Monday, February 15, 2016

ಮನಸಿನ ಒಂದು ತಿರುವಿನಲಿ

ಹೊಂಚು ಹಾಕಿ ಕುಳಿತಿದ್ದೆ
ಹಿಡಿಯಲದನು ಬಹು ದಿನದಿಂದ
ಓಡಿತು ಅದು ನೆಗೆದು ನನ್ನ ಕಂಡು
ಓಡಿದೆ ನಾನು ಕೂಡ ಅದರ ಹಿಂದೆ
ಹಿಂದೆಂದೂ ಓಡಿರದ ಹಾಗೆ || ೧ ||

ವೇಗವನ್ನು ಹೆಚ್ಚಿಸಿಕೊಂಡಿತು ಅದು
ನಾನು ಕೂಡ ಹೆಚ್ಚಿಸಿದೆ ವೇಗ
ನಾನೇನು ಕಮ್ಮಿ  ಎಂದು
ಓಡಿದೆ ಅದರ ಹಿಂದೆ
ನನ್ನದೆಲ್ಲವನ್ನು   ಬಸಿದು || ೨ ||

ತಿರುವು ಮುರುವು ಅಂಕು ಡೊಂಕು
ತೆಗ್ಗು ದಿಣ್ಣೆ ಹಾದಿ ಹಿಡಿದು ಹಾರಿ
ಓಡಿತು ತಪ್ಪಿಸಿಕೊಳ್ಳಲು
ನಾನು ಅಟ್ಟಿಸಿಕೊಂಡು ಹೋದೆ
ಚಿರತೆ ಜಿಂಕೆಯನ್ನು ಬೆಂಬತ್ತುವಂತೆ || ೩ ||

ಇನ್ನೇನು ಸಿಕ್ಕೇ ಬಿಟ್ಟಿತು
ಅನ್ನುವಷ್ಟರಲ್ಲಿ ಮತ್ತೆ
ತಪ್ಪಿಸಿಕೊಂಡಿತು
ಆ ತುಂಟ ಕನಸು
ಮನಸಿನ ಒಂದು ತಿರುವಿನಲಿ || ೪ ||

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...