Saturday, January 30, 2016

ರೂಪಾಂತರ

ಭಾಳ ಛ೦ದಿತ್ತು ಪ್ರೀತಿ ಭಾಳ ಛ೦ದಿತ್ತು
ಜಗವ ಕಾಣುವ ರೀತಿ ಅದು ಬದಲಿಸಿತ್ತು
ಹುಚ್ಚೆಂದು ಅನಿಸಿದ್ದು ಸರಿ ಎಂದು ಅನಿಸಿತ್ತು || ಪ ||

ಪ್ರತಿ ಎದೆ ಬಡಿತದಲ್ಲೂಸಂಗೀತ ತುಂಬಿತ್ತು
ಪ್ರತಿ ಉಸಿರಿನಲ್ಲೂ ಪರಿಮಳವು ಬೆರೆತಿತ್ತು
ಪ್ರತಿ ಮಾತಿನಲ್ಲೂ ಜೇನು ಸುರಿದಿತ್ತು
ಪ್ರತಿ ಹೆಜ್ಜೆಯಲ್ಲೂ ತಾಳ ಕಂಡಿತ್ತು || ೧ |||

ಕಪ್ಪು ಬಿಳುಪಿನಲ್ಲೂ ಕೂಡ ಬಣ್ಣ ಬೆರೆತಿತ್ತು
ಮುಳ್ಳೆಲ್ಲಾ ಬರಿದಾಗಿ ಬರಿ ಹೂವು ಕಂಡಿತ್ತು
ಪ್ರತಿ ಕೆಲಸದಲ್ಲೂ ಉತ್ಸಾಹ ತುಂಬಿತ್ತು
ಆಕಾಶವೂ ಕೂಡ ಬಲು ಸನಿಹ ಅನಿಸಿತ್ತು || ೨ ||

ಪ್ರೀತಿಯ ರೂಪ ಮನಸ ತುಂಬಿತ್ತು
ಆನಂದದ ಅಣೆಕಟ್ಟೆ ಒಡೆದು ಹರೆದಿತ್ತು
ಹರಿದ ನೀರು ತಿಳಿಯಿತ್ತು ಸವಿಯಿತ್ತು
ಎಲ್ಲಡೆ ಸಂಭ್ರಮದ ಪೈರು ಕಂಗೊಳೆಸಿತ್ತು || ೩||

ತಂತ್ರಜ್ಞಾನ

ಒಂದಾನೊಂದು
ಕಾಲದಲ್ಲಿ
ಸರಳವಾಗಿತ್ತು
ಜೀವನ
ಜಟಿಲವಾಗಿತ್ತು
ತಂತ್ರಜ್ಞಾನ

ಜೇವನವೆಲ್ಲ
ತೇದು
ಸರಳವಾಗಿಸ್ಸಿದೇವೆ
ತಂತ್ರಜ್ಞಾನ
ಆದರೆ
ಏನಾಗಿದೆ ಜೀವನ?

Friday, January 29, 2016

ಅದು GIT




ಹಣ್ಣಿನ
ರಾಜನ
ತೋಟದಲಿರುವ
ಕಾಲೇಜುಗಳ
ರಾಜನ
ಬಲ್ಲೆಯಾ?
ಅದು GIT

ಉದ್ಯಮಬಾಗದಲಿದ್ದು
ಉದ್ಯಮಶೀಲತೆ
ಕಲಿಸುವ
ವಿದ್ಯಾಮಂದಿರವ
ಬಲ್ಲೆಯಾ?
ಅದು GIT

ಬೆಳಗಾವಿಯ
ಬೆಳಕಿನ
ಪ್ರಭೆಯನು
ಹೆಚ್ಚಿಸಿದ
ನಕ್ಷತ್ರವ
ಬಲ್ಲೆಯಾ?
ಅದು GIT

http://www.git.edu/

ನಕ್ಷತ್ರಗಳು ನಕ್ಷತ್ರಗಳು

ನಕ್ಷತ್ರಗಳು ನಕ್ಷತ್ರಗಳು
ಸ್ವ ಪ್ರಭೆಯಿಂದ ಎತ್ತರದಲಿ ಕಂಗೊಳಿಸುವ
ನಕ್ಷತ್ರಗಳು || ಪ ||

ಇರುವವಿವು ಕೋಟಿ ಕೋಟಿ
ಮೈಲುಗಳ ಆಚೆ
ಬೆಳಕಿನ ವೇಗದಲಿ ಚಲಿಸಿದರೂ
ಕೂಡ ವರುಷಗಳೇ ಬೇಕಂತೆ
ನಕ್ಷತ್ರಗಳ ಪ್ರಭೆ ತಲುಪಲು ಭುವಿ || ೧ ||

ಸಾರುತಿವೆ ಇವು ಜಗಕೆ ಸಂದೇಶ
ಸ್ವ ಪ್ರಭೆಯಿಂದ ಕೂಡಿ  ಬೆಳೆದರೆ ಎತ್ತರ
ತಡವಾಗಬಹುದು ಆದರೆ
ಮಿನುಗುವದು ಖಂಡಿತ
ಮುಂದೊಂದು ದಿನ || ೨ ||
ಬುಡ ಬುಡ್ಕಿ ಬಾಬಾ

ಹರ ಹರ ಮಹಾದೇವ್ !

ಹೋರಾಟದ
ಗುರಿಯನ್ನು
ಗೆಲುವಿನಿಂದ
ಉಳಿವಿಗಾಗಿ
ಬದಲಾಯಿಸುವ
ಬದಲು
ಅಳಿಯುವುದು
ವಾಸಿ || ೧ ||

ತಲೆ ಬಾಗಿ
ತಲೆ
ಉಳಿಸಿಕೊಳ್ಳುವ
ಬದಲು
ತಲೆ ಎತ್ತಿ
ತಲೆ
ಉರುಳಿಸಿಕೊಳ್ಳುವದು
ವಾಸಿ || ೨ ||


Thursday, January 28, 2016

ಈ ಭುವಿ

ಈ ಭುವಿ
ಒಂದು
ದವಾಖಾನೆ
ಕೆಲವರು
VIP WARD ನಲ್ಲಿದ್ದರೆ
ಇನ್ನು ಕೆಲವರು
GENERAL WARD ನಲ್ಲಿ

ಗಮನಿಸ ಬೇಕಾದ
ಅಂಶ ಒಂದೇ
ಈ ಭುವಿ ಮೇಲೆ
ಹುಟ್ಟಿದ್ದೇವೆ ಎಂದರೆ
ಭವ ರೋಗಿಗಳು ನಾವು

ಭವ ರೋಗ
ಗುಣವಾಗಿ
DISCHARGE CERTIFICATE
ಸಿಗಲು ಭವ ರೋಗ ವೈದ್ಯನಾದ
ಆ ಭಗವಂತನ ಅನುಗ್ರಹ
ಬೇಕು



ಪ್ರೇರಣೆ : ವ್ಯಾಸನಕೆರೆ ಪ್ರಭಂಜನಚಾರ್ಯರ ಪ್ರವಚನ

ಏಳು ನನ್ನಾತ್ಮಗಳು (ಅನುವಾದ: THE SEVEN SELVES - Kahlil Gibran)

