Sunday, November 27, 2016

ಸದ್ದು ಗದ್ದಲ

ಹೊರಗಿನ ಗಿಜ ಗಿಜ
ಸದ್ದು ಗದ್ದಲ
ಹೆಚ್ಚಾಯಿತು ಎಂದು
ಕಣ್ಣು ಮುಚ್ಚಿದೆ
ಆದರಲ್ಲಿ ಕಂಡ ವಿಚಾರಗಳ
ಕಿಚಪಿಚಕೆ ಬೆದರಿ
ಪಕ್ಕನೆ ಕಣ್ಣು ತೆರೆದು
ಮತ್ತದೇ ಹೊರಗಿನ
ಗೌಜು ಗದ್ದಲದಲ್ಲಿ
ಕಳೆದು ಹೋದೆ

ಬುಡ ಬುಡ್ಕಿ ಬಾಬಾ

Thursday, November 24, 2016

ಪ್ರಶ್ನೆ

ಜೀವನ ಮತ್ತದೇ ಪ್ರಶ್ನೆಯ
ಮರಳಿ ಮರಳಿ ಕೇಳುತಿದೆ
ಎಂದಾದರೆ ಬೇಸರಿಸದೆ
ನೀನು ಆ ಪ್ರಶ್ನೆಗೆ
ಸರಿಯಾಗಿ
ಸಂಪೂರ್ಣವಾಗಿ
ಉತ್ತರಿಸಿರುವೆಯಾ
ವಿಚಾರಿಸಿ ನೋಡು

Sunday, November 13, 2016

ಕಲಿ

ಕಲಿಗಾಲವಿದು ಕಲಿಗಾಲ
ಕಲಿ ಕಾದಿಹನು ಮನ
ಕಲಸಿ ವಿಷ ಬೆರೆಸಲು
ವ್ರತ ತಪ ಇಂದ್ರಿಯ
ನಿಗ್ರಹ ಎಲ್ಲ ನಮ್ಮ
ಮಿತಿಯ ಆಚೆಗಿರಬಹುದು
ಕಲಿ ನಿಗ್ರಾಹಕೊಂದು
ರಾಮ ಬಾಣ
ಇಟ್ಟುಕೊಂಡು ಒಂದು
ಗಟ್ಟಿ ಗುರಿ
ನೆಟ್ಟು ದೃಷ್ಟಿ ಅದರಲ್ಲೇ
ಸಂಪೂರ್ಣ
ತಲ್ಲೀನನಾಗುವುದು
ಬುಡ ಬುಡ್ಕಿ ಬಾಬಾ

Friday, November 11, 2016

ಕಲೆ

ಅಮೂರ್ತ ವಿಚಾರವೊಂದು
ಮೂರ್ತ ರೂಪ
ಪಡೆಯುವುದು
ಬುದ್ಧಿ ಹೃದಯದ
ಸಂಗಮದಿಂದ
ಆ ಸಂಗಮದಲ್ಲಿ
ಬುದ್ಧಿಯ ಕೈ  ಮೇಲಾದರೆ
ವ್ಯಾಪಾರ
ಹೃದಯದ ಕೈ ಮೇಲಾದರೆ
ಕಲೆ
ಬುಡ ಬುಡ್ಕಿ ಬಾಬಾ

ಮಜಾ ಮಾಡಿ

ಸಾವೇನು ಕೊನೆಯಲ್ಲ ಕರ್ಮ ಫಲಕ್ಕೆ
ಹುಟ್ಟು ಸಾವೆಂಬುದು ಬರೀ
ರಂಗಭೂಮಿಯ ಹಿಂದಿನ ಪರದೆ ಸರಿಸಿದಂತೆ
ದೃಶ್ಯ ವ್ಯಕ್ತಿ ಕಾಲ ದೇಶ ಸಂಬಂಧಗಳ ಬದಲಾವಣೆ
ಕತೆ ಮಾತ್ರ ಅದೇ ಹಳೆಯ ಕಥೆಯ ಮುಂದುವರೆದ ಭಾಗ
ಅನುಭವಿಸಿ ಮುಗಿಸುವರೆಗೂ ಮಜಾ ಮಾಡಿ

