Saturday, March 11, 2017

ಒಂಚೂರು

ಸದಾ ಬಡ ಬಡಿಸುವ ಬುಡ ಬುಡ್ಕಿ ಬಾಬಾ
ಅದೇಕೋ ಸುಮ್ಮನಾಗಿದ್ದನಂತೆ
ಅದ ತಾಳಲಾರದೆ  ಅದ್ಯಾರೋ ಛೇಡಿಸಿದರಂತೆ
ಏ ಬುಡ ಬುಡ್ಕಿ ಬಾಬಾ  ಹೇಳೋ ದುಃಖ ಆನಂದದ
ನಡುವಿನ ಅಂತರ ಎಷ್ಟೋ ಎಂದು || ೧ ||

ಆದ ಕೇಳಿ ಅದೆಷ್ಟೋ ಲೆಕ್ಕಾಚಾರ ಮಾಡಿ ಅಂದನಂತೆ
ಭಾರೀ ಒಂಚೂರು
ಅದ್ಹೇಗೆ ಹೇಳು ಅಂದದಕ್ಕೆ
ಹೇಳಿದನಂತೆ ಮಾಡಿ ನೋಡು ಕೆಳಗಿದನು ಒಂಚೂರು || ೨ ||

ತಿನ್ನುವುದು ಮಾಡಿ ಕಡಿಮೆ ಒಂಚೂರು
ಮಾಡುವ ಕೆಲಸ ಮಾಡಿ ಹೆಚ್ಚು ಒಂಚೂರು || ೩ ||

ಬೇರೆಯವರ ತಪ್ಪು ನೋಡುವುದು ಮಾಡಿ ಕಡಿಮೆ ಒಂಚೂರು
ನಿಮ್ಮ ತಪ್ಪುಗಳ ನೋಡುವುದು ಮಾಡಿ ಹೆಚ್ಚು ಒಂಚೂರು || ೪ ||

ಸಿಟ್ಟು ಮಾಡುವುದು ಮಾಡಿ ಕಡಿಮೆ ಒಂಚೂರು
ಪ್ರೀತಿ ಮಾಡುವುದನು ಮಾಡಿ ಹೆಚ್ಚು ಒಂಚೂರು || ೪ ||

ಬೇಕುಗಳನು ಮಾಡಿ ಕಡಿಮೆ ಒಂಚೂರು
ಬೇಡ ಅನ್ನುವುದನು ಮಾಡಿ ಹೆಚ್ಚು ಒಂಚೂರು || ೪ ||

ಬೇರೆಯವರಿಂದ ನಮಗೇನು ಅನ್ನುವುದನು ಮಾಡಿ ಕಡಿಮೆ ಒಂಚೂರು
ನಮ್ಮಿಂದ ಬೇರೆಯವರಿಗೇನು ಎಂಬುದನು ಮಾಡಿ ಹೆಚ್ಚು ಒಂಚೂರು || ೪ ||

ತಗೆದುಕೊಳ್ಳುವದನು ಮಾಡಿ ಕಡಿಮೆ ಒಂಚೂರು
ಕೊಡುವದನು ಮಾಡಿ ಹೆಚ್ಚು ಒಂಚೂರು || ೫ ||

ಇಲ್ಲದರ ಬಗ್ಗೆ ಗೊಣಗಾಟ ಮಾಡಿ ಕಡಿಮೆ ಒಂಚೂರು
ಇದ್ದದ್ದರ ಬಗ್ಗೆ ಕೃತಜ್ಞತೆ  ಮಾಡಿ ಹೆಚ್ಚು ಒಂಚೂರು || ೬ ||

ಸೇಡು ಇಟ್ಟುಕೊಳ್ಳುವದನು ಮಾಡಿ ಕಡಿಮೆ ಒಂಚೂರು
ಕ್ಷಮೆ ಮಾಡುವುದನು ಮಾಡಿ ಹೆಚ್ಚು ಒಂಚೂರು || ೭ ||

ಸ್ವಾರ್ಥದ ಚಿಂತನೆ ಮಾಡಿ ಕಡಿಮೆ ಒಂಚೂರು
ಪರಹಿತದ ಚಿಂತನೆ ಮಾಡಿ ಹೆಚ್ಚು ಒಂಚೂರು || ೮ ||

ಎಲ್ಲರ ಬಗ್ಗೆ ಸಂದೇಹಗಳ ಮಾಡಿ ಕಡಿಮೆ ಒಂಚೂರು
ಎಲ್ಲರ ಬಗ್ಗೆ ವಿಶ್ವಾಸವಾ ಮಾಡಿ ಹೆಚ್ಚು ಒಂಚೂರು || ೯ ||

ಕೆಲಸ ಮಾಡುವಾಗ ಇಷ್ಟು ಸಾಕು ಅನ್ನುವುದನು ಮಾಡಿ ಕಡಿಮೆ ಒಂಚೂರು
ಕೆಲಸ ಸರಿಯಾಗಲು ಇನ್ನೂ ಒಂದು ಹೆಜ್ಜೆ ಹೋಗುವದನು ಮಾಡಿ ಹೆಚ್ಚು ಒಂಚೂರು || ೧೦||

ಕೆಲಸ ಮಾಡುವಾಗ ಇಷ್ಟು ಸಾಕು ಅನ್ನುವುದನು ಮಾಡಿ ಕಡಿಮೆ ಒಂಚೂರು
ಕೆಲಸ ಸರಿಯಾಗಲು ಇನ್ನೂ ಒಂದು ಹೆಜ್ಜೆ ಹೋಗುವದನು ಮಾಡಿ ಹೆಚ್ಚು ಒಂಚೂರು || ೧೧ ||

ಸೇವೆ ಮಾಡಿಸಿಕೊಳ್ಳುವುದನು ಮಾಡಿ ಕಡಿಮೆ ಒಂಚೂರು
ಸೇವೆ ಮಾಡುವುದನು ಮಾಡಿ ಹೆಚ್ಚು ಒಂಚೂರು || ೧೨ ||


2 comments:

  1. ಒಂಚೂರು ಕಡಿಮೆ ಇಲ್ಲದಂತೆ ಸಮರ್ಥವಾಗಿ ಏರುವ ದಾರಿ ತೋರಿಸಿದ್ದೀರಿ. ಉತ್ತಮ ಕವಿತೆ.

    ReplyDelete
  2. ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು

    ReplyDelete

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...