Thursday, January 28, 2016

ಏಳು ನನ್ನಾತ್ಮಗಳು (ಅನುವಾದ: THE SEVEN SELVES - Kahlil Gibran)

ರಾತ್ರಿಯ ಒಂದು ನಿಶ್ಯಬ್ದ ಘಂಟೆಯಲ್ಲಿ
ಅರ್ಧ ನಿದ್ದೆಯಲ್ಲಿದ್ದಾಗ ನನ್ನಲ್ಲೇ
ಇರುವ ಏಳು ನನ್ನಾತ್ಮಗಳು
ಎದ್ದು ಪಿಸು ಮಾತಿನಲ್ಲಿ ಚರ್ಚಿಸುತ್ತಿದ್ದವು || ೦ ||

ಮೊದಲನೇ ಆತ್ಮ ಅಂದಿತು ಈ
ಹುಚ್ಚ ಮನುಜನಲ್ಲಿ ಇಷ್ಟು ವರ್ಷ ಇದ್ದು
ದಿನದಲ್ಲಿ ಈತನ ನೋವನ್ನು ನವೀಕರಿಸುವ
ರಾತ್ರಿಯಲ್ಲಿ ಈತನ ದು:ಖವನ್ನು ಪುನರನಿರ್ಮಿಸುವ
ನನ್ನ ವಿಧಿಯನ್ನು ಇನ್ನೂ ಹೆಚ್ಚು ತಡೆಯಲಾರೆ
ನಾನಿಂದೇ ಬಂಡಾಯ ಏಳುತ್ತೇನೆ || ೧ ||

ಎರಡನೇ ಆತ್ಮ ಅಂದಿತು ನಿನ್ನದು ನನಗಿಂತ
ಎಷ್ಟೋ ವಾಸಿ ನನಗೆ ಕೊಟ್ಟಿರುವದು ಈ
ಹುಚ್ಚ ಮನುಜನಿಗಾಗಿ ಸಂಭ್ರಮಿಸುವ  ಕೆಲಸ
ಆತನ ನಗುವಲ್ಲಿ ನಗುವಾಗಿ ಅನಂದಲಿ ಹಾಡಿ
ಆತನ ಉತ್ತಮ ವಿಚಾರಗಳಿಗೆ ಹೆಜ್ಜೆ ಹಾಕಿ ಕುಣಿಯಬೇಕು
ಈ ಉತ್ಸಾಹಗುಂದಿದ  ಅಸ್ತಿತ್ವದ ವಿರುದ್ಧ
ನಾನಿಂದೇ ಬಂಡಾಯ ಏಳುತ್ತೇನೆ || ೨ ||

ಮೂರನೆಯ ಆತ್ಮ ಅಂದಿತು
ನನ್ನದೇನು ಗೊತ್ತೇ?
ಪ್ರೀತಿಗೆ ಅ೦ಟಿರಬೇಕು ನಾನು
ದೀಪದ ಬೆಂಕಿಯಂತೆ ಉರಿಯಬೇಕು ಈತನ
ಭಾವೋದ್ವೇಗಕ್ಕೆ ಹಾಗೂ ನಂಬಲಸಾಧ್ಯವಾದ ಆಸೆಗಳಿಗೆ
ಈ ಪ್ರೇಮ ರೋಗದಿಂದ ಬಳಲಿರುವ
ನಾನಿಂದೇ ಬಂಡಾಯ ಏಳುತ್ತೇನೆ || ೩ ||

ನಾಲ್ಕನೆಯ ಆತ್ಮ ಅಂದಿತು
ನಿಮ್ಮೆಲ್ಲರಲ್ಲಿ ನಾನೇ ನಿಕೃಷ್ಟ
ನನಗೆ ಕೊಟ್ಟಿರುವ ಕೆಲಸ
ಹೇಯವಾದ ಹಗೆ ಮತ್ತು ವಿನಾಶಕಾರಿಯಾದ ದ್ವೇಷ
ಅದಕ್ಕೆ ಬಿರುಗಾಳಿಯಂತಿರುವ ಹಾಗೂ
ನರಕದ ಕಪ್ಪು ಗವಿಯಲ್ಲಿ ಹುಟ್ಟಿರುವ
ನಾನಿಂದೇ ಬಂಡಾಯ ಏಳುತ್ತೇನೆ || ೪ ||

