Friday, May 12, 2017

ಗೆಲ್ಲುವ ಪಕ್ಷ

ಅದೆಲ್ಲೋ ಓದಿದ್ದೆ
ಗಂಡ ತಪ್ಪು ಮಾಡುತ್ತಾನೆ
ಹೆಂಡತಿ ಗದರುತ್ತಾಳೆ
ಗಂಡ ಕ್ಷಮೆಯಾಚಿಸುತ್ತಾನೆ
ಹೆಂಡತಿ ತಪ್ಪು ಮಾಡುತ್ತಾಳೆ
ಗಂಡ ಗದರುತ್ತಾನೆ
ಹೆಂಡತಿ ಅಳುತ್ತಾಳೆ
ಗಂಡ ಕ್ಷಮೆಯಾಚಿಸುತ್ತಾನೆ || ೧ ||

ಆಗ ಮನಸಿಗನಿಸಿತ್ತು
ಗಂಡಿಗಿಂತ ಹೆಣ್ಣಿಗೆ ಗೆಲುವು ಜಾಸ್ತಿ
ಮೊದಲ ಮಗಳು ಹುಟ್ಟಿದಾಗ
ಸ್ವಲ್ಪ ಖುಷಿಯಾಗಿತ್ತು
ಗೆಲ್ಲುವುಳೊಬ್ಬಳು ಸೇರಿದಳೆಂದು ||೨ ||

ಈಗ ಎರಡನೇ ಮಗಳು
ಹುಟ್ಟಿದಾಗ ಖಾತ್ರಿಯಾಯಿತು
ನಮ್ಮದು ಇನ್ನೇನಿದ್ದರೂ
ಬರೀ ಗೆಲ್ಲುವ ಪಕ್ಷ ಎಂದು || ೩ ||

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...