Thursday, April 27, 2017

ಕರಿ ನೆರಳು

ಸಂಬಂಧಗಳು ಘಾಢವಾಗಿ
ಆಲದ ಮರದ ಬೇರಂತೆ
ಎಲ್ಲ ಆಯಾಮಗಳಲಿ ಹರಡಿ
ಬೆಸೆಯಬೇಕೇನೋ ನಿಜ
ಆದರೆ ಅದರ ನೆರಳು
ಆ ಆಲದ ಮರದ ಸುತ್ತಲೂ
ಬೇರೇನೂ ಬೆಳೆಯದಂತ
ಕರಿ ನೆರಳಾಗಬಾರದಲ್ಲವೇ?



ಪಾತ್ರ

ಒಳ್ಳೆಯದು  ಕೆಟ್ಟದ್ದು
ಕಪ್ಪು  ಬಿಳಿಯಂತೆ
ಹಳಿಯದಿರೂ ಯಾವುದನ್ನೂ
ಎರಡಕ್ಕೂ ಇದೆ
ತನ್ನದೇ  ಒಂದು
ಅನನ್ಯ ಪಾತ್ರ
ಈ ಜಗವೆಂಬ ರಂಗಭೂಮಿಯಲಿ
ಎರಡು ಇದ್ದಾಗಲೇ
ಜೀವನ ನಾಟಕದಲಿ
ನವರಸಾನುಭವ

Saturday, April 22, 2017

DATA STRUCTURE

ಹೊಸತಾಗಿ  ಸಾಫ್ಟ್‌ವೇರ್ ಇಂಜಿನಿಯರ್ ಆದ
ಸುಧಿಗೆ ಡಾಟಾ ಸ್ಟ್ರಕ್ಚರ್ಗಳ ಗುಂಗು ಹಿಡಿಯಿತಂತೆ
ಎಲ್ಲಿ ನೋಡಿದರೂ ಅವೇ ಕಂಡಾಗ ಹೀಗಾಯಿತಂತೆ || ೧ ||

ರಾಮಾಯಣ ನೋಡುತ್ತಾ ಕುಳಿತ ಅಜ್ಜ
ಹೇಳಿದನಂತೆ ನೋಡೋ ಅಲ್ಲಿ ಹನುಮಂತನ
ಬಾಲ ಹೇಗೆ ಬೆಳೀತಾ ಇದೆ ಎಂದು
ಅದಕೆ  ಸುಧಿ ಅಂದನಂತೆ ಅದು
ಬೆಳೀತಾ ಇದೆ ನಮ್ಮ ಲಿಂಕ್ ಲಿಸ್ಟ್‌ಗಳಂತೆ  ||೨ ||

ಆಟವಾಡುತ್ತಾ ಕುಳಿತ ತಂಗಿ ಕೇಳಿದಳಂತೆ
ಸುಧಿ ಅಣ್ಣಾ ನಾನು ನಿನ್ನೆ ಆಡುತಿದ್ದ
ಆಟಿಗೆ ಈ ಆಟಿಗೆಗಳ ಡಬ್ಬದಲಿ ಸಿಗುತಿಲ್ಲ
ಅದಕೆ ಸುಧಿ ಅಂದನಂತೆ ಅದೊಂದು
ಸ್ಟ್ಯಾಕ್ ಡಾಟಾ ಸ್ಟ್ರಕ್ಚರ್ ಕಣೆ
ಒಂದೊಂದೇ  ತಗೆದು ನೋಡು
ಫರ್ಸ್ಟ್ ಹೋಗಿದ್ದು ಸಿಗುವುದು ಲಾಶ್ಟಿಗೆ || ೩ ||


ಅಪ್ಪ ಅಂದರಂತೆ ನೋಡಲ್ಲಿ ನಿನ್ನ
ಚಿಕ್ಕಪ್ಪನ ಮಗನ ಮದುವೆಯಂತೆ
ಸುಧಿ ನಿನಗೇನಾದರೂ ಗೊತ್ತಾ
ಕುಟುಂಬ ಸಂಸಾರ ಅಂದರೇನಂತೆ
ಅದಕೆ ಇವನಂದನಂತೆ ಅದೊಂದು
ಟ್ರೀ ಡಾಟಾ ಸ್ಟ್ರಕ್ಚರ್ ಅಷ್ಟೇ ಬಿಡಪ್ಪಾ ||೪ ||