ರಾತ್ರಿಯ ಒಂದು ನಿಶ್ಯಬ್ದ ಘಂಟೆಯಲ್ಲಿ
ಅರ್ಧ ನಿದ್ದೆಯಲ್ಲಿದ್ದಾಗ ನನ್ನಲ್ಲೇ
ಇರುವ ಏಳು ನನ್ನಾತ್ಮಗಳು
ಎದ್ದು ಪಿಸು ಮಾತಿನಲ್ಲಿ ಚರ್ಚಿಸುತ್ತಿದ್ದವು || ೦ ||

ಮೊದಲನೇ ಆತ್ಮ ಅಂದಿತು ಈ
ಹುಚ್ಚ ಮನುಜನಲ್ಲಿ ಇಷ್ಟು ವರ್ಷ ಇದ್ದು
ದಿನದಲ್ಲಿ ಈತನ ನೋವನ್ನು ನವೀಕರಿಸುವ
ರಾತ್ರಿಯಲ್ಲಿ ಈತನ ದು:ಖವನ್ನು ಪುನರನಿರ್ಮಿಸುವ
ನನ್ನ ವಿಧಿಯನ್ನು ಇನ್ನೂ ಹೆಚ್ಚು ತಡೆಯಲಾರೆ
ನಾನಿಂದೇ ಬಂಡಾಯ ಏಳುತ್ತೇನೆ || ೧ ||

ಎರಡನೇ ಆತ್ಮ ಅಂದಿತು ನಿನ್ನದು ನನಗಿಂತ
ಎಷ್ಟೋ ವಾಸಿ ನನಗೆ ಕೊಟ್ಟಿರುವದು ಈ
ಹುಚ್ಚ ಮನುಜನಿಗಾಗಿ ಸಂಭ್ರಮಿಸುವ  ಕೆಲಸ
ಆತನ ನಗುವಲ್ಲಿ ನಗುವಾಗಿ ಅನಂದಲಿ ಹಾಡಿ
ಆತನ ಉತ್ತಮ ವಿಚಾರಗಳಿಗೆ ಹೆಜ್ಜೆ ಹಾಕಿ ಕುಣಿಯಬೇಕು
ಈ ಉತ್ಸಾಹಗುಂದಿದ  ಅಸ್ತಿತ್ವದ ವಿರುದ್ಧ
ನಾನಿಂದೇ ಬಂಡಾಯ ಏಳುತ್ತೇನೆ || ೨ ||

ಮೂರನೆಯ ಆತ್ಮ ಅಂದಿತು
ನನ್ನದೇನು ಗೊತ್ತೇ?
ಪ್ರೀತಿಗೆ ಅ೦ಟಿರಬೇಕು ನಾನು
ದೀಪದ ಬೆಂಕಿಯಂತೆ ಉರಿಯಬೇಕು ಈತನ
ಭಾವೋದ್ವೇಗಕ್ಕೆ ಹಾಗೂ ನಂಬಲಸಾಧ್ಯವಾದ ಆಸೆಗಳಿಗೆ
ಈ ಪ್ರೇಮ ರೋಗದಿಂದ ಬಳಲಿರುವ
ನಾನಿಂದೇ ಬಂಡಾಯ ಏಳುತ್ತೇನೆ || ೩ ||

ನಾಲ್ಕನೆಯ ಆತ್ಮ ಅಂದಿತು
ನಿಮ್ಮೆಲ್ಲರಲ್ಲಿ ನಾನೇ ನಿಕೃಷ್ಟ
ನನಗೆ ಕೊಟ್ಟಿರುವ ಕೆಲಸ
ಹೇಯವಾದ ಹಗೆ ಮತ್ತು ವಿನಾಶಕಾರಿಯಾದ ದ್ವೇಷ
ಅದಕ್ಕೆ ಬಿರುಗಾಳಿಯಂತಿರುವ ಹಾಗೂ
ನರಕದ ಕಪ್ಪು ಗವಿಯಲ್ಲಿ ಹುಟ್ಟಿರುವ
ನಾನಿಂದೇ ಬಂಡಾಯ ಏಳುತ್ತೇನೆ || ೪ ||

ಐದನೆಯ ಆತ್ಮ ಅಂದಿತು
ಸಾಧ್ಯವಿಲ್ಲ,  ವಿಚಾರ ಮಾಡುವ ನಾನು
ಕೇವಲ ಕಾಲ್ಪನಿಕನಾದ ನಾನು
ಸದಾ ಹಸಿವೆ ಹಾಗೂ ನೀರಡಿಕೆಯಿಂದ ಕೂಡಿ
ವಿರಾಮವಿರದೆ ಗೊತ್ತಿರದರ ಹಿಂದೆ ಅಲಿಯುವ
ನಾನಿಂದೇ ಬಂಡಾಯ ಏಳುತ್ತೇನೆ || ೫ ||

ಆರನೆಯ ಆತ್ಮ ಅಂದಿತು
ಮತ್ತೆ ನಾನು ಕೆಲಸ ಮಾಡುವ ನಾನು
ಕರುಣಾಜನಕ ಶ್ರಮಗಾರನಾದ ನಾನು
ಸಹನೆಯಿರುವ ಕೈ ಹಾಗೂ ಆಸೆ ಭರಿತ ಕಣ್ಣುಗಳಿಂದ ಕೂಡಿರುವ
ಆಕಾರವಿರದವುಗಳಿಗೆ ಆಕಾರ ಕೊಡುವ ಏಕಾಂಗಿಯಾದ
ನಾನಿಂದೇ ಬಂಡಾಯ ಏಳುತ್ತೇನೆ || ೬ ||

ಏಳನೆಯ ಆತ್ಮ ಅಂದಿತು
ಇದೇನು ವಿಚಿತ್ರ ಪ್ರತಿಯೊಬ್ಬರಿಗೂ ಪಾಲಿಸಲು ವಿಧಿಲಿಖಿತ ಇದ್ದಾಗೂ
ಈ ಹುಚ್ಚ  ಮನುಜನ ವಿರುದ್ಧ ಬಂಡಾಯ ಏಳಬೇಕೆಂದಿರುವಿರಿ
ಅಯ್ಯೋ ನಾನಾಗಿರಬಾಗಿತ್ತೇ ನಿಮ್ಮಂತೆ ವಿಧಿಲಿಖಿತ  ಹೊಂದಿದವ
ಆದರೆ ನನಗಿಲ್ಲ ನಿಮ್ಮ ಭಾಗ್ಯ ನಾನು ಏನು ಮಾಡದವ
ಕುಳಿತಿರುತ್ತೇನೆ ಹೆಡ್ಡನಂತೆ ಖಾಲಿಯಾಗಿ
ನೀವೆಲ್ಲಾ ಜೇವನವನ್ನು ಮರು ಸೃಷ್ಟಿಸುವಾಗ || ೭ ||

