Thursday, June 16, 2016

ಹದ (ಶ್ರೀಧರ ಬಳಗಾರ : ಹದ ಕತೆಯ ಭಾವಾನುವಾದ - ಮಯೂರ - ಜೂನ್ - ೨೦೧೬)

ಪ್ರಕೃತಿಯು ಅಡಗಿಸಿದೆ
ಉತ್ಕೃಷ್ಟತೆಯ
ಮೂಲ ದ್ರವ್ಯವನ್ನು
ಅರಿತರೂ ಅರಿಯದಂತೆ ಯಾರಿಗೂ
ಕರೆಯುವರು ಅದನೆ
ಹದವೆಂದು || ೧ ||

ನಳನ ಪಾಕದ ರುಚಿಯಲಿ
ವೈದ್ಯನ ಕೈಗುಣದಲಿ
ಕಮ್ಮಾರನ ಹೊಡೆತದಲಿ
ಕಲಾಕಾರನ ಕಲೆಯಲಿ
ಸಾಹಿತಿಯ ಸಾಹಿತ್ಯದಲಿ
ಆಟಗಾರನ ಆಟದಲಿ
ತಂತ್ರಜ್ಞನ ಯಂತ್ರದಲಿ
ಮುತ್ಸದ್ಧಿಯ ಮಾತಿನಲಿ
ಪ್ರತಿ ಉತ್ಕೃಷ್ಟತೆಯಲಿ
ಅಡಗಿದೆ ಹದ || ೨ ||

ಹದವೆಂಬುದು ಕಲಿಯಲಾಗದು
ಶಾಲೆಯಲಿ ಕಲಿತ ವಿದ್ಯೆಯಂತೆ
ಹದಕಿಲ್ಲ ಸೂತ್ರ ಲೆಕ್ಕಾಚಾರ
ಹದವ ಒಲಿಸಿಕೊಂಡವ
ಕೂಡ ಹೇಳಲಾರ ಕಲಿಸಲಾರ
ಹದವೇನೆಂದು ಯಾರಿಗೂ || ೩ ||


ಪ್ರತಿ ನಿಷ್ಣಾತನ ಕುಶಲತೆ
ಸಂಯಮ ಕಸುಬಿನ ತಲ್ಲೀನತೆಯ
ದಾಟಿ ಉತ್ಕೃಷ್ಟತೆಯ
ಆಭಿವ್ಯಕ್ತಿಗೊಳಿಸುವ ಅವ್ಯಕ್ತ
ಶಕ್ತಿಯೇ ಹದ || ೪ ||

ಹದವರಿಯಬೇಕು
ಅನುಭವಿಸಿ ಮಾಡುವ
ಕೆಲಸದಲಿ ಶ್ರದ್ಧೆ ಜ್ಞಾನ ತುಂಬಿ
ಜೀವಿಸುವ ಪ್ರತಿ ಕ್ಷಣವ
ಅದರ ಧ್ಯಾನದಲೇ ಮುಳುಗಿ
ತಪದಂತೆ ಆಚರಿಸುವ
ಋಷಿಯಾಗಿ ಯೋಗಿಯಾಗಿ || ೫ ||  

ಬುಡ ಬುಡ್ಕಿ ಬಾಬಾ

2 comments:

  1. ಮೂಲ ಕಥೆ ಓದಿಲ್ಲ. ಆದರೂ ಕವಿತೆ ಸುಂದರವಾಗಿ ಮೂಡಿದೆ.

    ReplyDelete
  2. ಧನ್ಯವಾದಗಳು. ಅವಕಾಶ ಸಿಕ್ಕಾಗ ಕಥೆ ಓದಿ ನೋಡಿ. http://mayuraezine.com/

    ReplyDelete

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...