Saturday, January 30, 2016

ರೂಪಾಂತರ

ಭಾಳ ಛ೦ದಿತ್ತು ಪ್ರೀತಿ ಭಾಳ ಛ೦ದಿತ್ತು
ಜಗವ ಕಾಣುವ ರೀತಿ ಅದು ಬದಲಿಸಿತ್ತು
ಹುಚ್ಚೆಂದು ಅನಿಸಿದ್ದು ಸರಿ ಎಂದು ಅನಿಸಿತ್ತು || ಪ ||

ಪ್ರತಿ ಎದೆ ಬಡಿತದಲ್ಲೂಸಂಗೀತ ತುಂಬಿತ್ತು
ಪ್ರತಿ ಉಸಿರಿನಲ್ಲೂ ಪರಿಮಳವು ಬೆರೆತಿತ್ತು
ಪ್ರತಿ ಮಾತಿನಲ್ಲೂ ಜೇನು ಸುರಿದಿತ್ತು
ಪ್ರತಿ ಹೆಜ್ಜೆಯಲ್ಲೂ ತಾಳ ಕಂಡಿತ್ತು || ೧ |||

ಕಪ್ಪು ಬಿಳುಪಿನಲ್ಲೂ ಕೂಡ ಬಣ್ಣ ಬೆರೆತಿತ್ತು
ಮುಳ್ಳೆಲ್ಲಾ ಬರಿದಾಗಿ ಬರಿ ಹೂವು ಕಂಡಿತ್ತು
ಪ್ರತಿ ಕೆಲಸದಲ್ಲೂ ಉತ್ಸಾಹ ತುಂಬಿತ್ತು
ಆಕಾಶವೂ ಕೂಡ ಬಲು ಸನಿಹ ಅನಿಸಿತ್ತು || ೨ ||

ಪ್ರೀತಿಯ ರೂಪ ಮನಸ ತುಂಬಿತ್ತು
ಆನಂದದ ಅಣೆಕಟ್ಟೆ ಒಡೆದು ಹರೆದಿತ್ತು
ಹರಿದ ನೀರು ತಿಳಿಯಿತ್ತು ಸವಿಯಿತ್ತು
ಎಲ್ಲಡೆ ಸಂಭ್ರಮದ ಪೈರು ಕಂಗೊಳೆಸಿತ್ತು || ೩||

2 comments:

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...