Thursday, July 21, 2016

ಗಾಳಿಗಿಂತ ಹಗುರ

ಕೇಳ್ರಪ್ಪೊ ಕೇಳ್ರಿ
ಗಾಳಿಗಿಂತ ಹಗುರವಾದ ಮತ್ತೊಂದು
ಹೊಸ ವಸ್ತುವಿನ ಆವಿಷ್ಕಾರವಾಗಿದೆಯಂತೆ
ಅದು ಕೆಲವರ ಮಾತಂತೆ
ಮಾತು ಗಾಳಿಗಿಂತ ಹಗುರ ಮಾಡುವುದು
ಅತಿ ಸುಲಭವಂತೆ || ೧ ||

ಆಡಿದ ಮಾತಿಗೆ  ಮಾಡುವ ಕೃತಿಗೆ
ಯಾವುದೇ ಸಂಬಂಧವಿಟ್ಟುಕೊಳ್ಳದೆ
ಆಡುವುದೊಂದು ಮಾಡುವುದೊಂದು
ಮಾಡಿ ಮಾಡಿ  ಮಾತನ್ನು
ಗಾಳಿಗಿಂತ ಹಗುರ
ಮಾಡಬಹುದಂತೆ || ೨ ||

ಇನ್ನೂ ಬಲುನೂಗಳಿಗೆ ಇದನೆ
ತುಂಬಿ ಹಾರಿ ಬಿಡುವ ಹೊಸ
ಬಲೂನು ಭಾಗ್ಯ  ಯೋಜನೆ
ಕೂಡ ಇದೆಯಂತೆ
ಆಸಕ್ತಿ ಇರುವವವರು ಕೂಡಲೇ
ನೋಂದಣೆ ಮಾಡಿಕೊಂಡು
ಭಾಗವಹಿಸಬೇಕಂತೆ || ೩ ||
ಬುಡ ಬುಡ್ಕಿ ಬಾಬಾ

3 comments:

  1. ನಮ್ಮ ರಾಜ್ಯ, ದೇಶಗಳನ್ನೇ ಹಗುರ ಮಾಡುವ ಮಂದಿ ದಂಡಿ ಇದ್ದಾರೆ ಇಲ್ಲಿ!

    ReplyDelete
    Replies
    1. ಸರಿಯಾಗಿ ಹೇಳಿದಿರಿ ಸಾರ್

      Delete
    2. ಸರಿಯಾಗಿ ಹೇಳಿದಿರಿ ಸಾರ್

      Delete

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...