Thursday, December 31, 2015

ಹೊಸ ವರ್ಷ - ೨೦೧೬

ಹೊಸ ವರ್ಷಕ್ಕೆ
ಹೊಸತೇನಿಲ್ಲೆಂಬ
ಚಿಂತೆ
ಬೇಡ
ಹಳತನ್ನೇ
ನೋಡೋಣ
ಹೊಸ
ದೃಷ್ಟಿ ಕೋನದಲಿ
-ಆನಂದ

Wednesday, December 30, 2015

ಕೀಳರಿಮೆ

ಕೀಳರಿಮೆ
ಒಂದು
ಗೆದ್ದಲು
ಹೊಕ್ಕಿದರೆ
ಮನದೊಳಗೆ
ತಿಂದು
ಮುಗಿಸುತ್ತದೆ
ಅಂತ: ಸತ್ವವನ್ನೇ
-ಅನಂದ

ನಂಬು ನೀನ್ನನ್ನು ನೀನು

ನಂಬಬಹುದು
ಜಗವನೆಲ್ಲ
ಆದರೆ ಬಲು ಕಷ್ಟ
ನಂಬುವುದು
ನೀನ್ನನ್ನು ನೀನು

ದುರಹಂಕಾರ ಬೇಡ
ದುರಭಿಮಾನ ಬೇಡ
ಸ್ವಾಭಿಮಾನದ ಪಟ್ಟು
ಬಿಡದೆ ನಂಬು
ನೀನ್ನನ್ನು ನೀನು

ಅಪಜಯವಾಗಲಿ
ಅವಮಾನವಾಗಲಿ
ಹಿಡಿದ ಛಲ
ಬಿಡದೆ ನಂಬು
ನೀನ್ನನ್ನು ನೀನು

ಭಗವಂತ
ನಿನ್ನ ಉಸಿರು
ಇನ್ನೂ ಇಟ್ಟಿದ್ದಾನೆ೦ದರೆ
ಆಗಬೇಕಿದೆ  ಕಾರ್ಯವೊಂದು
ನೀನ್ನಿ೦ದಲೇ ನಂಬು
ನೀನ್ನನ್ನು ನೀನು

ನೀನೆಂಬ ಬೀಜ
ಚಿಗುರೊಡೆದು ಹೂವಾಗಿ
ಹಣ್ಣು ಬಿಡಲು
ಬೇಕು ಕಾಲ
ಅಲ್ಲಿಯವರೆಗೆ ನಂಬು
ನೀನ್ನನ್ನು ನೀನು
- ಅನಂದ

Sunday, December 27, 2015

ಮಿನುಗುಗಣ್ಣಿನ ಬಾಲಕ

ಮಿನುಗುಗಣ್ಣಿನ
ಬಾಲಕನೊಬ್ಬ
ಇರುತ್ತಾನೆ
ಎಲ್ಲರೊಳಗೆ
ಆಟಿಗೆಯ
ಹಂಗಿಲ್ಲದೆ
ಜಗವನೆ ಕಂಡು
ನಲಿಯುವವ
ಬಾಲ್ಯದಲಿ

ಮಿನುಗುಗಣ್ಣಿನ
ಬಾಲಕನನ್ನು
ಪ್ರತಿ ದಿನ
ಬಿಟ್ಟು
ಹೋಗುತ್ತಾರೆ
ಶಾಲಾ-ಕಾಲೇಜುಗಳಿಗೆ
ವ್ಯಾಸಂಗಕ್ಕೆಂದು
ಕೌಮಾರ್ಯದಲಿ

ಮಿನುಗುಗಣ್ಣಿನ
ಬಾಲಕನಿಗೆ
ಬಣ್ಣ ಬಣ್ಣದ
ಆಟಿಗೆಯ
ಆಸೆಯ ತೋರಿ
ಬಾಗಿಲು ಕಿಟಕಿಗಳಿಲ್ಲದ
ಕೊಠಡಿಗೆ ಹಾಕಿ
ಬೀಗ ಜಡಿದು
ಹೋಗುತ್ತಾರೆ
ಜಗವ ಬಗೆಯಲು
ಯೌವ್ವನದಲಿ