ಐದನೆಯ ಆತ್ಮ ಅಂದಿತು
ಸಾಧ್ಯವಿಲ್ಲ,  ವಿಚಾರ ಮಾಡುವ ನಾನು
ಕೇವಲ ಕಾಲ್ಪನಿಕನಾದ ನಾನು
ಸದಾ ಹಸಿವೆ ಹಾಗೂ ನೀರಡಿಕೆಯಿಂದ ಕೂಡಿ
ವಿರಾಮವಿರದೆ ಗೊತ್ತಿರದರ ಹಿಂದೆ ಅಲಿಯುವ
ನಾನಿಂದೇ ಬಂಡಾಯ ಏಳುತ್ತೇನೆ || ೫ ||

ಆರನೆಯ ಆತ್ಮ ಅಂದಿತು
ಮತ್ತೆ ನಾನು ಕೆಲಸ ಮಾಡುವ ನಾನು
ಕರುಣಾಜನಕ ಶ್ರಮಗಾರನಾದ ನಾನು
ಸಹನೆಯಿರುವ ಕೈ ಹಾಗೂ ಆಸೆ ಭರಿತ ಕಣ್ಣುಗಳಿಂದ ಕೂಡಿರುವ
ಆಕಾರವಿರದವುಗಳಿಗೆ ಆಕಾರ ಕೊಡುವ ಏಕಾಂಗಿಯಾದ
ನಾನಿಂದೇ ಬಂಡಾಯ ಏಳುತ್ತೇನೆ || ೬ ||

ಏಳನೆಯ ಆತ್ಮ ಅಂದಿತು
ಇದೇನು ವಿಚಿತ್ರ ಪ್ರತಿಯೊಬ್ಬರಿಗೂ ಪಾಲಿಸಲು ವಿಧಿಲಿಖಿತ ಇದ್ದಾಗೂ
ಈ ಹುಚ್ಚ  ಮನುಜನ ವಿರುದ್ಧ ಬಂಡಾಯ ಏಳಬೇಕೆಂದಿರುವಿರಿ
ಅಯ್ಯೋ ನಾನಾಗಿರಬಾಗಿತ್ತೇ ನಿಮ್ಮಂತೆ ವಿಧಿಲಿಖಿತ  ಹೊಂದಿದವ
ಆದರೆ ನನಗಿಲ್ಲ ನಿಮ್ಮ ಭಾಗ್ಯ ನಾನು ಏನು ಮಾಡದವ
ಕುಳಿತಿರುತ್ತೇನೆ ಹೆಡ್ಡನಂತೆ ಖಾಲಿಯಾಗಿ
ನೀವೆಲ್ಲಾ ಜೇವನವನ್ನು ಮರು ಸೃಷ್ಟಿಸುವಾಗ || ೭ ||

ಆದ ಕೇಳಿ ನೋಡಿದವು ಉಳಿದಾರು ಆತ್ಮಗಳು ಕನಿಕರದಿಂದ
ಏಳನೆಯ ಆತ್ಮದ ಕಡೆಗೆ ಹಾಗೂ ಉರಳಿದವು ಮರಳಿ ಗಾಢ ನಿದ್ದೆಗೆ
ತುಂಬಿ ಹೊಸ ಹಾಗೂ ಸಂತೋಷಭರಿತ ವಿಧೇಯತೆಯಿಂದ
ಆದರೆ ಏಳನೇ ಆತ್ಮ ಮಾತ್ರ ಎಚ್ಚರದಿಂದ ದಿಟ್ಟಿಸಿ ನೋಡುತ್ತಲೇ ಇತ್ತು
ಉಳಿದೆಲ್ಲದರ ಹಿಂದಿನ ಶೂನ್ಯತೆಯನ್ನು || ೮ ||
ಬುಡ ಬುಡ್ಕಿ ಬಾಬಾ

ಅನುವಾದ: THE SEVEN SELVES - Kahlil Gibran

http://www-personal.umich.edu/~jrcole/gibran/madman/madman.htm#The Seven

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...