Saturday, August 21, 2021
ಹುಡುಕ್ಕುತ್ತಿರುವೆ
ಹುಡುಕುತ್ತಿರುವೆ ಆ ಚಿತ್ರಕ್ಕಾಗಿ
ಹುಡುಕುತ್ತಿರುವೆ ಆ ಕ್ಷಣಕ್ಕಾಗಿ
ಹುಡುಕುತ್ತಿರುವೆ ಆ ಸ್ಥಳಕ್ಕಾಗಿ
ಹುಡುಕ್ಕುತ್ತಿರುವೆ ಆ ಶಿಲ್ಪಕ್ಕಾಗಿ
ಹುಡುಕ್ಕುತ್ತಿರುವೆ ಆ ಶಬ್ದಕ್ಕಾಗಿ
ಹುಡುಕ್ಕುತ್ತಿರುವೆ ಆ ಒಳನೋಟಕ್ಕಾಗಿ
ಹುಡುಕ್ಕುತ್ತಿರುವೆ ಆ ಸಂಗೀತಕ್ಕಾಗಿ
ಹುಡುಕ್ಕುತ್ತಿರುವೆ ಆ ದೃಶ್ಯಕ್ಕಾಗಿ
ಹುಡುಕ್ಕುತ್ತಿರುವೆ ಆ ಅನುಭವಕ್ಕಾಗಿ
ಹುಡುಕ್ಕುತ್ತಿರುವೆ ಮನದಾಳದ ಆ
ಅಮೂರ್ತ ಭಾವನೆಯ
ಬಿಡುಗಡೆಗೆ ರೂಪಕವಾಗಿ
ಕಾಲ ಕಳೆಯುತ್ತಲಿದೆ
ಜೀವನದ ಪಯಣ
ಕೊನೆಯತ್ತ ಸಾಗಿದೆ
ಸಿಕ್ಕಿಲ್ಲ ಇನ್ನೂ ಏನು
ಭರವಸೆ ಒಂದೇ
ಆ ರೂಪಕ ಬಂದು ಹೋಗುವುದು
ಪ್ರತಿ ಬಾರಿ ದಟ್ಟ ಕತ್ತಲು ಕವಿದಾಗ
ಕಂಡು ಕಾಣದ
ಮಾಯವಾಗುವ ಮಿಂಚಿನಂತೇ
- ಬುಡ ಬುಡ್ಕಿ ಬಾಬಾ
Subscribe to:
Posts (Atom)
Featured Post
ಬುಡು ಬುಡ್ಕಿ ಬಾಬಾ
ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...

-
ಬದುಕಿನ ಪುಸ್ತಕದಲಿ ತಿರುವಿದೆ ಇನ್ನೊಂದು ವರುಷವೆಂಬ ನೆನಪಿನ ಪುಟ ತೆರೆದಿದೆ ಮತ್ತೊಂದು ವರುಷವೆಂಬ ಹೊಸ ಪುಟ || ೧ || ಪ್ರತಿ ಹೊಸ ಪುಟವು ಹಳೆಯ ಎಲ್ಲ ಪುಟಕ್ಕಿಂ...
-
ಕಾವ್ಯ ಅಸ್ವಾದಿಸಲಾಗದು ನಮ್ಮ ತರ್ಕದ ಗಡಿ ದಾಟಿ ಕಾವ್ಯದ ಭಾವದಲಿ ತಲ್ಲೀನವಾಗದೆ - ಬುಡ ಬುಡ್ಕಿ ಬಾಬಾ