Friday, December 9, 2016

ನಿಜ ರೂಪ

ಕತ್ತಲ ಆ ರಾತ್ರಿಯಲಿ
ದೀಪ ಉರಿಯುತಿದ್ದದ್ದು
ಆ ಗಾಜಿನ ಕೋಣೆಯಲಿ ಮಾತ್ರ
ಸರಿಯಾಗಿ ಕಂಡೇ ಇಬ್ಬರೇ
ಮಾತನಾಡುತಿದ್ದರು ಆದರೆ
ಶಬ್ದ ಮಾತ್ರ ಆರು ಜನರಿದ್ದಂತಿತ್ತು || ೧ ||

ದೇವರ ಬೇಡಿಕೊಂಡೆ ಕೊಡು
ನನಗೆ ದಿವ್ಯದೃಷ್ಟಿ
ಮತ್ತೊಮ್ಮೆ ಇಣುಕಿ ನೋಡಿದೆ
ನನ್ನ ಕಣ್ಣು ಕಂಡ ದೃಶ್ಯಕ್ಕೆ
ನನ್ನ ಹಳೇ ನಂಬಿಕೆಗಳೆಲ್ಲ
ಬುಡಮೇಲಾಗಿತ್ತು || ೨ ||

ನಾನಂದುಕೊಂಡಿದ್ದೆ ಬರೀ ದೇವರಿಗೆ
ಉಂಟು ರೂಪಗಳು ಅನೇಕ
ಅದರಲ್ಲಿ ಕಂಡಿದ್ದು ಪ್ರತಿ
ಮನುಜನಿಗೂ ಮೂರು ರೂಪಗಳು
ಆತನ ನಿಜ ರೂಪ
ಆತ ತನ್ನ ಬಗ್ಗೆ ತಾನೆಂದುಕೊಂಡ ರೂಪ
ಬೇರೆಯವರು ಆತನ ಕಾಣುವ ರೂಪ || ೩ ||

ಮಜಕೂರವೆಂದರೆ
ಆತ ತನ್ನ ಬಗ್ಗೆ ತಾನೆಂದುಕೊಂಡ
ಬೇರೆಯವರು ಕಾಣುವ ರೂಪಗಳ
ಭರಾಟೆಯಲಿ ಆತನ ನಿಜ ರೂಪ
ಬಸವಳಿದು ಬಿಳಚಿತ್ತು  || ೪ ||
ಬುಡ ಬುಡ್ಕಿ ಬಾಬಾ

2 comments:

  1. ಮನುಷ್ಯನ ನಿಜರೂಪ ನಿಜಕ್ಕೂ ಇದೆಯೆ! ಅವನು ತನ್ನನ್ನು ವಿಶ್ಲೇಷಿಸಿಕೊಳ್ಳಲಾರ. ಇತರರು ಅವರವರ ಭಾವಬಂಧನದಲ್ಲಿಟ್ಟು ರೂಪ ಕೊಟ್ಟುಕೊಳ್ಳುತ್ತಾರೆ. ಒಳ್ಳೆಯ ಕವಿತೆ.

    ReplyDelete
  2. ಧನ್ಯವಾದಗಳು ಸರ್

    ReplyDelete

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...