ಆದ ಕೇಳಿ ನೋಡಿದವು ಉಳಿದಾರು ಆತ್ಮಗಳು ಕನಿಕರದಿಂದ
ಏಳನೆಯ ಆತ್ಮದ ಕಡೆಗೆ ಹಾಗೂ ಉರಳಿದವು ಮರಳಿ ಗಾಢ ನಿದ್ದೆಗೆ
ತುಂಬಿ ಹೊಸ ಹಾಗೂ ಸಂತೋಷಭರಿತ ವಿಧೇಯತೆಯಿಂದ
ಆದರೆ ಏಳನೇ ಆತ್ಮ ಮಾತ್ರ ಎಚ್ಚರದಿಂದ ದಿಟ್ಟಿಸಿ ನೋಡುತ್ತಲೇ ಇತ್ತು
ಉಳಿದೆಲ್ಲದರ ಹಿಂದಿನ ಶೂನ್ಯತೆಯನ್ನು || ೮ ||
ಬುಡ ಬುಡ್ಕಿ ಬಾಬಾ

ಅನುವಾದ: THE SEVEN SELVES - Kahlil Gibran

http://www-personal.umich.edu/~jrcole/gibran/madman/madman.htm#The Seven

ಕೈಯಲ್ಲಿ ಕೈ ಹಿಡಿದು

ಗೆಳತಿ
ಅಲ್ಲ
ನನ್ನ
ನಿನ್ನ
ದಾರಿ
ಒಂದೇ
ಆದರೂ
ನಡೆಯಬೇಕಿದೆ
ನಾವು
ಕೈಯಲ್ಲಿ
ಕೈ ಹಿಡಿದು
ಬುಡ ಬುಡ್ಕಿ ಬಾಬಾ

Inspired by: http://www-personal.umich.edu/~jrcole/gibran/madman/madman.htm#The Two Hermits

Wednesday, January 27, 2016

ಯಾರಿಗೂ ಬೇಡದ ಕೆಲಸ

ಯಾರಿಗೂ
ಬೇಡದ
ಕೆಲಸ
ನಿಮಗೆ
ಬಂದಾಗ
ಅದರ
ಮೇಲೆ
ಸೇಡು
ತೀರಿಸಿಕೊಳ್ಳಲು
ದಾರಿ
ಒಂದೇ

ಮಾಡಿ ಆ
ಕೆಲಸವನ್ನು
ಹಿಂದೆಂದೂ
ಯಾರು
ಮಾಡಿರದ
ಹಾಗೆ
ಮುಂದೆಂದೂ
ಅಂಥ
ಕೆಲಸ
ಯಾರಿಗೂ
ಬರದ
ಹಾಗೆ

ಬುಡ ಬುಡ್ಕಿ ಬಾಬಾ

Tuesday, January 26, 2016

MADE FOR EACH OTHER

ಮದುವೆಯಾಗುವ
ಮೊದಲು
ಊಹಿಸಿಯೂ
ಇರಲಿಲ್ಲ
MADE FOR EACH OTHER ನ್ನು
ಉಪಯೋಗಿಸಬಹುದು
ಬದ್ಧ ವೈರಿಗಳಿಗೂ
ಎಂದು
ಬುಡ ಬುಡ್ಕಿ ಬಾಬಾ

NOTE: ಕೇವಲ ಹಾಸ್ಯಕ್ಕಾಗಿ - ವಿಶ್ವ ವಾಣಿ'ಯ ವಕ್ರ ತುಂಡೋಕ್ತಿಯಿಂದ ಪ್ರೇರಿತ


ಅಂಗೈಯಲ್ಲಿ ಹನುಮ



ಅಂಗೈಯಲ್ಲಿ ಸಂಜೀವೀನಿ ಪರ್ವತವನ್ನೇ
ತಂದ ಹನುಮ
ಅಂಗೈಯಲ್ಲಿ ಕುಳಿತು ತೋರಿದಂತಿದೆ ತನ್ನ
ಲಘು ಹಾಗೂ ಗರಿಮಾ ಶಕ್ತಿಯನ್ನು


ಬಾಲ್ಯದಲಿ ಅನಿಸಿತ್ತು

ಬಾಲ್ಯದಲಿ ಅನಿಸಿತ್ತು
ಮುಂದೆ
ಹೋದಂತೆ ಆಗುತ್ತದೆ
ಜೀವನ  ಸರಳ ಹಾಗೂ ಅರ್ಥ ಎಂದು
ಬೆಳೆದಂತೆ ತಿಳಿಯಿತು
ಜೀವನವಾಗುತ್ತದೆ
ಕಠಿಣ ಹಾಗೂ ಜಟಿಲ ಎಂದು || ೧ ||

ಬಾಲ್ಯದಲಿ ಅನಿಸಿತ್ತು
ಮುಂದೆ
ಹೋದಂತೆ ಸಿಗುತ್ತದೆ
ಜೀವನಕ್ಕೊಂದು ಪಠ್ಯ ಎಂದು
ಬೆಳೆದಂತೆ ತಿಳಿಯಿತು
ಜೀವನವೊಂದು
ಪಠ್ಯವಿಲ್ಲದ ಪರೀಕ್ಷೆ ಎಂದು || ೨ ||


ಬಾಲ್ಯದಲಿ ಅನಿಸಿತ್ತು
ಮುಂದೆ
ಹೋದಂತೆ ಸಾಗುತ್ತದೆ
ಜೀವನ ಶಾಶ್ವತತೆ ಹಾಗೂ ನಿಶ್ಚಿತತೆಯ ಕಡೆಗೆ ಎಂದು
ಬೆಳೆದಂತೆ ತಿಳಿಯಿತು
ಜೀವನ ಕೂಡಿದೆ
ಕ್ಷಣಿಕತೆ ಹಾಗೂ ಅನಿಶ್ಚಿತತೆಯಿಂದ ಎಂದು || ೩ ||


ಬಾಲ್ಯದಲಿ ಅನಿಸಿತ್ತು
ಮುಂದೆ
ಹೋದಂತೆ ಆಗುತ್ತದೆ
ಜೀವನದಲ್ಲಿ ಕನಸುಗಳೆಲ್ಲ ನನಸು ಎಂದು
ಬೆಳೆದಂತೆ ತಿಳಿಯಿತು
ಜೀವನಕ್ಕೆನನಸಾಗದ
ಕನಸುಗಳೇ ಪ್ರೇರಣೆ ಎಂದು || ೪ ||