ಗೆಳೆಯರೆಲ್ಲ ಸಿನಿಮಾ ಟಿಕೇಟು
ಕೊಳ್ಳಲು ನಿಂತಿದ್ದರಂತೆ ಸಾಲಲ್ಲಿ
ಅದಾಗಲೇ ತನ್ನ ಟಿಕೇಟು ಕೊಂಡ
ಸುಧಿಯನ್ನು ಕಂಡು ಅವರಂದರಂತೆ
ಅದು ಹೇಗೋ ನಿನಗೆ ಸಿಕ್ತು
ಅದಕಂದನಂತೆ ಈ ಸಾಲೊಂದು
ಫೀಫೋ ಡಾಟಾ ಸ್ಟ್ರಕ್ಟ್ರು ಗುರು
ಫರ್ಸ್ಟ್ ಇನ್ ಫರ್ಸ್ಟ್ ಔಟ್ || ೫ ||
 ಬುಡ ಬುಡ್ಕಿ ಬಾಬಾ


Wednesday, April 19, 2017

ಹನಿಮೂನ

ಹನಿಮೂನ
ಬೇಕಿಲ್ಲವಂತೆ
ಮದುವೆಯಾದ
ಕೂಡಲೇ
ಹನಿಮೂನನ್ನು
ಕಾದಿರಸಬೇಕಂತೆ
ಮುಂದೆಂದೋ
ಬಂದೆರಗುವ
ಹತ್ತಿರವಾಗಿದ್ದರೂ
ಜತೆ ಜತೆಯಾಗಿರದ
ದಿನಗಳಿಗೆಂದು
 ಬುಡ ಬುಡ್ಕಿ ಬಾಬಾ

ಸ್ಪೂರ್ತಿ: ಬಸು ಭಟ್ಟಾಚಾರ್ಯ ಅವರ ಗೃಹಪ್ರವೇಶ ಚಿತ್ರ

Sunday, April 16, 2017

ಮರಿಬೇಡ

ನನಗೆ ಅನ್ಯಾಯವಾಯಿತೆಂದು
ಅಳುವಾಗ
ನೀ ಮಾಡಿದ ಅನ್ಯಾಯಗಳ
ಮರಿಬೇಡ

Sunday, April 9, 2017

ಮಗುವಿನ ಚಿತ್ರ

ಪಾತರಗಿತ್ತಿಯ ಬಣ್ಣ ಬಣ್ಣದ
ಮನಮೋಹಕ ಅಂದಕ್ಕೆ ಮನಸೋತು
ಮುಗ್ಧ ಮಗುವೊಂದು
ಓಡಿತು ಅದರ ಹಿಂದೆ ಹಿಂದೆ
ಅದರಂದವನು ಸವಿಯಲು ಹತ್ತಿರದಿಂದ || ೧ ||

ಮಗು ಹತ್ತಿರ ಹೋದಂತೆಲ್ಲ
ಪಾತರಗಿತ್ತಿ  ಹಾರಿ ಹೋಯಿತು ಅತ್ತಿತ್ತ
ಹತ್ತಿರದಿಂದ ನೋಡಲಾಗದೆ
ನಿರಾಸೆಗೊಂಡಿತು ಆ ಮಗು || ೨ ||

ತನ್ನ ನಿರ್ಮಲ ಮನಸಿಂದ
ಗೀಚಿತು ಅಂಕು ಡೊಂಕಾದ 
ಗೆರೆಗಳಿಂದ ಹೂವಿನ ಚಿತ್ರವನು
ತುಂಬಿ ತುಳುಕಿತ್ತು ಬಣ್ಣ ಆ ಚಿತ್ರದಲಿ
ಮಗುವಿನ ಹೃದಯದಂತೆ || ೩ ||

ನೋಡು ನೋಡುತ್ತಲೇ
ಬಂದು ಕುಳಿತಿತು
ಪಾತರಗಿತ್ತಿಯೊಂದು
ಆ ಹೂವಿನ ಮೇಲೆ || ೪ ||
 ಬುಡ ಬುಡ್ಕಿ ಬಾಬಾ

Saturday, April 8, 2017

ಹುಚ್ಚು ಗುಂಗು

ಹಚ್ಚಕೋಬೇಕು  ಹುಚ್ಚು
ಬೀಳಬೇಕು ಆ ಹುಚ್ಚಿನ
ಪಾತಾಳಕ್ಕೆ
ಹಚ್ಚಕೋಬೇಕು  ಗುಂಗು
ತಲುಪಬೇಕು ಆ ಗುಂಗಿನ
ತುತ್ತುದಿಗೆ

Friday, April 7, 2017

ಭಾವ ಸ್ಪಟಿಕ

ನನ್ನ ಕವನಗಳಲ್ಲ
ರೇಸಿನ ಕುದುರೆಗಳು ||೧ ||

ರೇಸಿನ ಕುದುರೆಗಳಿಗಿದೆ
ಸ್ಪರ್ಧಿಸುವ ಧಾವಂತ
ಮೊದಲು ಗುರಿ ತಲುಪಿ
ಸವಾರನ ಮೆಚ್ಚಿಸುವ
ಅನಿವಾರ್ಯತೆ ||೩ ||

