 6, 2016

ಪ್ರೀತಿ

ನೀನು ನಾನಾಗುವದು
ನಾನು ನೀನಾಗುವದು
ಅಲ್ಲ ಪ್ರೀತಿ
ನೀನು ನೀನಾಗಿ
ನಾನು ನಾನಾಗಿ
ಇರುವುದೇ ಪ್ರೀತಿ
ಬುಡ ಬುಡ್ಕಿ ಬಾಬಾ

Sunday, June 5, 2016

ಕರಾಗ್ರೇ ಅಲ್ಲ ಮೊಬೈಲ್ ಅಗ್ರೇ

ತಮ್ಮ ಕರಗಿಂತ ಮೊಬೈಲ್ನಲ್ಲಿ  ತಮ್ಮ ಅದೃಷ್ಟ ಕಂಡಾಗ

ಮೊಬೈಲ್ ಅಗ್ರೇ ವಸತೇ whatsapp
ಮೊಬೈಲ್ ಮಧ್ಯೆ facebook
ಮೊಬೈಲ್ ಮೂಲೆ twitter
ಪ್ರಭಾತೇ ಮೊಬೈಲ್ ದರ್ಶನಂ || ೧ ||

ಮೊಬೈಲ್ ಅಗ್ರೇ ವಸತೇ amazon
ಮೊಬೈಲ್ ಮಧ್ಯೆ myntra
ಮೊಬೈಲ್ ಮೂಲೆ flipkart
ಪ್ರಭಾತೇ ಮೊಬೈಲ್ ದರ್ಶನಂ || ೨ ||

Wednesday, June 1, 2016

ಕ್ಷಮಿಸಲಾಗದು

ಕ್ಷಮಿಸಿಬಿಡಬಹುದು
ಯಾವುದಕ್ಕಾದರೂ
ಮಾಡಿದ
ನಂಬಿಕೆ ದ್ರೋಹವನ್ನು || ೧ ||

ಕ್ಷಮಿಸಿಬಿಡಬಹುದು
ಯಾರನ್ನಾದರೂ || ೨ ||

ಕ್ಷಮಿಸಲಾಗದು
ತನ್ನದೇ ಹಿರಿಮೆಗೆ ಅಳುಕಿ
ಅದನು ಅದುಮುವ
ಹೇಡಿಯನ್ನು || ೩ ||

ಬುಡ ಬುಡ್ಕಿ ಬಾಬಾ

ಸ್ಪೂರ್ತಿ:
"Anything may be betrayed, anyone may be forgiven. But not those who lack the courage of their own greatness."
  • Chapter XVI, p. 720 ; thoughts of Gail Wynand, Fountainhead

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...