ಮಿನುಗುಗಣ್ಣಿನ
ಬಾಲಕನಿಗಾಗಿ
ಬಣ್ಣ ಬಣ್ಣದ
ಭಾವವಿಲ್ಲದ
ಆಟಿಗೆಗಳ
ತುಂಬಿ ತಂದು
ಕೊಠಡಿಯ
ಬಾಗಿಲು ತೆರೆದಾಗ
ಕಂಡಿದ್ದು
ಅಸ್ಥಿಪಂಜರ
ಮಾತ್ರ
ವೃಧ್ಯಾಪ್ಯದಲಿ
-ಆನಂದ

ಸಂಭಂಧಗಳೊಂದು ಸೂತ್ರ

ಸಂಭಂಧಗಳೊಂದು
ಸೂತ್ರ
ಎಳೆದರೆ
ತುಂಬಾ
ತುಂಡರಿಸುತ್ತವೆ
ಎಳೆಯದಿದ್ದರೆ
ತಿಳಿಯದು
ಕಸುವು


ಸಂಭಂಧಗಳೊಂದು
ಸೂತ್ರ
ತೆರೆದರೆ
ತುಂಬಾ
ಆಗುತ್ತವೆ
ಕಗ್ಗಂಟು
ತೆರೆಯದೆ
ಗಟ್ಟಿಯಾಗಿ
ಸುತ್ತಿಟ್ಟರೆ
ಮಾಸುವದು
ಹೊಳಪು

ಸಂಭಂಧಗಳೊಂದು
ಸೂತ್ರ
ಸುಸ್ಥಿತಿಯಲಿಡಲು
ಇವನು
ವಿಶ್ವಾಸದ
ಗಾಳಿಪಟಕ್ಕೆ
ಕಟ್ಟಿ
ಹಾರಾಡ ಬಿಡಬೇಕು
ಆಗಸಕೆ
ಆಗಾಗ
-ಆನಂದ


