Wednesday, March 9, 2016

Katyar Kaljat Ghusli Marathi 2015 - ಸಿನೆಮಾದ ಭಾವಾನುವಾದಗಳು


ಈ ಕಠಾರಿ
======

ಕಲಾಕಾರರಿಗೆ
ಶತ್ರುಗಳು
ಬಹಳ
ಅವರ
ಬಹು
ದೊಡ್ಡ
ಶತ್ರು
ಅವರದೇ
ಅಹಂಕಾರ

ಶತ್ರುಗಳ
ದಮನಕ್ಕಾಗಿಯೇ
ಅವರಿಗಿರಲಿ
ಈ ಕಠಾರಿ

ವಿದ್ಯೆ ಹಾಗೂ ಕಲೆ
============

ವಿದ್ಯೆಯೇ ಬೇರೆ
ಕಲೆಯೇ ಬೇರೆ

ವಿದ್ಯೆ ಹೊರಗಿನಿಂದ ಒಳಗೆ
ಕಲೆ ಒಳಗಿನಿಂದ ಹೊರಗೆ

ವಿದ್ದೆಗೆ ಮಸ್ತಿಷ್ಕ ಸಾಕು
ಕಲೆಗೆ ಮಸ್ತಿಷ್ಕ ಹಾಗೂ ಹೃದಯ ಎರಡು ಬೇಕು

ವಿದ್ಯೆ ತಾಳದಂತೆ ಕಲಿಯಬಹುದು ಕಲಿಸಬಹುದು
ಕಲೆ ಲಯವಿದ್ದಂತೆ ಹುಟ್ಟಿನಿಂದ ಅಂತರ್ಗತ

ವಿದ್ಯೆ ಜಗದ ಒಗಟು ಬಿಡಿಸಿದರೆ
ಕಲೆ ಜಗದಲಿ ಒಗಟು ಸೃಷ್ಟಿಸುತ್ತೆ


ಗುರು ಶಿಷ್ಯ - ೧
==========

ಗುರುವ್ಯಾರೆಂದರೆ
ತನ್ನ ಕಾಲ
ಮೇಲೆ ನಿಂತ
ಶಿಷ್ಯನಿಗೆ
ಯೋಗ್ಯ
ಹಾಗೂ
ಹತ್ತಿರದ
ದಾರಿ
ತೋರುವವ

ಗುರು ಶಿಷ್ಯ - ೨
==========

ಗುರುವೆಂಬ
ದೀಪ
ತನ್ನ
ಜ್ವಾಲೆಯನು
ತೈಲ
ಬರಿದಾಗುವ
ಮೊದಲು
ಶಿಷ್ಯನೆಂಬ
ದೀಪದಲಿ
ಪ್ರಜ್ವಲಿಸಬೇಕು

ಗಾಯಕ -೧
=======

ಕಂಠವು
ಮಸ್ತಿಷ್ಕ
ಹಾಗೂ
ಹೃದಯದ
ಮಧ್ಯವಿರುವುದು
ಗಾಯಕ
ಸಂಗೀತ
ಒಲೆಯಲು
ಎರಡನ್ನೂ
ಹದವಾಗಿ
ವಿನಿಯೋಗಿಸಬೇಕೆಂಬುದರ
ಸೂಚನೆ

ಗಾಯಕ -೨
=======

ಗಾಯಕ
ರಾಗದಲಿ
ರಾಗ
ಬೆರೆಯದಂತೆ
ವಹಿಸಿದ
ಎಚ್ಚರ
ಮಾನವೀಯತೆಯಲ್ಲಿ
ಅಹಂಕಾರ
ಬೆರೆಯದಿರಲೂ
ವಹಿಸಬೇಕು

2 comments:

  1. ಭಾವಾನುವಾದಗಳೆಲ್ಲವೂ ಅರ್ಥಗರ್ಭಿತ ಮತ್ತು ಮಾರ್ಮಿಕವಾಗಿ ಮೂಡಿವೆ. ಚಲನಚಿತ್ರದ ಆಶಯಗಳು ಕನ್ನಡಕ್ಕೂ ಪರಿಚಯಿಸಿದ್ದೀರಿ. ಧನ್ಯವಾದಗಳು.

    ReplyDelete
    Replies
    1. ಧನ್ಯವಾದಗಳು ಸರ್. ಹಿಂದುಸ್ತಾನಿ ಸಂಗೀತದಲ್ಲಿ ಅಭಿರುಚಿ ಇದ್ದರೆ ಈ ಚಿತ್ರವನ್ನು ಖಂಡಿತ ನೋಡಿ. ಸಬ್ ಟೈಟಲ್ ಇರವ ಚಿತ್ರದ ಪ್ರತಿ ಆನ್‌ಲೈನ್ ಇದೆ,

      Delete

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...