Monday, January 25, 2016

ಗುಲಾಮಿ ಸಾಕು ಸಲಾಂಮಿ ಸಾಕು

ಗುಲಾಮಿ ಸಾಕು ಸಲಾಂಮಿ ಸಾಕು
ಇನ್ನಾದರೂ ನಾವು ನಾವೋಗಾಣ || ಪ ||


ಟಾಂಗಾ ಕುದರೆಯಂತೆ ಅನ್ಯರ ಕಡಿವಾಣದಲ್ಲಿ ಓಡಿದ್ದು ಸಾಕು
ಇನ್ನಾದರೂ ಓಡಿ ತಿಳಿಯೋಣ ನಮ್ಮ ವೇಗದ ಮಿತಿಯನ್ನು || ೧ ||
ಗುಲಾಮಿ ಸಾಕು ಸಲಾಂಮಿ ಸಾಕು
ಇನ್ನಾದರೂ ನಾವು ನಾವೋಗಾಣ || ಪ ||

ಜಟಕಾ ಎತ್ತಿನಂತೆ  ತಲೆ ಕೆಳಗಾಗಿ ಅನ್ಯರ ಭಾರ ಹೊತ್ತು ಎಳೆದದ್ಡು ಸಾಕು
ಇನ್ನಾದರೂ ತಲೆ ಎತ್ತಿ ತಿಳಿಯೋಣ ನಾವು ತಲುಪಬಹುದಾದ ಎತ್ತರವನ್ನು || ೨ ||
ಗುಲಾಮಿ ಸಾಕು ಸಲಾಂಮಿ ಸಾಕು
ಇನ್ನಾದರೂ ನಾವು ನಾವೋಗಾಣ || ಪ ||

ಅಗಸನ ಕತ್ತೆಯಂತೆ ಬಾಯಿ ಮುಚ್ಚಿ ಅನ್ಯರ ಅಶುದ್ಧ ಬಟ್ಟೆ ಹೊತ್ತಿದ್ದು ಸಾಕು
ಇನ್ನಾದರೂ ಹಾಡೋಣ ನಮಗನಿಸಿದ  ಶುದ್ಧ ರಾಗವನ್ನು || ೩ ||
ಗುಲಾಮಿ ಸಾಕು ಸಲಾಂಮಿ ಸಾಕು
ಇನ್ನಾದರೂ ನಾವು ನಾವೋಗಾಣ || ಪ ||

ಸಂಭ್ರಮಿಸೋಣ ನಮ್ಮ ಸ್ವಾತಂತ್ರ್ಯವನ್ನು ನಮಿಸೋಣ ಆ ಹೋರಾಟಗಾರರಿಗೆ
ಇನ್ನಾದರೂ ಕಾಣೋಣ ಒಪ್ಪೋಣ ಬೆಳೆಸೋಣ ನಮ್ಮಲ್ಲಿಯ ನಮ್ಮತನವನ್ನು || ೪ ||
ಗುಲಾಮಿ ಸಾಕು ಸಲಾಂಮಿ ಸಾಕು
ಇನ್ನಾದರೂ ನಾವು ನಾವೋಗಾಣ || ಪ ||

ಬುಡ ಬುಡ್ಕಿ ಬಾಬಾ



ಗಣ ರಾಜ್ಯೋತ್ಸ್ವದ ಶುಭಾಶಯಗಳು - 2016


Sunday, January 24, 2016

ಭದ್ರತೆ ಎಂಬ ಭ್ರಮೆ

ತನ್ನತನವನು ತೊರೆದು
ಆಗುತ್ತಾನೆ ಮತ್ಯಾರೋ
ಪಡೆಯಲು ಜೇವನದಲ್ಲಿ
ಭದ್ರತೆ ಎಂಬ ಭ್ರಮೆ

ಪಡೆದಾಗ ಭದ್ರತೆ
ಇರುವದಿಲ್ಲ ಸಮಾಧಾನ
ಆತ್ಮ ತೃಪ್ತಿ

ಆತ್ಮ ತೃಪ್ತಿ
ಸಿಗುವದಿಲ್ಲ
ಆಗಿದ್ದರೆ ಮತ್ಯಾರೋ

ಅದಕಾಗಿ ಹೆಣಗುತ್ತಾನೆ
ಮತ್ತೆ ತಾನು
ತಾನಾಗಲು

ಅದಕೆ ಕವಿಯೊಬ್ಬ
ಹೇಳಿದ
ಇರುವದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ
ಬುಡ ಬುಡ್ಕಿ ಬಾಬಾ

http://kannadahaadulyrics.blogspot.in/2011/05/yava-mohana-murali-kareyitu.html

ಕವಿ ಹಾಗೂ ಉದ್ಯಮಿ

ಕವಿಯೊಬ್ಬ ಅಂದ
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನನಗದೆ ಕೋಟಿ ರೂಪಾಯಿ

