Tuesday, April 24, 2018

ನಾ ಮುಟ್ಟಿದೆಲ್ಲ

ನಾ ಮುಟ್ಟಿದ್ದೆಲ್ಲಾ ಮಣ್ಣು
ನಾ ಮುಟ್ಟಿದ್ದೆಲ್ಲಾ ಮಣ್ಣು
ನಾನಿನ್ನೇನು ಮುಟ್ಟುವುದಿಲ್ಲ
ಎಂದು ಕೈ ಚೆಲ್ಲಿ
ಕುಳಿತರೇನು ಬಂತು
ಓ ಮರುಳೆ|| ೧ ||

ಏಳು ಎದ್ದೇಳು
ಮುಟ್ಟು ಮುಟ್ಟುತ್ತಲೇ ಇರು
ಆಗಲಿ ಬಿಡು ಅದೆಲ್ಲ ಮಣ್ಣು
ಆ ಮಣ್ಣಲ್ಲೇ ಬಿತ್ತು
ನಿನ್ನ ಕನಸುಗಳ ಬೀಜ
ಮಾಡು ಸಸಿಗಳ ಆರೈಕೆ
ಕೀಳು ಕಳೆ
ನಡೆಯಲಿ ನಿರಂತರ
ಕರ್ಮ ಯೋಗ
ಕೈ ಸೋಲದೆ || ೨ ||

ಬೆಳೆವುದಾಗ ಚಿನ್ನದಂತ ಬೆಳೆ
ಆಗುವುದು ನಿನಗೆ ಆಗ ಅಚ್ಚರಿ
ನೀನೇ ಅನ್ನುವೆ ಆಗ
ನಾ ಮುಟ್ಟಿದೆಲ್ಲ ಚಿನ್ನ
ನಾ ಮುಟ್ಟಿದೆಲ್ಲ ಚಿನ್ನ || ೩ ||
ಬುಡ ಬುಡ್ಕಿ ಬಾಬಾ

4 comments:

  1. Great and most inspiring. I don't know where u will get these thoughts. I wondered even now how productive u will be. Please also let us know Ur daily thoughts come to Ur mind from beginning of day. How u have deciplined yourself? Such that you have become effective, so that we can achieve or implement in our life's.

    ReplyDelete
    Replies
    1. Neeraj: Thanks for your kind words. Developing self awareness is key to everything. Wishing you all the best.

      Delete

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...