Sunday, December 27, 2015

ಮಿನುಗುಗಣ್ಣಿನ ಬಾಲಕ

ಮಿನುಗುಗಣ್ಣಿನ
ಬಾಲಕನೊಬ್ಬ
ಇರುತ್ತಾನೆ
ಎಲ್ಲರೊಳಗೆ
ಆಟಿಗೆಯ
ಹಂಗಿಲ್ಲದೆ
ಜಗವನೆ ಕಂಡು
ನಲಿಯುವವ
ಬಾಲ್ಯದಲಿ

ಮಿನುಗುಗಣ್ಣಿನ
ಬಾಲಕನನ್ನು
ಪ್ರತಿ ದಿನ
ಬಿಟ್ಟು
ಹೋಗುತ್ತಾರೆ
ಶಾಲಾ-ಕಾಲೇಜುಗಳಿಗೆ
ವ್ಯಾಸಂಗಕ್ಕೆಂದು
ಕೌಮಾರ್ಯದಲಿ

ಮಿನುಗುಗಣ್ಣಿನ
ಬಾಲಕನಿಗೆ
ಬಣ್ಣ ಬಣ್ಣದ
ಆಟಿಗೆಯ
ಆಸೆಯ ತೋರಿ
ಬಾಗಿಲು ಕಿಟಕಿಗಳಿಲ್ಲದ
ಕೊಠಡಿಗೆ ಹಾಕಿ
ಬೀಗ ಜಡಿದು
ಹೋಗುತ್ತಾರೆ
ಜಗವ ಬಗೆಯಲು
ಯೌವ್ವನದಲಿ

ಮಿನುಗುಗಣ್ಣಿನ
ಬಾಲಕನಿಗಾಗಿ
ಬಣ್ಣ ಬಣ್ಣದ
ಭಾವವಿಲ್ಲದ
ಆಟಿಗೆಗಳ
ತುಂಬಿ ತಂದು
ಕೊಠಡಿಯ
ಬಾಗಿಲು ತೆರೆದಾಗ
ಕಂಡಿದ್ದು
ಅಸ್ಥಿಪಂಜರ
ಮಾತ್ರ
ವೃಧ್ಯಾಪ್ಯದಲಿ
-ಆನಂದ

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...