ಉದ್ಯಮಿಯೊಬ್ಬ ಅಂದ
ಹೆಂಡತಿಯೊಬ್ಬಳು ಮಲಗಿಯೇ ಇದ್ದರೆ
ನನಗದೆ ಕೋಟಿ ರೂಪಾಯಿ
ಬುಡ ಬುಡ್ಕಿ ಬಾಬಾ

ಕೇವಲ ಹಾಸ್ಯಕ್ಕಾಗಿ - ವಿಶ್ವ ವಾಣಿ'ಯ ವಕ್ರ ತುಂಡೋಕ್ತಿಯಿಂದ ಪ್ರೇರಿತ

ಬಂದ ಬಂದ ಬುಡು ಬುಡ್ಕಿ ಬಾಬಾ

ಬಂದ ಬಂದ
ಬುಡ ಬುಡ್ಕಿ ಬಾಬಾ

ಅಂದ ಅಂದ
ಬದುಕೋಣ ಅಂದ
ಬೆಳಗೋಣ ಅಂದ
ಬೆಳೆಯೋಣ ಅಂದ
ಬೆಳೆಸೋಣ ಅಂದ

ತಂದ ತಂದ
ಬಣ್ಣವ ತಂದ
ಬುದ್ಧಿಯ ತಂದ
ಬಯಕೆಯ ತಂದ
ಬಲವನು ತಂದ


ಕೊಂದ ಕೊಂದ
ಬಂಧನವ ಕೊಂದ
ಬವಣೆಯ ಕೊಂದ
ಬಳಲಿಕೆಯ ಕೊಂದ
ಬಿಗುಮಾನ ಕೊಂದ
ಬುಡ ಬುಡ್ಕಿ ಬಾಬಾ

ಕಾಗೆ ಹದ್ದು

ನಗರದ
ಆಗಸದಲ್ಲಿ
ಕಾಣುವದು
ಕಾಗೆ
ಹದ್ದುಗಳೇ
ಹೆಚ್ಚು
ಹಿಡಿದಂತಿದೆ
ಇಲ್ಲಿನ
ಮನ ಸ್ಥಿತಿಗೆ
 ಕನ್ನಡಿ

Saturday, January 23, 2016

ನೀನು ನೀನಾಗುವೆ

ನೀನು ನೀನಾಗಿರುವದಿಲ್ಲ
ನೀನು
ನೀನಾಗುವೆ
ಆದಾಗ
ನೀನ್ನ ಮುಂದೆ
ನೀನು ಬೆತ್ತಲೆ


ಚಿಂತೆ ಕಳವಳ
ದು:ಖ ದುಮ್ಮಾನಗಳ
ಭಾರ ಕಳೆಯುವದು
ಆದಾಗ
ನೀನ್ನ ಮುಂದೆ
ನೀನು ಬೆತ್ತಲೆ

ಶಾಂತಿ ಸಮಾಧಾನ
ಆತ್ಮತೃಪ್ತಿ
ಪ್ರಸನ್ನತೆ ತುಂಬುವುದು
ಆದಾಗ
ನೀನ್ನ ಮುಂದೆ
ನೀನು ಬೆತ್ತಲೆ

ಹಗುರಾಗಿ ಹಾರುವಿ
ಜಗದ
ಸೌಂದರ್ಯ ಕಾಣುವಿ
ಆದಾಗ
ನೀನ್ನ ಮುಂದೆ
ನೀನು ಬೆತ್ತಲೆ

Friday, January 22, 2016

SORRY, ಕನ್ನಡ ಸಾಯಲ್ಲಾರಿ

ಬೊಬ್ಬೆ ಹೊಡ್ಕೊಂಡು
ಅಳತಿರಿ ಯಾಕ್ರೀ
ಕನ್ನಡ ಸಾಯಾಕತ್ತಾದ ಅಂತ
ಯುವಕರು ಬರತಿಲ್ಲ
ಕನ್ನಡ ಕಟ್ಟಾಕ ಅಂತ

ಪದಗಳಿಗೆ ಹೊಸ
ಅರ್ಥ ಕೊಡಾಕ ಅಂತ
ಇದ್ದಾರ ನಮ್ಮ
ಜೊತೆ
ವಿಶ್ವೇಶ್ವರ ಭಟ್ಟರು ಅಂತ

ಪದ್ಯಗಳಿಗೆ ಹೊಸ
ಸಂಗೀತ ತುಂಬಾಕ ಅಂತ
ಇದ್ದಾರ ನಮ್ಮ
ಜೊತೆ
ರಘು ದೀಕ್ಷಿತರು ಅಂತ

ಕಥೆಗಳಿಗೆ ಹೊಸ
ದಾರಿ ತೋರಾಕ  ಅಂತ
ಇದ್ದಾರ ನಮ್ಮ
ಜೊತೆ
ಬೈರಪ್ಪನವರು ಅಂತ

ನಿಲ್ಲೋಣ ಬರ್ರಿ
ಇಂಥರವ ಹಿಂದ
ನಾ ಮೊದಲು ನೀ ಮೊದಲು ಅಂತ
ಆಮೇಲೆ ನೋಡೋಣ ಯಾಕ ಬರುದಿಲ್ಲ
ನಮ್ಮ ಯುವಕರು
ಕನ್ನಡ ಕಟ್ಟಾಕಾ ಅಂತ
ಬುಡ ಬುಡ್ಕಿ ಬಾಬಾ

http://vbhat.in/
http://www.vishwavani.news/
http://raghudixit.com/song/lokada-kalaji/#song-lyrics




ಜಂಗ ಹಿಡದೈತಲ್ಲೊ

ಜಂಗ  ಹಿಡದೈತಲ್ಲೊ ಜಂಗ ಹಿಡದೈತಲ್ಲೊ
ಈ ನಿನ್ನ ಮೈಮನ
ಜಂಗ ಹಿಡದೈತಲ್ಲೊ || ಪ ||

CUBE ಎಂಬ ಜೈಲಲ್ಲಿ
MOUSE  KEYBOARD  ನ ಕೈಕೋಳ ತೊಟ್ಟಕೊಂಡು
MONITOR ಅನ್ನೇ  ಕಿಡಕಿ ಮಾಡ್ಕೊಂಡು || ೧ ||
ಜಂಗ  ಹಿಡದೈತಲ್ಲೊ ಜಂಗ ಹಿಡದೈತಲ್ಲೊ

ದಿನವೆಲ್ಲಾ ದುಡದಿದ್ದಿ
ರಾತ್ರಿ MEETING ಮಾಡಿದ್ದಿ
WEEKEND ಕೂಡ LOGIN ಆಗಿದ್ದಿ ||೨ ||
ಜಂಗ  ಹಿಡದೈತಲ್ಲೊ ಜಂಗ ಹಿಡದೈತಲ್ಲೊ

ಕೆಲಸದಲ್ಲೇ ಮುಳಗಿದ್ದಿ
ಪರಪಂಚ ಮರೆತಿದ್ದಿ
ಸಂಭಂಧ ಕಡೆದಿದ್ದಿ || ೩||
ಜಂಗ  ಹಿಡದೈತಲ್ಲೊ ಜಂಗ ಹಿಡದೈತಲ್ಲೊ

ವ್ಯಾಯಾಮ ಬಿಟ್ಟಿದ್ದೀ
ಯೋಗ ಕಂಡು ನಕ್ಕಿದ್ದಿ
ಆಟಾನ ಮರೆತಿದ್ದಿ || ೪ ||
ಜಂಗ  ಹಿಡದೈತಲ್ಲೊ ಜಂಗ ಹಿಡದೈತಲ್ಲೊ

BP ಹತ್ರ ಬಂದೈತಿ
SUGAR Q ನಲ್ಲಿ ನಿಂತೈತಿ
HEART ATTACK ಕೂಡ ಒಂದು ಕಣ್ಣು ಹಾಕೈತಿ || ೫ ||
ಜಂಗ  ಹಿಡದೈತಲ್ಲೊ ಜಂಗ ಹಿಡದೈತಲ್ಲೊ

ಜೀವನಕ್ಕೆ ಕೆಲಸಾನ
ಕೆಲಸಕ್ಕೆ ಜೀವನಾನ
ಅಂತ ಪ್ರಶ್ನೆ ಕೇಳೋದು ಮರೆತಿದ್ದಿ || ೪ ||
ಜಂಗ  ಹಿಡದೈತಲ್ಲೊ ಜಂಗ ಹಿಡದೈತಲ್ಲೊ

