Monday, February 29, 2016

ಮಾರ್ಜಾಲ ನ್ಯಾಯ

ತಕ್ಕಡಿಯಲಿ ತರಕಾರಿಗಳಂತೆ
ತಮ್ಮ ಜೀವನವನಿಟ್ಟು
ತೂಗಿ ನೋಡುವದನು
ರೂಡಿ
ಮಾಡಿಕೊಂಡಿರುತ್ತಾರೆ
ಕೆಲವರು || ೧ ||

ತಕ್ಕಡಿಯ ಒಂದು ತಟ್ಟೆಯಲಿ
ತಮ್ಮ ಜೀವನವನು
ಇನ್ನೊಂದು ತಟ್ಟೆಯಲಿ
ಬೇರೆಯವರ ಜೀವನವನಿಟ್ಟು
ತೂಕ ನೋಡಿ ಹೆಚ್ಚು ಕಡಿಮೆ ಮಾಡಿ
ಸರಿ ತೂಗುವ ತಾಕಲಾಟದಲ್ಲಿ
ತಲ್ಲೀನರಾಗಿರುತ್ತಾರೆ || ೨ ||

ಅದೆಂದಿಗೂ ಸರಿದೂಗದ
ಮಾರ್ಜಾಲ ನ್ಯಾಯದಂತೆ
ತಮಗೆ ತಾವೇ ಮೋಸ
ಮಾಡಿಕೊಳ್ಳುವ ಪ್ರಕ್ರಿಯೆ
ಎಂಬುದು ಅವರ
ಜೀವನವೆಲ್ಲ ಮುಗಿದು ಹೋಗುವವರೆಗೂ
ಅರಿವೆಗೆ ಬರುವುದೇ ಇಲ್ಲ || ೩ ||

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...