ನಿಮ್ಮ ಇಷ್ಟ

ಹೆಂಡತಿಗೆ
ಕೇಳಿದ
ಪ್ರಶ್ನೆಗೆ
ಬಂತೆಂದರೆ
ಉತ್ತರ
ನಿಮ್ಮ
ಇಷ್ಟ

ಗಂಡಂದಿರೆ
ಹುಷಾರಾಗಿ
ಕಾದಿದೆ
ನಿಮಗೊಂದು
ಭಾರೀ
ಕಷ್ಟ
-ಆನಂದ



ಬಾಜೀರಾವ ಮಸ್ತಾನಿ

ಬಾಜೀರಾವ ಮಸ್ತಾನಿಯ
ಬಾಜೀರಾವನಿಗೆ
ನನ್ನ ಪ್ರಶ್ನೆ
ಒಂದೇ

ಇದ್ದರಲ್ಲಪ್ಪ
ಚೆನ್ನಾಗಿ
ಅತ್ತೆ-ಸೊಸೆ
ಕೂಡಿಕೊಂಡು
ಮಸ್ತಾಗಿ

ಹುಚ್ಚಪ್ಪ
ಯಾಕೇ
ಬೇಕಿತ್ತೋ
ನಿನಗೆ
ಮಸ್ತಾನಿ
-ಆನಂದ

Thursday, December 24, 2015

ಈ ಕವಿತೆಗಳಿಂದ

ಅದೊಂದು ದಿನ
ಕೇಳಿಕೊಂಡೆ
ನನ್ನನ್ನು
ನಾನೇ
ಏನು ಹೇಳಬೇಕೆಂದಿದ್ದೇನೆ
ಈ ಕವಿತೆಗಳಿಂದ

ಅಂದುಕೊಂಡಿಲ್ಲ
ನಿಮಗೆ
ತಿಳಿಯದ
ಹೊಸತೇನೊಂದನ್ನು
ಹೇಳಬೇಕೆಂದು
ಈ ಕವಿತೆಗಳಿಂದ

ಅಂದುಕೊಂಡಿಲ್ಲ
ಹಳತನ್ನೇ
ನಕಲು ಮಾಡಿ
ತಂಗಳನ್ನು
ಹೇಳಬೇಕೆಂದು
ಈ ಕವಿತೆಗಳಿಂದ

ಅಂದುಕೊಂಡಿದ್ದು
ಅದೊಂದೇ
ಸಹೃದಯರೊಡಗೂಡಿ
ಚಿಂತನ-ಮಂಥನ
ಮಾಡಿ ಬೆಳೆಯಬೇಕೆಂದು
ಈ ಕವಿತೆಗಳಿಂದ
- ಆನಂದ

ಸರಕು ಸವಲತ್ತುಗಳು

ಕೊಳ್ಳುಬಾಕು
ಕಾಲವಿದು
ಕ್ಷಣಾರ್ಧದಲಿ
ಪಡೆಯಬಹುದು
ಬೇಕು ಬೇಡಾದ
ಸರಕು ಸವಲತ್ತುಗಳನು

ಹಣವಿಲ್ಲದಿದ್ದರೂ
ಚಿಂತೆಯಿಲ್ಲ
ಸಾಲಕ್ಕೆ ಸಲಾಂ ಹೊಡೆದು
ಪಡೆಯಬಹುದು
ಬೇಕು ಬೇಡಾದ
ಸರಕು ಸವಲತ್ತುಗಳನು

ಹೆಣಗಬೇಕು
ಜೀವನವಿಡಿ
ಸಾಲ ಕಳೆದು
ಉಳಿಸಿಕೊಳ್ಳಲು
ಬೇಕು ಬೇಡಾದ
ಸರಕು ಸವಲತ್ತುಗಳನು

ಹೆಣವಾಗುವ
ಕಾಲ ಬಂದರೂ
ದೊರೆಯದು
ಕ್ಷಣಾರ್ಧ
ಅನುಭವಿಸಲು
ಬೇಕು ಬೇಡಾದ
ಸರಕು ಸವಲತ್ತುಗಳನು
-ಆನಂದ


Wednesday, December 23, 2015

ಜೀವಿಸುವ ಕಲೆ

ಕಲಿಯಬಹುದೇನೋ
ಯಾವುದಾದರೂ ಕಲೆ
ಆದರೆ ಕಲಿಯುವದು
ಬಲು ಕಷ್ಟ
ಜೀವಿಸುವ ಕಲೆ

ಕಲಿ ನಿನಗಿಷ್ಟವಾದ ಕಲೆ
ಆದರೆ ನೆಟ್ಟೀರಲಿ
ನಿನ್ನ ದೃಷ್ಟಿ
ಕಲಿಯಲು
ಜೀವಿಸುವ ಕಲೆ

ನಲುಗಿವೆ ಜೀವಗಳನೇಕ
ಹುಟ್ಟು-ಸಾವು ನೋವು-ನಲಿವುಗಳ
ಚಕ್ರದಲ್ಲಿ ಸಿಲುಕಿ
ತಿಳಿಯದೆ
ಜೀವಿಸುವ ಕಲೆ

ಮಾಡು ಮಹಾಪ್ರಯತ್ನವ
ಅರಿ ನಿನ್ನ ಸಾಮಥ್ಯ೯ವ
ಇರಲಿ ಶ್ರದ್ಧೆ ದೈವದಲಿ
ಆಗ ಮಾತ್ರ ಕಲಿಯಬಹುದು
ಜೀವಿಸುವ ಕಲೆ

ಭಗವಂತನ ನೆಲೆ
ತಲುಪಲೊಂದೇ ದಾರಿ
ಆದ ತಿಳಿಯಲು
ನೀ ಕಲಿ
ಜೀವಿಸುವ ಕಲೆ
- ಆನಂದ

IT ವೃತ್ತಿ

ಅನ್ನಿಸಬಹುದು
ಅನ್ಯ
ವೃತ್ತಿಯವರಿಗೆ
IT ಯವರು
ಭಾರೀ
ನಶೀಬವಂತರೆಂದು

ಅಲ್ಲಗೆಳೆಯುವದಿಲ್ಲ
ನಾವು
ಆದರೆ ಒಂದೇ
ವಿನಂತಿ
ತಿಳಿದುಕೊಳ್ಳಿ
ತೆತ್ತಿದ್ದೇವೆ
ಅದಕ್ಕಾಗಿ
ಭಾರೀ
ಬೆಲೆ

