Sunday, April 9, 2017

ಮಗುವಿನ ಚಿತ್ರ

ಪಾತರಗಿತ್ತಿಯ ಬಣ್ಣ ಬಣ್ಣದ
ಮನಮೋಹಕ ಅಂದಕ್ಕೆ ಮನಸೋತು
ಮುಗ್ಧ ಮಗುವೊಂದು
ಓಡಿತು ಅದರ ಹಿಂದೆ ಹಿಂದೆ
ಅದರಂದವನು ಸವಿಯಲು ಹತ್ತಿರದಿಂದ || ೧ ||

ಮಗು ಹತ್ತಿರ ಹೋದಂತೆಲ್ಲ
ಪಾತರಗಿತ್ತಿ  ಹಾರಿ ಹೋಯಿತು ಅತ್ತಿತ್ತ
ಹತ್ತಿರದಿಂದ ನೋಡಲಾಗದೆ
ನಿರಾಸೆಗೊಂಡಿತು ಆ ಮಗು || ೨ ||

ತನ್ನ ನಿರ್ಮಲ ಮನಸಿಂದ
ಗೀಚಿತು ಅಂಕು ಡೊಂಕಾದ 
ಗೆರೆಗಳಿಂದ ಹೂವಿನ ಚಿತ್ರವನು
ತುಂಬಿ ತುಳುಕಿತ್ತು ಬಣ್ಣ ಆ ಚಿತ್ರದಲಿ
ಮಗುವಿನ ಹೃದಯದಂತೆ || ೩ ||

ನೋಡು ನೋಡುತ್ತಲೇ
ಬಂದು ಕುಳಿತಿತು
ಪಾತರಗಿತ್ತಿಯೊಂದು
ಆ ಹೂವಿನ ಮೇಲೆ || ೪ ||
 ಬುಡ ಬುಡ್ಕಿ ಬಾಬಾ

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...