Sunday, May 6, 2018

ಹಳೆ ಹಾದಿ

ಹಳೆ ಹಾದಿಯೇ ಬೇಕು ನಮಗೆ ನಿಮಗೆಲ್ಲ
ಹಳೆ ಹಾದಿ ಕೊಡೊ  ಖಾತ್ರಿ ಹೊಸದರಲ್ಲಿಲ್ಲ 
ಹಳೆ ಹಾದಿ ಹಾಕೋಲ್ಲ ಹೊಸ ಪ್ರಶ್ನೆಯನ್ನ
ಹಳೆ ಹಾದಿ  ತುಳಿವಾಗ ತಲೆಗೆ ಬಿಸಿಯಿಲ್ಲ
ಹಳೆ ಹಾದಿ ನಡೆದಾಗ ದಾರಿ ತಪ್ಪೊಲ್ಲ 
ಹಳೆ ಹಾದಿ ತಪ್ಪಿದರೂ ಅದು ನಮ್ಮ ತಪ್ಪಲ್ಲ
ಹಳೆ ಹಾದಿ ಹೋದಾಗ  ನಾವು ಹೊಣೆಯಲ್ಲ
ಹಳೆ ಹಾದಿ ತಲುಪುವುದು ಮತ್ತದೇ ಗಮ್ಯ
ಆ ಗಮ್ಯ ನೋಡುತ್ತಾ ಅನಬಹುದು
ನಾವೆಷ್ಟು  ಧನ್ಯ ನಾವೆಷ್ಟು ಧನ್ಯ
 ಬುಡ ಬುಡ್ಕಿ ಬಾಬಾ

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...