Saturday, May 14, 2016

ಬದಲಿಸಿಲಾಗದು ಯಾರನ್ನೂ

ನಾನು ಬದಲಿಸಿ ಬಿಡುವೆ
ನಾನು ಬದಲಿಸಿ ಬಿಡುವೆ ಎಂಬ ಭ್ರಮೆ ಬೇಡ
ಬದಲಿಸಲು ಸಾಧ್ಯವಿಲ್ಲ ನೀನೆಂದುಕೊಂಡಂತೆ
ತಂದೆ ತಾಯಿ ಹೆಂಡತಿ ಮಕ್ಕಳು ಬಂಧು ಬಳಗ
ಗೆಳೆಯ ಸಹದ್ಯೋಗಿ ಯಾರನ್ನೂ || ೧ ||

ಗಾಳಿಗೆ ಗುದ್ದಿ ಮೈ ನೋಯಿಸಿಕೊಂಡಂತೆ  ವ್ಯರ್ಥ ಆ ಪ್ರಯತ್ನ
ಬದಲಿಸಿಲಾಗದು ಬಲವಂತವಾಗಿ ಯಾರನ್ನೂ
ಅಂತರಿಕವಾಗಿರುವ ಅಂಧಕಾರವನು ತಾನೇ ಕಂಡು
ಹಣತೆ ಎಣ್ಣೆ ಬತ್ತಿ ಜೋಡಿಸಿಕೊಂದು  ಕಾದವನ
ಮನದ ದೀಪ ಪ್ರಜ್ವಲಿಸಬಹುದೇ ಹೊರತು
ಹೊರಗಿನ ದೀಪ ಒಳಗಿಡಲಾಗದು || ೨ ||

ನೋಡಿ ನಾನೇ ಬದಲಿಸಿದೆ ಎಂದು ನೀನೆಂದುಕೊಂಡಿದ್ದರೆ
ಅದೊಂದು ಬಿಳಿ ಕೂದಲಿಗೆ ಹಾಕಿದ ಕರಿ ಬಣ್ಣದಂತೆ
ಹೊಂದದಿದ್ದರೂ ಹೇಗೋ ಅಷ್ಟಿಷ್ಟು ಅಂದ ಹೆಚ್ಚಿಸಿ
ಕೆಲ ಸಮಯದಲ್ಲೇ ಮಾಸಿ ತಲೆಯಲ್ಲ ಕರಿ ಬಿಳಿಯ
ತೇಪೆಯಂತಾಗಿ ಕೂರೂಪಿಯಾಗುವದೇ ಹೊರತು
ಶಾಶ್ವತ ಸುರುಪಿಯಾಗಲಾರದು || ೩ ||

2 comments:

  1. "ಹೊರಗಿನ ದೀಪ ಒಳಗಿಡಲಾಗದು" ಎಂಥ ಮನನ ಯೋಗ್ಯ! ಒಳ್ಳೆಯ ಕವಿತೆ.

    ReplyDelete
  2. ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್

    ReplyDelete

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...