- ಬುಡ ಬುಡ್ಕಿ ಬಾಬಾ



ಜಂಗು ಅಂದ್ರೆ ತುಕ್ಕು ಅಥವಾ ಸವೆತ ಅಂತ ಅರ್ಥ

Monday, January 18, 2016

ಗೆಲುವೆಂಬ ಶಾಪ

ಬುದ್ದಿವಂತ ಹೇಡಿಗಳಿಗೆ
ಸಿಗುತದೆ ಗೆಲುವೆಂಬ ಶಾಪ
ಲೋಕದ ಸ್ಪರ್ಧೆಗಳನು ಗೆಲುವರಿವರು
ಓಡಿ ಭಯ ಪಾಪ ಪ್ರಜ್ಞೆಯಿಂದ

ಹೇಳಿಕೊಳ್ಳಲಾರರು ತಮ್ಮ
ಗೆಲುವಿನ ದು:ಖವನು ಲೋಕಗಂಜಿ
ತಿಳಿಯಲಾರದು ಲೋಕ ಇವರ
ಗೆಲುವು ಒಂದು  ಸೋಲೆಂದು

ಕಾಣುವರಿವರು ಲೋಕದ
ಕಣ್ಣಲ್ಲಿ ತ್ರೀವಿಕ್ರಮರಂತೆ ಎತ್ತರ
ಆದರೆ ತಮ್ಮ ಕಣ್ಣಲ್ಲಿ ಮಾತ್ರ
ಸದಾ ಕುಬ್ಜರು ವಾಮನನಂತೆ

ಬಿಡಬೇಕೆಂದರು ಬಿಡಲಾರರು
ಹುಚ್ಚು ಗೆಲುವಿನ ನಾಗಾಲೋಟವನ್ನು
ಲೋಕದ ಹಂಗಿಗಂಜಿ
ಅಫೀಮು ಗಾಂಜಗಳಿಗಿಂತ ಮಾರಕ ಗೀಳಿದು
ಗೆಲುವೆಂಬ ಶಾಪ
- ಬುಡ ಬುಡ್ಕಿ ಬಾಬಾ

Saturday, January 16, 2016

ಕೊಡತೀನಿ ದು:ಖಕ್ಕೆ ಗುಳಗಿಯ ಒಂದ

ಡುಗ ಡುಂಗ ಡುಂಗ ಡುಗ ಡುಂಗ ಡುಂಗ
ಕೊಡತೀನಿ ದು:ಖಕ್ಕೆ ಗುಳಗಿಯ ಒಂದ || ಪ ||


ಯುನಾನಿಯಲ್ಲ ಹೋಮಿಯೋಪತಿಯಲ್ಲ
ಅಲೋಪತಿಯಂತೂ ಅಲ್ಲವೇ ಅಲ್ಲ
ಡುಗ ಡುಂಗ ಡುಂಗ ಡುಗ ಡುಂಗ ಡುಂಗ
ಕೊಡತೀನಿ ದು:ಖಕ್ಕೆ ಗುಳಗಿಯ ಒಂದ || ೧ ||


ಮನಸಿನ ಕಡಿವಾಣ ಬುದ್ಧ್ಯಾಗ ಹಿಡಕೊಂಡು
ಎದ್ಯಾಗಿನ ಬಡಿತ ಮೈ ಮರಿಸದ೦ಗ
ಡುಗ ಡುಂಗ ಡುಂಗ ಡುಗ ಡುಂಗ ಡುಂಗ
ಕೊಡತೀನಿ ದು:ಖಕ್ಕೆ ಗುಳಗಿಯ ಒಂದ || ೨ ||

ಸಂಸಾರದ ಗುಟ್ಟು ಹೊಟ್ಟ್ಯಾಗ ಹಾಕ್ಕೊಂಡು
ತಲ್ಯಾಗಿನ ಸಿಟ್ಟು ಬಾಯಾಗ ಬರದಂಗ
ಡುಗ ಡುಂಗ ಡುಂಗ ಡುಗ ಡುಂಗ ಡುಂಗ
ಕೊಡತೀನಿ ದು:ಖಕ್ಕೆ ಗುಳಗಿಯ ಒಂದ || ೩ ||

ಕೇಡನ್ನ  ಬಗಿಬ್ಯಾಡ ಬಗಿದವರನ ಮರಿಬ್ಯಾಡ
ದೈವವ ಬಿಡಬ್ಯಾಡ ಕಣ್ಣು ಮುಚ್ಚಿ ನಂಬಬ್ಯಾಡ
ಡುಗ ಡುಂಗ ಡುಂಗ ಡುಗ ಡುಂಗ ಡುಂಗ
ಕೊಡತೀನಿ ದು:ಖಕ್ಕೆ ಗುಳಗಿಯ ಒಂದ || ೩ ||


ಎಲ್ಲರ ಕುಡಕೊಂಡು ನಿನ್ನತನ ಉಳಿಸಿಕೊಂಡು
ಸಿಕ್ಕದ್ದ ಹಂಚಕೊಂಡು ಅದರಾಗ  ಖುಷಿಕಂಡು
ಡುಗ ಡುಂಗ ಡುಂಗ ಡುಗ ಡುಂಗ ಡುಂಗ
ಕೊಡತೀನಿ ದು:ಖಕ್ಕೆ ಗುಳಗಿಯ ಒಂದ || ೪ ||

- ಬುಡ ಬುಡ್ಕಿ ಬಾಬಾ

Friday, January 15, 2016

ಸಮಯದ ಸರಕು

ಸಮಯದ
ಸರಕಿದ್ದರೆ
ಮಾರಲು
ಬನ್ನಿ
ನಮ್ಮ
ಪಟ್ಟಣದಲಿ

ಸಮಯಕೆ
ನಿಮ್ಮ
ಸಿಗುವದು
ಭಾರೀ ಬೆಲೆ
ನಮ್ಮ
ಪಟ್ಟಣದಲಿ

ಸಮಯವನು
ಕೊಳ್ಳುವರು
ಕ್ಷಣವೂಂದು
ಬಿಡದೆ
ನಮ್ಮ
ಪಟ್ಟಣದಲಿ

ಎಚ್ಚರಿಕೆ ಒಂದೇ
ಬರುವುದಿಲ್ಲಿ
ನಿಮ್ಮ ಇಚ್ಛೆ
ಹಿಂದಿರುಗುವ
ಇಚ್ಛೆ ನಿಮದಲ್ಲ
ನಮ್ಮ
ಪಟ್ಟಣದಲಿ
- ಬುಡ ಬುಡ್ಕಿ ಬಾಬಾ

Thursday, January 14, 2016

ವಿಶೇಷ ಸವಿ

ಈ ಬಾರಿ
ಸಂಕ್ರಾಂತಿಗೆ
ಎಳ್ಳು ಬೆಲ್ಲದ
ಜೊತೆಗೆ
ಮತ್ತೊಂದು
ವಿಶೇಷ ಸವಿ
ವಿಶ್ವೇಶ್ವರ್ ಭಟ್ಟರ
ವಿಶ್ವವಾಣಿ
- ಆನಂದ