ದಿನಗೂಲಿ
ನೌಕರರು
ನಾವು
ವ್ಯತ್ಯಾಸವೊಂದೇ
ನಮ್ಮ
ದಿನದ
ಕೊನೆ ಮೊದಲು
ಸೂರ್ಯಾಸ್ತ
ಸೂರ್ಯೋದಯವಲ್ಲ

CLIENT
ಎದ್ದಾಗಲೇ
ಸೂರ್ಯೋದಯ
ಕೆಲಸ
ಮುಗಿದಾದಮೇಲೆಯೇ
ಸೂರ್ಯಾಸ್ತ
- ಆನಂದ

ನವ ವಾರ್ಷಿಕೋತ್ಸವ

On my 9th Marriage Anniversary. - Dec 14, 2015

ಕಳೆದಿವೆ
ನವ
ವರುಷ
ಆದರೆ
ಕಳೆದಿಲ್ಲ
ನಮ್ಮ
ಸಂಭಂದದ
ನಾವೀನ್ಯತೆ

ನವ
ವರುಷಗಳೇ
ನವರಾತ್ರಿಯಾದರೆ

ನವರಾತ್ರಿಯ
ದುರ್ಗೆಯೇ
'ಪ್ರಣತಿ'

ತುಂಬಿ
ಬಾಳಲ್ಲಿ
ಬೆಳಕ
ಸಾಗಿಸುತ್ತಿದಾಳೆ
ನಮ್ಮ ಸ್ವ
'ರೂಪ' ದಡೆಗೆ
'ಆನಂದ'
ತುಂಬಿ
-ಆನಂದ

ನಮ್ಮ ಬೆಂಗಳೂರು ಕಸ

ಕಸ
ಸಾಗಿಸಲು
ನಡೆದಿದೆ
ಕಸರತ್ತು
ಕರಗಿಲ್ಲ
ಆದರೂ
ಕಸ

ದುರ್ವಾಸನೆ
ಬೀರಿ
ಉದ್ಯಾನ
ನಗರಿಯ
ಅಂದವ
ಹಾಳುಗೆಡವಿದೆ

ನಗರದ
ಈ ಬಾಹ್ಯ
ಕಸ
ಹಿಡಿದಿದೆ
ಆಂತರಿಕ
ಆಡಳಿತ
ವ್ಯವಸ್ಥೆಗೊಂದು
ಕನ್ನಡಿ

ಮುಗಿಯದ
ಹೊರತು
ರಾಜಕೀಯ
ಮಸಲತ್ತು
ನಿಲ್ಲದು
ಕಸ
ಸಾಗಿಸುವ
ಕಸರತ್ತು
-ಆನಂದ

ಕವಿಯ ಜನನ

ಕವಿಯ ಜನನ
ಒಂದು ನಿಗೂಡ

ಕವಿಯ ಜನನಕ್ಕಿಲ್ಲ
ನವ ಮಾಸದ
ತಾಯಿ ಗರ್ಭದ
ಸರೆವಾಸ

ಭಗವಂತನ ರೂಪ
ಪ್ರಾದುರ್ಭಾವಗೊಂಡಂತೆ
ಕವಿಯ ಜನನ

ಕವಿಯ ಜನನ
ಬರಿಯ
ಕವಿಯ ಜನನವಲ್ಲ
ಅದೊಂದು
ಹೊಸ ಜಗದ
ಜನನ
-ಆನಂದ

ವಿಮಾನ ನಿಲ್ದಾಣಗಳು

ವಿಮಾನ
ನಿಲ್ದಾಣಗಳು
ಒಂದು 
ಅಧ್ಭುತ
ಲೋಕ

ಅನೇಕರ
ಅವಿರತ
ಶ್ರಮಕ್ಕವು
ಪ್ರತೀಕ

ನಡೆದಿದೆ
ಆಲ್ಲಿ
ಗುರಿಯತ್ತ
ಸಾಗುತ್ತಿರುವ
ವಿಮಾನಗಳ
ಏರಿಳಿತ
ನಿರಂತರ

ಸಾರುತಿದೆ
ಅದು
