Saturday, February 13, 2016

ಏಕತಾನತೆಯ ಇನ್ನೊಂದು ದಿನ

ಕತ್ತಲಿನ ಗಾಡ ರಾತ್ರಿಯಲಿ
ಕಡಿದಾದ ಬೆಟ್ಟವನು ಹತ್ತಿ
ಇನ್ನೇನು ತುದಿ
ಮುಟ್ಟಬೇಕೆಂದಾಗ
ಕಾಲು ಜಾರಿತ್ತು || ೧ ||

ಬೆಟ್ಟವೇ ಜಾರುಬಂಡಿಯಾಗಿ
ಜಾರಿದ್ದೆ ಪ್ರಪಾತದತ್ತ
ಅನಿಸಿತ್ತು ನನಗೆ
ನನ್ನ ಕತೆ
ಮುಗಿಯಿತೆಂದು || ೨ ||

ಗತಿಸಿದ ಜೀವನದ
ನೆನಪುಗಳು
ಸುರುಳಿ ಸುರಿಳಿಯಾಗಿ
ಜಾರಿ ಹೋದವು
ಕಣ್ಣ ಮುಂದೆ || ೩ ||

ನನಗೆ ನಾನೇ ಕಂಡೆ
ಅಪರಿಚಿತನಂತೆ
ನಾನೇನಾ ಇವನು
ಅಯ್ಯೋ ಉಳಿದರೆ
ಬದಲಾಗುವೆ
ನಾನು ನಾನಾಗುವೆ ಎಂದುಕೊಂಡೆ || ೪ ||

ಇನ್ನೇನು ಪ್ರಪಾತಕ್ಕೆ ಬೀಳಲು
ಕ್ಷಣಮಾತ್ರವಿದ್ದಾಗ
ಕಣತೆರೆದಿತ್ತು ಅಲಾರಾ೦ ಶಬ್ದಕ್ಕೆ
ಮರೆತು ಎಲ್ಲವ
ಸಿದ್ದನಾದೆ ಏಕತಾನತೆಯ
ಇನ್ನೊಂದು ದಿನಕೆ || ೫ ||

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...