Tuesday, January 26, 2016

ಬಾಲ್ಯದಲಿ ಅನಿಸಿತ್ತು

ಬಾಲ್ಯದಲಿ ಅನಿಸಿತ್ತು
ಮುಂದೆ
ಹೋದಂತೆ ಆಗುತ್ತದೆ
ಜೀವನ  ಸರಳ ಹಾಗೂ ಅರ್ಥ ಎಂದು
ಬೆಳೆದಂತೆ ತಿಳಿಯಿತು
ಜೀವನವಾಗುತ್ತದೆ
ಕಠಿಣ ಹಾಗೂ ಜಟಿಲ ಎಂದು || ೧ ||

ಬಾಲ್ಯದಲಿ ಅನಿಸಿತ್ತು
ಮುಂದೆ
ಹೋದಂತೆ ಸಿಗುತ್ತದೆ
ಜೀವನಕ್ಕೊಂದು ಪಠ್ಯ ಎಂದು
ಬೆಳೆದಂತೆ ತಿಳಿಯಿತು
ಜೀವನವೊಂದು
ಪಠ್ಯವಿಲ್ಲದ ಪರೀಕ್ಷೆ ಎಂದು || ೨ ||


ಬಾಲ್ಯದಲಿ ಅನಿಸಿತ್ತು
ಮುಂದೆ
ಹೋದಂತೆ ಸಾಗುತ್ತದೆ
ಜೀವನ ಶಾಶ್ವತತೆ ಹಾಗೂ ನಿಶ್ಚಿತತೆಯ ಕಡೆಗೆ ಎಂದು
ಬೆಳೆದಂತೆ ತಿಳಿಯಿತು
ಜೀವನ ಕೂಡಿದೆ
ಕ್ಷಣಿಕತೆ ಹಾಗೂ ಅನಿಶ್ಚಿತತೆಯಿಂದ ಎಂದು || ೩ ||


ಬಾಲ್ಯದಲಿ ಅನಿಸಿತ್ತು
ಮುಂದೆ
ಹೋದಂತೆ ಆಗುತ್ತದೆ
ಜೀವನದಲ್ಲಿ ಕನಸುಗಳೆಲ್ಲ ನನಸು ಎಂದು
ಬೆಳೆದಂತೆ ತಿಳಿಯಿತು
ಜೀವನಕ್ಕೆನನಸಾಗದ
ಕನಸುಗಳೇ ಪ್ರೇರಣೆ ಎಂದು || ೪ ||




2 comments:

  1. ಬಾಲ್ಯದ ಅನಿಸಿಕೆಗಳ ಸರಳತೆಗೆ ವಾಸ್ತವದ ಒರೆಹಚ್ಚಿದ ರೀತಿ ಸುಂದರ. ಕೊನೆಯ 'ಜೀವನಕ್ಕೆ ನನಸಾಗದ ಕನಸುಗಳೇ ಪ್ರೇರಣೆ' ನಿಜಕ್ಕೂ ಅದ್ಭುತ ಸಾಲುಗಳು.

    ReplyDelete
    Replies
    1. ಧನ್ಯವಾದಗಳು. ನಾನು ಕಾವ್ಯ ಪ್ರೇರಣೆ ಪಡೆದದ್ದು ತಮ್ಮ ಕಾವ್ಯಗಳಿಂದ.

      Delete

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...