ಕವನಗಳಿಗಿಲ್ಲ ಎಲ್ಲೂ
ಸ್ಪರ್ಧಿಸುವ ಧಾವಂತ
ಅವಕಿಲ್ಲ ಅರ್ಥದ ಗುರಿ
ಮುಟ್ಟಿ ಓದುಗರ
ಮೆಚ್ಚಿಸುವ ಅನಿವಾರ್ಯತೆ || ೪ ||

ಈ ಕವನಗಳು ಬರೀ
ಶುಧ್ಹ ಭಾವ ಸ್ಪಟಿಕಗಳು || ೫ ||

Monday, April 3, 2017

ಸುಲಭ - ಕಷ್ಟ

ಬೇರೆಯವರ ತಪ್ಪುಗಳನು ತೋರಿ
ನಮ್ಮ ತಪ್ಪುಗಳೇನು ಮಹಾ
ಅಂದು ಕೊಳ್ಳುವುದು ಸುಲಭ || ೧||

ಬೇರೆಯವರ ಸಾಧನೆ ತೋರಿ
ನಮ್ಮ ಸಾಧನೆ ಏನು ಮಹಾ
ಅಂದು ಕೊಳ್ಳುವುದು ಕಷ್ಟ || ೨||

 ಬುಡ ಬುಡ್ಕಿ ಬಾಬಾ

Saturday, April 1, 2017

ಧ್ಯಾನ

ನಾ ಕೇಳೆದೆ
ಬುಡ ಬುಡ್ಕಿ ಬಾಬಾ ಬರೀ
ಬಡ ಬಡಿಸೋದು ಬಿಟ್ಟು
ಒಂದು ಸ್ವಲ್ಪ
ಧ್ಯಾನ ಅಂದರೇನು ಹೇಳೋ?

ಧ್ಯಾನ ನೀ ತಿಳ್ಕೊಂಡಂಗ
ಭಾರೀ ದೊಡ್ಡ ಕಷ್ಟ ಏನಲ್ಲ
ಧ್ಯಾನ ಅಂದರ ತನ್ನ್ನ ಜೋಡೆ
ತಾ ಮಾತಾಡೋದು
ಅಷ್ಟನೋ ಹುಚ್ಚಪ್ಪ || ೨ ||

ನಿನ್ನ ಮಾತ ಕೇಳಿ ನನ್ನ ಜೋಡಿ
ನಾ ಮಾತಾಡಕೋತ ಕೂತರ
ಜನ ನನ್ನ ಹುಚ್ಚ ಅಂತಾರ ಅಷ್ಟ
ಅದಕ ಅಂದ ಅವ
ಅನ್ನಲಿ ಬಿಡೋ
ಜನ ಏನಾರ ಒಂದ ಅನ್ನವರ
ಇದ ಧ್ಯಾನದ ಮೊದಲನೇ ಮೆಟ್ಟಿಲು || ೩ ||

ನೀ ಮೊದಲ ಬಾಯಿ ತಗದ
ಜೋರಾಗಿ ನಿನ್ನ ಜೋಡೆ ನೀ
ಮಾತಾಡೋದ ಕಲಿ
ಸ್ವಲ್ಪ ರೂಢಿ ಆದ ಮ್ಯಾಲ
ಪಿಸು ಮಾತನ್ಯಾಗ ಮಾತಾಡಿದ್ರು
ನೀ ಮಾತಾಡೋದೊ ನಿನಗ ಕೆಳಸ್ಥದ
ಇದ  ಧ್ಯಾನದ ಎರಡನೇ ಮೆಟ್ಟಿಲು  || ೪ ||

ಅದಾದ ಮ್ಯಾಲ ನೀ ಸುಮ್ಮನ
ಕಣ್ಣ ಮುಚ್ಕೊಂಡ ಕೂತ್ರ
ಸಾಕು ನಿನ್ನೊಳಗಿನ ಜೀವ
ನಿನ್ನ ಹತ್ರ ಬರತಾನ
ಒಂದ ಮಾತ ಆಡದೆನೆ
ಒಬ್ಬರಬೊಬ್ಬರಿಗೆ ಅರ್ಥ ಆಗ್ತದ
ಅದ ಧ್ಯಾನ ನೋಡು  || ೪ ||

ನಾ ಧ್ಯಾನ ಸರಿ ಮಾಡಾಕ
ಹತ್ತೀನಿ ಅಂತ ನನಗ
ಹ್ಯೆಂಗ ಗೊತ್ತಾ ಆಗೋದೋ
ಅಂತ ಕೇಳದೆ
ಅದಕಂದ ನಿನ್ನ ಎದ್ಯಾಗಿನ
ಭಾರ ಕಮ್ಮಿ ಆಗಿ ಹಗರ
ಅದರ ನೀ ಧ್ಯಾನ ಸರಿ
ಮಾಡಿ ಅಂತ ತಿಳಕೋ || ೫ ||

 ಬುಡ ಬುಡ್ಕಿ ಬಾಬಾ

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...