Saturday, January 21, 2017

ಕೂಲಿಯಾಳು

ಹೇಳಿ ಯಾರು ಹೊತ್ತಿಲ್ಲ
ಭಾರಗಳನು
ಜೀವನದ ಪಯಣದಲಿ? || ೧ ||

ಎಲ್ಲರ ಚೀಲವು ಭಾರವೇ
ತುಂಬಿವೆ ಅವುಗಳಲಿ
ನಮ್ಮ ನೋವುಗಳ ಭಾರ
ನಮ್ಮ ಸೋಲುಗಳ ಭಾರ
ನಮ್ಮ ಭಯಗಳ ಭಾರ
ನಮ್ಮ ಆತಂಕಗಳ ಭಾರ
ನಮ್ಮದೇ ನ್ಯೂನತೆಗಳ ಭಾರ
ನಮ್ಮ ಆಸೆಗಳ ಭಾರ
ನಮ್ಮ ಮಹತ್ವಾಕಾ೦ಕ್ಷೆಗಳ ಭಾರ
ನಮ್ಮ ನಿಟ್ಟುರಿಸಿನ ಭಾರ
ನಮ್ಮ ಭ್ರಮೆಗಳ ಭಾರ
ನಮ್ಮ ನಂಬಿಕೆಗಳ ಭಾರ
ಅದೆಲ್ಲವ ಮೀರಿದ ಮಣಭಾರ
ನಾನು ನಾನೆಂಬ ಭಾರ || ೨ ||

ಅದೆಲ್ಲ ಇರಲಿ
ನಮ್ಮ ಈ ಭಾರಗಳ ಹೊತ್ತು
ಸಾಗಬೇಕಾದವರು ನಾವು
ಸಂಬಂಧಗಳಿರುವುದು
ಭಾರ ಹಂಚಿಕೊಳ್ಳಲು ಮಾತ್ರ
ಮಾಡದಿರೋಣ
ಸಂಬಂಧಗಳನು ನಮ್ಮ ಭಾರ
ಹೊರುವ ಕೂಲಿಯಾಳು || ೩ ||

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...