Sunday, August 28, 2016

ಸಮಯದ ಕೊಲೆ

ಅತಿ ದೂರದ ಭವಿಷ್ಯತ್ತಿನ
ಬಗ್ಗೆ ಇಂದೇ ವಿವರವಾಗಿ
ಯೋಜನೆಗಳ ಮಾಡುವುದು
ಇಂದೇ ಹಾಕಿದ ಬೀಜದ
ಮರದ ಹಣ್ಣು ಕತ್ತರಿಸಲು
ಎಂತಹ ಕತ್ತಿ ಬೇಕೆಂದು
ತಲೆ ಕೆಡಿಸಿಕೊಂಡಂತೆ
ಬೇಕಿದ್ದರೆ ಹಣ್ಣು ತಿನ್ನುವ
ಕನಸು ಕಾಣಿ ಆದರೆ
ಅಕಾಲಿಕ ಮಾಡುವ
ಯೋಜನೆ ಅದಕೆ
ವಿನಿಯೋಗಿಸಿದ
ಸಮಯದ ಕೊಲೆ

2 comments:

  1. ಅಕಾಲಿಕ ಯೋಚನೆ, ಯೋಜನೆಗಳು ಸಮಯದ ಕೊಲೆ..! ಖಂಡಿತ.

    ReplyDelete
  2. ಒಬ್ಬ ಅಭ್ಯರ್ಥಿಯ ಸಂದರ್ಶನದಲ್ಲಿದ್ದಾಗ ಆತನ ಪ್ರಶ್ನೆಗಳಿಂದ ಸ್ಪೂರ್ತಿ ಪಡೆದದ್ದು. ಧನ್ಯವಾದ.

    ReplyDelete

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...