Saturday, April 1, 2017

ಧ್ಯಾನ

ನಾ ಕೇಳೆದೆ
ಬುಡ ಬುಡ್ಕಿ ಬಾಬಾ ಬರೀ
ಬಡ ಬಡಿಸೋದು ಬಿಟ್ಟು
ಒಂದು ಸ್ವಲ್ಪ
ಧ್ಯಾನ ಅಂದರೇನು ಹೇಳೋ?

ಧ್ಯಾನ ನೀ ತಿಳ್ಕೊಂಡಂಗ
ಭಾರೀ ದೊಡ್ಡ ಕಷ್ಟ ಏನಲ್ಲ
ಧ್ಯಾನ ಅಂದರ ತನ್ನ್ನ ಜೋಡೆ
ತಾ ಮಾತಾಡೋದು
ಅಷ್ಟನೋ ಹುಚ್ಚಪ್ಪ || ೨ ||

ನಿನ್ನ ಮಾತ ಕೇಳಿ ನನ್ನ ಜೋಡಿ
ನಾ ಮಾತಾಡಕೋತ ಕೂತರ
ಜನ ನನ್ನ ಹುಚ್ಚ ಅಂತಾರ ಅಷ್ಟ
ಅದಕ ಅಂದ ಅವ
ಅನ್ನಲಿ ಬಿಡೋ
ಜನ ಏನಾರ ಒಂದ ಅನ್ನವರ
ಇದ ಧ್ಯಾನದ ಮೊದಲನೇ ಮೆಟ್ಟಿಲು || ೩ ||

ನೀ ಮೊದಲ ಬಾಯಿ ತಗದ
ಜೋರಾಗಿ ನಿನ್ನ ಜೋಡೆ ನೀ
ಮಾತಾಡೋದ ಕಲಿ
ಸ್ವಲ್ಪ ರೂಢಿ ಆದ ಮ್ಯಾಲ
ಪಿಸು ಮಾತನ್ಯಾಗ ಮಾತಾಡಿದ್ರು
ನೀ ಮಾತಾಡೋದೊ ನಿನಗ ಕೆಳಸ್ಥದ
ಇದ  ಧ್ಯಾನದ ಎರಡನೇ ಮೆಟ್ಟಿಲು  || ೪ ||

ಅದಾದ ಮ್ಯಾಲ ನೀ ಸುಮ್ಮನ
ಕಣ್ಣ ಮುಚ್ಕೊಂಡ ಕೂತ್ರ
ಸಾಕು ನಿನ್ನೊಳಗಿನ ಜೀವ
ನಿನ್ನ ಹತ್ರ ಬರತಾನ
ಒಂದ ಮಾತ ಆಡದೆನೆ
ಒಬ್ಬರಬೊಬ್ಬರಿಗೆ ಅರ್ಥ ಆಗ್ತದ
ಅದ ಧ್ಯಾನ ನೋಡು  || ೪ ||

ನಾ ಧ್ಯಾನ ಸರಿ ಮಾಡಾಕ
ಹತ್ತೀನಿ ಅಂತ ನನಗ
ಹ್ಯೆಂಗ ಗೊತ್ತಾ ಆಗೋದೋ
ಅಂತ ಕೇಳದೆ
ಅದಕಂದ ನಿನ್ನ ಎದ್ಯಾಗಿನ
ಭಾರ ಕಮ್ಮಿ ಆಗಿ ಹಗರ
ಅದರ ನೀ ಧ್ಯಾನ ಸರಿ
ಮಾಡಿ ಅಂತ ತಿಳಕೋ || ೫ ||

 ಬುಡ ಬುಡ್ಕಿ ಬಾಬಾ

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...