ಆ ಕ್ಷಣ

ಯಾರು ಇಷ್ಟ ಪಡದ
ಮುಟ್ಟಿದ್ದನೆಲ್ಲ ಕಪ್ಪು ಮಾಡುವ
ಇಂಗಾಲ ವಜ್ರವಾಗಿದ್ದು
ತಾಪದ ಅತ್ಯುತ್ತ್ಕಟ ಆ ಕ್ಷಣದಲ್ಲಿ
ನಂಬಲು  ಅಸಾಧ್ಯವಾದರೂ ಸತ್ಯ
ಜೀವನ ನಿನ್ನನ್ನು ಗೋಡೆಗೆ
ನೂಕಿ ನಿನ್ನೆರಡು ಕೈಗಳನ್ನು
ಎಳೆದು ತಿರುವಿದ ಆ ಕ್ಷಣವೇ
ನಿನ್ನಲ್ಲಿರುವ ಸೋಲನ್ನು ಒಪ್ಪದ
ವಜ್ರದಂತಹ ಗಟ್ಟಿ ಇರಾದೆಯ
ಹೋರಾಟಗಾರನ ಜನನದ ಕ್ಷಣ
ಬುಡ ಬುಡ್ಕಿ ಬಾಬಾ

ಸ್ಪೂರ್ತಿ: ಆಮೀರ ಚಿತ್ರ ಯಾ ರೆಹೆಮ ಹಾಡು

Saturday, November 5, 2016

ಕಾವ್ಯವಲ್ಲ

ಕಾವ್ಯವಲ್ಲ
ಬರೀ
ಪದಗಳ
ಬೆಸುಗೆ
ಅದು
ಮನದಾಳದ
ಭಾವಗಳ
ಬೆಸುಗೆ || ೧ ||


ಕಾವ್ಯವಲ್ಲ
ಬರೀ
ಒಂದು
ಬರಹ
ಅದು
ಮನದ
ಗಾಯಗಳ
ಮಲಾಮು || ೨ ||

ಬುಡ ಬುಡ್ಕಿ ಬಾಬಾ

ಅಸ್ಪಷ್ಟ

ಮನವೆಂಬ ಅನಂತ ಸುತ್ತಿನ
ಭದ್ರ ಕೋಟೆಯಲ್ಲಿದೆ
ಭಾವನಾ ಸರೋವರ
ಕೋಟೆಯ ಪ್ರತಿ ಬಾಗಿಲು
ತೆರೆಯಲು ಬೇಕು
ಸಂಬಂಧಗಳೆಂಬ
ಗುರುತಿನ ಚೀಟಿ
ಹುಷಾರಾಗಿ
ಕೊಡಬೇಕು
ಗುರುತಿನ ಚೀಟಿ
ಅರ್ಥ ಪೂರ್ಣ
ಸಂಬಂಧಗಳಿಗೆ ಮಾತ್ರ
ಬರೀ ಹೆಸರಿದ್ದ ಮಾತ್ರಕ್ಕೆ
ಸಂಬಂಧಗಳಿಗೆ
ಕೊಟ್ಟರೆ ಗುರುತಿನ ಚೀಟಿ
ಭಾವನ ಸರೋವರ ಕಲುಕಿ
ಎಬ್ಬಿಸಬಹುದು ಅಲೆ
ಎದ್ದರೆ ಅಲೆ ಆಗಬಹುದು
ಎಲ್ಲ ಅಸ್ಪಷ್ಟ

ಹೆಸರು

ಸಂಬಂಧಗಳು
ಸಂಬಂಧಗಳಾಗುವುದಿಲ್ಲ
ಬರೀ ಸಂಬಂಧಕ್ಕೆ
ಹೆಸರಿದ್ದ  ಮಾತ್ರಕ್ಕೆ  || ೧ ||

ಸಂಬಂಧಗಳ ಅರ್ಥ
ಮಾತ್ರ ಕೊಡಬಲ್ಲದು
ಸಂಬಂಧಕ್ಕೆ
ಹೆಸರು  || ೩ ||

ಬುಡ ಬುಡ್ಕಿ ಬಾಬಾ

ಬಳ್ಳಿ

ನೆನಪುಗಳ
ಕಾಡಲ್ಲಿ
ಕಳೆದುಕೊಂಡೆ
ಹುಡುಕುತ
ನೆನಪುಗಳ
ಬೆಸೆಯುವ
ಭಾವನೆಗಳ
ಬಳ್ಳಿಗಳ
ಬುಡ ಬುಡ್ಕಿ ಬಾಬಾ

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...