Saturday, July 15, 2017

ನಿನ್ನ ಪ್ರೀತಿ

ನಲ್ಲೇ ನಿನ್ನ ಪ್ರೀತಿ
ಬಲು ದುಬಾರಿ
ನಿನ್ನ ಪ್ರೀತಿಗಾಗಿ
ಮಾಡಿದೆ ಮದುವೆ
ಎಂಬ ಸಾಲ
ಸಾಲು ಸಾಲು
ಕಂತುಗಳನು
ಕಟ್ಟಿದರೂ
ತೀರಿಲ್ಲ
ಈ ಸಾಲ
ಅದಕಂದಳು ನಲ್ಲೇ
ನಗು ನಗುತ
ಅದಕೇಕೆ ಚಿಂತೆ
ತೀರದಿರಬಹುದು
ಈ ಸಾಲ ನೀ
ತೀರಿದರೂ
ಕೂಡ
ಅದಕೇ ಅಲ್ಲವೇ
ಮದುವೆ ಎಂಬುದು
ಜನುಮ ಜನುಮದ
ಅನುಬಂಧ

ವಿಷ

ಕೆಲವರ ಮನೆಗೆ
ಹೋಗಿ ಅವರನು
ಭೇಟಿಯಾಗುವುದು
ಹಾವಿನ ಹುತ್ತಕ್ಕೆ ಹೊಕ್ಕು
ವಿಷ ತುಂಬಿದ
ನಾಗರ ಹಾವಿನೊಡನೆ
ಮಾತಾಡಿದಂತೆ
ಮಾತು ಮಾತಲ್ಲೇ
ಆದರೂ ಅದು
ವಿಷ ಕಾರದೆ ಬಿಡದು
 ಬುಡ ಬುಡ್ಕಿ ಬಾಬಾ

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...