Monday, December 18, 2017

ವಿಚಾರಗಳ ರೈಲು

ವಿಚಾರಗಳ ರೈಲು
ಹಳಿ ತಪ್ಪಿ ಹೋಗುತ್ತದೆ
ಆಗಾಗ ಅತ್ತಿತ್ತ ಅಲಿಯಲು
ಅವರಿವರ ನೋಡಿ ತಿಳಿಯಲು
ತಿಳಿದು ಚಪ್ಪಾಳೆ ಹಾಕಿ
ನೋಡು ನೀನು ಒಬ್ಬನಿದ್ದೀಯಾ
ಎಂದು ಒಂದಿಷ್ಟು ಹಳಿಯಲು || ೧ ||

ಮತ್ತೆ ಮರಳಿ ಬರುತ್ತದೆ
ಅದೇ ಹಳೇ ಹಳಿಗೆ
ಗೊತ್ತಿಲ್ಲದ ದಾರಿ
ಪ್ರತಿ ಕ್ಷಣ
ಬದಲಾಗುವ ಮಾರ್ಗಸೂಚಿಗಳು
ಮೈಲಿಗಲ್ಲುಗಳಿಲ್ಲ
ತಂಗುದಾಣಗಳಿಲ್ಲ
ಎಲ್ಲಿಯೂ ನಿಲ್ಲುವಂತಿಲ್ಲ
ನಿಂತರೂ ಇಳಿಯುವಂತಿಲ್ಲ || ೨ ||

ದೂರದ ದಾರಿ
ದಣಿಯುವಂತಿಲ್ಲ
ಗೊಣಗುವಂತಿಲ್ಲ
ನಾ ಒಂಟಿ ಎಂದು
ಹೇಳುವಂತಿಲ್ಲ
ಪಟ್ಟು ತಪ್ಪಿ
ನೆಲಕ್ಕೆ ಬಿದ್ದು
ಮಣ್ಣು ಮುಕ್ಕಿದರೂ
ಮೀಸೆ ಮಣ್ಣಾಗದಂತೆ
ಮತ್ತೆ ಮತ್ತೆ ಎದ್ದು
ಕಣ್ಣಿಗೆ ಕಾಣದ
ಹಳಿ ಮೇಲೆ
ಅನವರತ ಪಯಣ  || ೩ ||
 ಬುಡ ಬುಡ್ಕಿ ಬಾಬಾ

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...