ಸಂಕ್ರಾಂತಿಯ ಶುಭಾಶಯಗಳು

ಸಂಕ್ರಮಣವಾಗಲಿ
ಸಂಭ್ರಮದ
ಆರಂಭ

ಉತ್ತರಾಯಣವಾಗಲಿ
ಉತ್ತರಿಸದ ಪ್ರಶ್ನೆಗೆ
ಉತ್ತರ

ಹೊಸ ಸುಗ್ಗಿಯಾಗಲಿ
ಸವಿ ಕನಸುಗಳ
ಕಣಜ
-ಆನಂದ

ಬುಡು ಬುಡ್ಕಿ ಬಾಬಾ




ಬರಿದಾಯಿತು
ಬದುಕು
ಬದುಕಿ
ಬೇರೆಯವರಂತೆ
ಬೇರೆಯವರಿಗಾಗಿ

ಬರಿದಾದ
ಬದುಕು
ಬುಡವಿಲ್ಲದೆ
ಬಡಬಡಿಸಿದೆ
ಬುಡು ಬುಡ್ಕಿಯಂತೆ

ಬದುಕು
ಬೇರೂರಲು
ಇಂದಿಂದ
ನಾನಾದೆ
ಬುಡು ಬುಡ್ಕಿ ಬಾಬಾ
-ಆನಂದ

Wednesday, January 13, 2016

ಮಡಿದ ಕನಸುಗಳು

ಹರಿಯಲಾಗದೆ
ನಿಂತು
ನಿಂತಲ್ಲೇ
ಮಡಿದ
ಕನಸುಗಳ
ನೋಡಿ
ಮರಗುವದಕಿಂತ
ಸುಟ್ಟವನು
ವಾಸ್ತವದ
ಸ್ಮಶಾನದಲಿ
ಅಸ್ತಿಗಳನು
ಜೀವ ನದಿಯಲಿ
ಹರಿಯಬಿಡಿ
-ಆನಂದ

Sunday, January 10, 2016

SMART PHONE

ಎಚ್ಚರದಿಂದಿರಿ
ಗೆಳೆಯರೇ
ಬೀಸಿದೆ
ಎಲ್ಲಡೆ
ಜಾಣತನದ
ಮೋಹಕ ಜಾಲ

ನಿಮಿಷ
ಉಳಿಸುವ
ನೆಪದಿ
ಕದಿಯುತ್ತದೆ
ಗಂಟೆಯನು

ಪುಡಿಗಾಸು
ಉಳಿಸುವ
ನೆಪದಿ
ಕದಿಯುತ್ತದೆ
ಕೈಗಂಟನ್ನು

ಬುದ್ಧಿ
ಉಳಿಸುವ
ನೆಪದಿ
ಕದಿಯುತ್ತದೆ
ಮನಸನ್ನು

ನಿಮಗರಿವಿಲ್ಲದೆಯೇ
ನಿಮ್ಮನ್ನು
ಬರಿದು ಮಾಡಿ
ಜಾಣತನ
ಮೆರೆಯುವದು
SMART PHONE
-ಆನಂದ

Saturday, January 9, 2016

ಹುಚ್ಚ ಮನುಜ - (ಅನುವಾದ: MAD MAN - Kahlil Gibran)

ಗಾಢ ನಿದ್ದೆಯಿಂದ
ಎದ್ದಾಗ ಕಂಡೆ
ಕಳುವಾಗಿತ್ತು
ನನ್ನ ಮುಖವಾಡಗಳೆಲ್ಲಾ
ಓಡಿದೆ ಕಿರುಚುತ್ತಾ
ಕಳ್ಳರು ಕಳ್ಳರು
ಶಾಪಿತ ಕಳ್ಳರು


ನೋಡಿ ನಕ್ಕವರು
ಕೆಲವರು
ಓಡಿ ಮನೆ
ಬಾಗಿಲು ಹಾಕಿ
ಕೊಂಡವರು
ಹಲವರು

ತಲುಪಿದಾಗ
ಮಾರುಕಟ್ಟೆಯ ಓಣಿ
ಮಹಡಿ ಮೇಲೆ ನಿಂತ
ಯುವಕನೊಬ್ಬ ಕೂಗಿದ
ಆಗೋ ನೋಡಿ
"ಹುಚ್ಚ ಮನುಜ"

ಅವನ ಕಾಣಲು
ಮೇಲೆ ನೋಡಿದಾಗ
ಚುಂಬಿಸಿತು ಸೂರ್ಯನ
ಕಿರಣ ಮೊದಲ ಬಾರಿ
ನನ್ನ ನಗ್ನ ಮುಖವನ್ನು
ಬೆಳಗಿತು ನನ್ನಾತ್ಮ
ಸೂರ್ಯನ ಪ್ರೀತಿಯಿಂದ
ಬೇಕಿರಲಿಲ್ಲ ನನಗೆ
ಮುಖವಾಡಗಳಿನ್ನೂ


ಭಾವಪರವಶೆಯಲಿ
ಮುಳುಗಿದವನಂತೆ
ಅತ್ತು ನಾನಂದೆ
ನನ್ನ ಮುಖವಾಡ
ಕದ್ದ ಕಳ್ಳರೇ
ಪೂಜ್ಯರು

ಅಂದಿನಿಂದ ನಾನಾದೆ
"ಹುಚ್ಚ ಮನುಜ"
ದೊರಕಿತು ನನಗೆ
ಏಕಾಂತದ ಸ್ವಾತಂತ್ರ
ಹಾಗೂ
ಬೇರೆಯವರಿಗೆ
ಅರ್ಥವಾಗುವ
ಬವಣೆಯಿಂದ
ಸುರಕ್ಷತೆ

ಈ ಸುರಕ್ಷತೆಯ
ಬಗ್ಗೆ ಅಭಿಮಾನ
ಪಡದಿರುವದೇ
ವಾಸಿ ಏಕೆಂದರೆ
ಸೆರೆಮನೆಯಲ್ಲಿ ಒಬ್ಬ
ಕಳ್ಳ ಕೂಡ ಇನ್ನೊಬ್ಬ
ಕಳ್ಳನಿಂದ ಸುರಕ್ಷಿತ

- ಆನಂದ (ಅನುವಾದ)

Friday, January 8, 2016

ಜನ್ಮ ದಿನ

ಮಾಡಬೇಕು ಅನ್ನಿಸಿದ್ದನ್ನು
ಮಾಡಲಾಗದೆ ಪೇಚಾಡಿ
ಬದುಕಿಗಾಗಿ ಮತ್ತಿನೆನ್ನನ್ನೋ ಮಾಡಿ
ಪ್ರತಿ ದಿನ
ತನ್ನತನದ ಒಂದಂಶ
ಕಳೆದುಕೊಳ್ಳುವ
ನನ್ನಿಂದ ದೇವರಿಗೆ
ಪ್ರಾಥ೯ನೇ ಒಂದೇ

