Sunday, September 25, 2016

ಅಂತರ

ಅವಳೆಂದುಕೊಂಡಳು ಆತ
ಕಟ್ಟಿದರೆ ನನ್ನ ಕನಸಿನ ಗೋಪುರ
ಆಗಬಹುದು ನಾವಿಬ್ಬರು ಹತ್ತಿರ || ೧ ||

ಅವನೆಂದುಕೊಂಡ ಅವಳ
ಕನಸ ನನಸಾಗಿಸಿದರೆ
ಆಗಬಹುದು ನಾವಿಬ್ಬರು ಹತ್ತಿರ || ೨ ||

ಒಂದೊಂದೇ ಇಟ್ಟಿಗೆ ಕೂಡುತ್ತಾ ಹೋದ ಆತ
ಒಂದೊಂದೇ ಇಟ್ಟೆಗೆ ಜೋಡಿಸುತ್ತಾ ಹೋದಳು ಅವಳು || ೩ ||

ಕಾಲದ ಪರಿವೆ ಮರೆತು ಕಟ್ಟಿ ಮುಗಿಸಿದಾಗ
ಗೋಪುರದ ತುದಿ ಚುಂಬಿಸಿತ್ತು ಆಗಸವನ್ನು
ಅವಳಿದ್ದಳು ಗೋಪುರದ ತುದಿಯಲ್ಲಿ
ಆತನಿದ್ದ ಗೋಪುರದ ತಳದಲ್ಲಿ
ಅವರಿಬ್ಬರ ನಡುವಿತ್ತು ಭೂಮ್ಯಾಕಾಶದ
ಅಂತರ || ೪ ||
ಬುಡ ಬುಡ್ಕಿ ಬಾಬಾ

2 comments:

  1. ಜೀವನದ ಒಂದು ವಿಭ್ರಮ ಸ್ಥಿತಿಯನ್ನು ಕವಿತೆ ನಿಗೂಢವಾಗಿ ಪ್ರಸ್ತುತ ಮಾಡುತ್ತಿದೆ ಅನ್ನಿಸುತ್ತೆ.

    ReplyDelete
  2. ಜೀವನದ ಓಟದಲ್ಲಿ ದೊರೆತ ಒಳನೋಟ. ಕಾರ್ಯ-ಕಾರಣದಂತೆ, ಕನಸು-ಕಾರಣ ಸಂಬಂಧ ಕೂಡ ಮುಖ್ಯ.

    ReplyDelete

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...