ಜೀವನದಲ್ಲಿ
ಕೂಡ
ಏರಿಳಿತ
ಸಹಜ
ಸಾಗುತ್ತಿರು
ನೀನು
ನಿನ್ನ
ಗುರಿಯತ್ತ
ನಿರಂತರ
-ಆನಂದ

IT ಕಲಾ ರಸಿಕರು

ಬರೆದಿದ್ದಾರೆ
ಸಂಗೀತಕ್ಕೆ
ಹೊಸ
ವ್ಯಾಖ್ಯಾನವನ್ನೇ
ನಮ್ಮ IT ಬಳಗದ
ಕಲಾ ರಸಿಕರು

ನಿಶ್ಯಬ್ದದ
CUBE ನಲ್ಲಿ
ಕೀಲಿಮಣೆಗಳ
ಮೇಲಿನ
ಕೈ ಬೆರಳುಗಳ
ಕುಣಿತದ
ಶಬ್ದವನ್ನೇ
ಸಂಗೀತವೆಂದು
ಸವಿದು
- ಆನಂದ

Save Whitefield

ನಮ್ಮ ಬೆಂಗಳೂರು IT
ಜನರ ಬಾಳು ಭಾರೀ
Black and White

ಹೊರಡುತ್ತಾರೆ ಪ್ರತಿ ದಿನ
White Field ಗೆ ಎಂದು

ಆದರೆ ತಲಪುತ್ತಾರೆ
ಕಪ್ಪು ಗಾಜಿನ ಕಟ್ಟಡಗಳ
ಕಿತ್ತು ಹೋದ ಕಪ್ಪು ರಸ್ತೆಗಳ
ಕಪ್ಪು ಹೊಗೆ ತುಂಬಿದ
Black Field ಗೆ !
- ಆನಂದ

ಸೋಲಿನ ಗಮ್ಮತ್ತು

ಸೋಲನ್ನು ಜರಿದರು
ಹಳಿದರು ಹುಸಿ ಗೆಲುವಿನ
ಸರದಾರರು

ಹುಸಿ ಗೆಲುವಿನ
ಸರದಾರರಿಗೇನು
ಗೊತ್ತು ನಿಜ
ಸೋಲಿನ ಗಮ್ಮತ್ತು

ಸೋಲು ಕೊಡುವುದು
ಬಾಳಿಗೆ ಅರ್ಥ
ಇಂಥ ಸೋಲಿಗಂಜಿ
ಓಡಿದವನ ಬಾಳು ವ್ಯರ್ಥ
- ಆನಂದ

ಕಾವ್ಯ ಗಂಗೆ

ಕಾವ್ಯ ಹಾಗೂ ಗಂಗೆಯ
ಮೂಲ ಹುಡುಕ ಹೋಗಬೇಡಿ

ಅನುಭವ ಹಿಮಾಲಯದ ಆಳದಲ್ಲಿ
ಹೆಪ್ಪುಗಟ್ಟಿದ ಭಾವಗಳು
ಹೃದಯ ಬಡಿತದ ಕಾವಿಗೆ
ನೀರಾಗಿ ಹರಿದದ್ದೇ
ಕಾವ್ಯ ಗಂಗೆ
- ಆನಂದ

ನಿಜ ಆನಂದ


ಜಗವೆಲ್ಲಾ
ನಿಜ ಆನಂದಕ್ಕಾಗಿ
ಹುಡುಕಾಡಿ
ದಣಿದು ಬಾಯಾರಿದವನ್ನು
ತಣಿಸಿತ್ತು 
ಅವನೊಳಗೆ ಅಡಗಿದ್ದ
ಆನಂದದ
ಚಿಲುಮೆ
-ಆನಂದ

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...