Saturday, April 22, 2017

DATA STRUCTURE

ಹೊಸತಾಗಿ  ಸಾಫ್ಟ್‌ವೇರ್ ಇಂಜಿನಿಯರ್ ಆದ
ಸುಧಿಗೆ ಡಾಟಾ ಸ್ಟ್ರಕ್ಚರ್ಗಳ ಗುಂಗು ಹಿಡಿಯಿತಂತೆ
ಎಲ್ಲಿ ನೋಡಿದರೂ ಅವೇ ಕಂಡಾಗ ಹೀಗಾಯಿತಂತೆ || ೧ ||

ರಾಮಾಯಣ ನೋಡುತ್ತಾ ಕುಳಿತ ಅಜ್ಜ
ಹೇಳಿದನಂತೆ ನೋಡೋ ಅಲ್ಲಿ ಹನುಮಂತನ
ಬಾಲ ಹೇಗೆ ಬೆಳೀತಾ ಇದೆ ಎಂದು
ಅದಕೆ  ಸುಧಿ ಅಂದನಂತೆ ಅದು
ಬೆಳೀತಾ ಇದೆ ನಮ್ಮ ಲಿಂಕ್ ಲಿಸ್ಟ್‌ಗಳಂತೆ  ||೨ ||

ಆಟವಾಡುತ್ತಾ ಕುಳಿತ ತಂಗಿ ಕೇಳಿದಳಂತೆ
ಸುಧಿ ಅಣ್ಣಾ ನಾನು ನಿನ್ನೆ ಆಡುತಿದ್ದ
ಆಟಿಗೆ ಈ ಆಟಿಗೆಗಳ ಡಬ್ಬದಲಿ ಸಿಗುತಿಲ್ಲ
ಅದಕೆ ಸುಧಿ ಅಂದನಂತೆ ಅದೊಂದು
ಸ್ಟ್ಯಾಕ್ ಡಾಟಾ ಸ್ಟ್ರಕ್ಚರ್ ಕಣೆ
ಒಂದೊಂದೇ  ತಗೆದು ನೋಡು
ಫರ್ಸ್ಟ್ ಹೋಗಿದ್ದು ಸಿಗುವುದು ಲಾಶ್ಟಿಗೆ || ೩ ||


ಅಪ್ಪ ಅಂದರಂತೆ ನೋಡಲ್ಲಿ ನಿನ್ನ
ಚಿಕ್ಕಪ್ಪನ ಮಗನ ಮದುವೆಯಂತೆ
ಸುಧಿ ನಿನಗೇನಾದರೂ ಗೊತ್ತಾ
ಕುಟುಂಬ ಸಂಸಾರ ಅಂದರೇನಂತೆ
ಅದಕೆ ಇವನಂದನಂತೆ ಅದೊಂದು
ಟ್ರೀ ಡಾಟಾ ಸ್ಟ್ರಕ್ಚರ್ ಅಷ್ಟೇ ಬಿಡಪ್ಪಾ ||೪ ||

ಗೆಳೆಯರೆಲ್ಲ ಸಿನಿಮಾ ಟಿಕೇಟು
ಕೊಳ್ಳಲು ನಿಂತಿದ್ದರಂತೆ ಸಾಲಲ್ಲಿ
ಅದಾಗಲೇ ತನ್ನ ಟಿಕೇಟು ಕೊಂಡ
ಸುಧಿಯನ್ನು ಕಂಡು ಅವರಂದರಂತೆ
ಅದು ಹೇಗೋ ನಿನಗೆ ಸಿಕ್ತು
ಅದಕಂದನಂತೆ ಈ ಸಾಲೊಂದು
ಫೀಫೋ ಡಾಟಾ ಸ್ಟ್ರಕ್ಟ್ರು ಗುರು
ಫರ್ಸ್ಟ್ ಇನ್ ಫರ್ಸ್ಟ್ ಔಟ್ || ೫ ||
 ಬುಡ ಬುಡ್ಕಿ ಬಾಬಾ


No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...