ಮಾಡು ಪ್ರತಿ
ಜನ್ಮ ದಿನವನ್ನು
ತನ್ನತನದ
ಮರು ಜನ್ಮ
- ಆನಂದ

Thursday, January 7, 2016

ಪ್ರೀತಿ ಮತ್ತು ಅಧ್ಯಾತ್ಮ

ಅಗಾಧ
ವಿಸ್ತಾರ
ಅನಂತ
ಸಂಭವನೀಯತೆ
ಅಡಗಿದೆ
ಮಾನವನ
ಮೂಲ
ಸ್ವರೂಪದಲಿ

ಅನುಭವಕೆ ಅದು
ಸಾಧ್ಯ
ಎರಡರಲಿ ಮಾತ್ರ
ಒಂದು
ಪ್ರೀತಿ
ಇನ್ನೊಂದು
ಅಧ್ಯಾತ್ಮ

-ಆನಂದ

Friday, January 1, 2016

ಸರ್ಕಾರದ ಯೋಜನೆಗಳು

ಭಗೀರಥ
ತಲುಪಿಸಿದ
ಗಂಗೆಯನು
ಶಿವನ
ಜಟೆಯಿಂದ
ಭುವಿಗೆ
ಒಂದು
ಹನಿಯನ್ನು
ಮುಟ್ಟದೆ

ಬೇಕಾಗಿದ್ದಾರೆ
ಭಗೀರಥರು
ಸರ್ಕಾರದ
ಯೋಜನೆಗಳನ್ನು
ಜನತೆಗೆ
ತಲುಪಿಸಲು
ಒಂದು
ಪೈಸೆ
ಕೂಡ
ಮುಟ್ಟದೆ
-ಆನಂದ

ಮಧು ಚಂದ್ರ

ಪೀಡಿಸುತ್ತಿದ್ದೆ
ನನ್ನ
ನಲ್ಲನ
ಕರೆದು ಕೊಂಡು
ಹೋಗಲು
'ಮಧು ಚಂದ್ರ' ಕೆ

ಆ ಬೆಳದಿಂಗಳ
ರಾತ್ರಿ
ಕರೆದುಕೊಂಡು
ಹೋದರು
ಮನೆಯ
ಮಾಳಿಗೆಗೆ

ಕಟ್ಟಿದವು
ಕನಸು
ನೂರೆಂಟು
ಮನದಲ್ಲಿ
ಆದ
ಕಂಡು
ನನಗೆ

ಹಾಕಿ
'ಮಧು' ವನು
ಕೈಯ್ಯಲ್ಲಿ
ತೋರಿ
ಹುಣ್ಣಿಮೆ
'ಚಂದ್ರ' ನ
ಅಂದರು
ನಲ್ಲೇ
ಇದೆ ನಮ್ಮ
ಮಧು ಚಂದ್ರ
-ಆನಂದ

ಸತಿ ಧರ್ಮ

ಸೂರ್ಯೋದಯಕೆ
ಎದ್ದವಳಲ್ಲ
ಗಂಡನಿಗಿಂತ
ಮೊದಲು
ಇವಳು

ಕಾರಣ
ಕೇಳಿದಕೆ
ಹೇಳಿದಳು
ಪಾಲಿಸುತ್ತಿದ್ದೇನೆ
ಪತಿಯ
ನಂತರವೇ
ಪತ್ನಿ
ಎಂಬ
"ಸತಿ ಧರ್ಮ"
ವನ್ನು
-ಆನಂದ

(ಯಾವುದೇ ಹೋಲಿಕೆ ಕಾಕತಾಳೀಯ ಮಾತ್ರ)
ಕೇವಲ ಹಾಸ್ಯಕ್ಕಾಗಿ - ವಿಶ್ವ ವಾಣಿಯ ವಕ್ರ ತುಂಡೋಕ್ತಿಯಿಂದ ಪ್ರೇರಿತ

ವಿಶ್ವ ವಾಣಿ

ವಿಶ್ವ ಪಯಣದ
ಕನಸು
ನನಸಾಗಲಿದೆ
ಅನ್ಯ
ದಿನ ಪತ್ರಿಕೆಯವರಿಗೆ
ಈ ಸಂಕ್ರಮಣದಂದು

ಮರಳಿ ಕೆಲಸಕೆ
ಬರುವ
ಅವಸರ ಅವಶ್ಯಕತೆ
ಇರದು

ಹಡೆಯಲಿದ್ದಾರೆ
ವಿಶ್ವೇಶ್ವರ ಭಟ್ಟರು
"ವಿಶ್ವ ವಾಣಿ"
ಯನ್ನು
- ಆನಂದ

ಅರಿ ಸಪ್ತಮ

ಕಾಮ ಕ್ರೋಧ
ಮೋಹ ಲೋಭ
ಮದ ಮತ್ಸರ
ಅರಿಷಡ್ವ್ರ್ಗಳಾದರೆ
ಅತಿಯಾದ
ಗೌರವದ ಆಸೆ
ಅರಿ ಸಪ್ತಮ

ಗುಣಗಳಿಗಿಂತ
ಹೆಚ್ಚಿನ
ಗೌರವದ
ಕಾಮ ಲೋಭ ಮೋಹ
ಮನಸಿನ ಮನೆಗೆ
ಕ್ರೋಧ ಮದ ಮತ್ಸರಗಳಿಗೆ
ಆಹ್ವಾನ
- ಆನಂದ

ತೋರಿಕೆ

ತೋರಿಕೆಯ
ಬಗ್ಗೆ
ಅಪಾರ್ಥ
ಮಾಡಿಕೊಂಡ
ಜನರೇ
ಬಹಳ

ತೋರಿಕೆಯ
ಆಸಕ್ತಿ
ಬೇಡ
ನಿಜ ಆಸಕ್ತಿಯ
ತೋರಿಕೆಗೆ
ಹಿಂಜರಿಕೆ
ಬೇಡ
- ಆನಂದ



ಬಾಳಿನ ಹೋರಾಟ

ಬಾಳಿನ
ಹೋರಾಟ
ನಿತ್ಯ
ನವೀನ
ನಿರಂತರ

ಬಾಳಿನ
ಹೋರಾಟದ
ಫಲಿತಾಂಶದ
ವ್ಯಾಖ್ಯಾನ
ಬಲು
ವಿಚಿತ್ರ

ಬಾಳಿನ
ಹೋರಾಟ
ಮಧ್ಯದಲ್ಲಿ
ಬಿಡುವುದೇ
ಸೋಲು

ಬಾಳಿನ
ಹೋರಾಟ
ಕೊನೆವರೆಗೂ
ಹೋರಾಡುವುದೇ
ಗೆಲವು
- ಆನಂದ



Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...